ತಂತ್ರಜ್ಞಾನ ಜಗತ್ತಿಗೆ ಮಕ್ಕಳನ್ನು ಸಜ್ಜುಗೊಳಿಸಿ

ಪರಶುರಾಮಪುರ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಭವಿಷ್ಯ ಕಂಡುಕೊಳ್ಳಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು ಎಂದು ತಾಲೂಕು ಶಿಕ್ಷಣ ೌಂಡೇಷನ್ ಸಂಯೋಜಕ ಪ್ರಭಾಕರ ತಿಳಿಸಿದರು.

ಶಿಕ್ಷಣ ಇಲಾಖೆ, ತಾಲೂಕು ಶಿಕ್ಷಣ ೌಂಡೇಷನ್‌ನಿಂದ ಪಿ.ಮಹದೇವಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಯೋಜನಾ ಪುಸ್ತಕ ವಿತರಣೆ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಕೌಶಲ ಗಳಿಸಲು ಯೋಜನೆ ಆಧಾರಿತ ಪುಸ್ತಕ ಸಹಕಾರಿ ಆಗಲಿದ್ದು, ಇದನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದರು.

ಸಂವಹನ, ಸಹಯೋಗ, ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ ವೃದ್ಧಿಗೆ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಯೋಜನೆ ಸಿದ್ಧಪಡಿಸಲಾಗಿದೆ. ಈ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ಮಕ್ಕಳ ವ್ಯಕ್ತಿತ್ವ ಹಾಗೂ ಬೌದ್ಧಿಕ ಮಟ್ಟ ವಿಕಸನವಾಗುತ್ತದೆ ಎಂದು ತಿಳಿಸಿದರು.

ತಾಲೂಕು ಮೆಂಟರ್ ಶಿವಕುಮಾರ ಮಾತನಾಡಿ, ಕೌಶಲ ಕಲಿಕೆ ಅತ್ಯಂತ ಸರಳವಾಗಿದೆ. ಭಾಷೆ ಹಾಗೂ ಗಣಿತ ಶಿಕ್ಷಕರು ಸ್ಪಲ್ಪ ಮಾರ್ಗದರ್ಶನ ಮಾಡಿದರೆ, ಮಕ್ಕಳು ಎಲ್ಲ ಚಟುವಟಿಕೆಯನ್ನು ಚಾಚೂ ತಪ್ಪದೇ ಮಾಡುವುದರಲ್ಲಿ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

4ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಯೋಜನೆ ಪುಸ್ತಕ ವಿತರಿಸಲಾಯಿತು. ಮುಖ್ಯಶಿಕ್ಷಕ ದಾಸಪ್ಪ, ಸಂಪನ್ಮೂಲ ವ್ಯಕ್ತಿಗಳಾದ ಶಿವಕುಮಾರ, ಮಾರುತಿ, ವೀರೇಶ, ಶಿಕ್ಷಕರಾದ ವೀರಭದ್ರಪ್ಪ, ನಾಗರಾಜು, ಹೇಮಲತಾ, ಮಹೇಶ, ಚಿತ್ತಯ್ಯ ಇತರರಿದ್ದರು.

Leave a Reply

Your email address will not be published. Required fields are marked *