More

    ದೇವರಿಗೆ ಕಂಕಣ ಕಟ್ಟುವ ಆಚರಣೆ

    ಪರಶುರಾಮಪುರ: ಪುರ‌್ಲೆಹಳ್ಳಿಯ ವಸಲುದಿನ್ನೆಯಲ್ಲಿ ನಡೆಯುತ್ತಿರುವ ಕ್ಯಾತಪ್ಪನ ಪರಿಷೆ ಅಂಗವಾಗಿ ಚನ್ನಮ್ಮನಾಗತಿಹಳ್ಳಿಯ ಕೇತೇದೇವರ ದೇವಸ್ಥಾನದಲ್ಲಿ ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು.

    ಚಿತ್ರದುರ್ಗದ ಯಾದವ ಮಠದ ಶ್ರೀ ಕೃಷ್ಣಯಾದವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗುಡಿಕಟ್ಟೆಯ ಅಣ್ಣ-ತಮ್ಮಂದಿರು ತಮ್ಮ ಮನೆಗಳಲ್ಲಿದ್ದ ಹುರುಳಿ-ನವಣೆ ಧಾನ್ಯಗಳಿಂದ ಹುರುಳಿ ಕೈತೊಳೆದುಕೊಂಡು ದೇವರಿಗೆ ಕಂಕಣ ಕಟ್ಟಿದರು.

    ವರ್ಷಕ್ಕೊಮ್ಮೆ ತಮ್ಮ ಕುಲದೇವರ ಉತ್ಸವ ನಡೆಸಿ ಕಳ್ಳೆ ಗುಡಿ ನಿರ್ಮಿಸಿ ಅದರೊಳಗೆ ಕುಲದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ 15-20 ದಿನ ಧಾರ್ಮಿಕ ಕಾರ್ಯ ನಡೆಸುವುದು ಇಲ್ಲಿನ ವಿಶೇಷವಾಗಿದೆ. ಗುಡಿಕಟ್ಟೆಯ ಗೌಡ, ಯಜಮಾನ, ಪೂಜಾರಿಗಳು, ಹನ್ನೆರೆಡು ಕೈವಾಡಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts