ಪರಶುರಾಮಪುರ ತಾಲೂಕು ಕೇಂದ್ರ ಖಚಿತ

ಪರಶುರಾಮಪುರ: ಪ್ರತಿಭಾವಂತರನ್ನು ಪುರಸ್ಕರಿಸುವುದರಿಂದ ಇತರೆ ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆಗೆ ಪ್ರೇರಣೆ ದೊರೆಯುತ್ತದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ಗ್ರಾಮದ ಹಳೆ ವಿದ್ಯಾರ್ಥಿಗಳ ಸಂಘದಿಂದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಆಂಗ್ಲ ಮಾಧ್ಯಮ ಶಾಲೆಗೆ ಚಾಲನೆ ಹಾಗೂ ಕೆಪಿಸಿ ಶಾಲೆ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಪ್ರತಿಭೆ ಸಾಧಕರ ಸ್ವತ್ತು ಎಂದರು.

ಪರಶುರಾಮಪುರವನ್ನು ತಾಲೂಕು ಕೇಂದ್ರವಾಗಿ ಘೋಷಿಸಲು ಸಿಎಂ ಕುಮಾರಸ್ವಾಮಿ ಸಮ್ಮತಿ ಸೂಚಿಸಿದ್ದಾರೆ. ಹೊಸ ತಾಲೂಕುಗಳ ಘೋಷಣೆ ಪಟ್ಟಿಯಲ್ಲಿ ಸೇರಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಮುಖಂಡ ಸೂರನಹಳ್ಳಿ ಶ್ರೀನಿವಾಸ ಮಾತನಾಡಿ, ಹೋಬಳಿಯನ್ನು ತಾಲೂಕು ಕೇಂದ್ರವಾಗಿಲು ಪಕ್ಷಬೇಧ ಮರೆತು ಎಲ್ಲರೂ ಒಂದಾಗಬೇಕು ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಪ್ರತಿಭೆಗಳಿದ್ದು, ಅವುಗಳನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು. ತುಂಗಭದ್ರಾ ಹಿನ್ನೀರನ್ನು ಚಳ್ಳಕೆರೆ, ಪರಶುರಾಮಪುರ ಮತ್ತು ಪಾವಗಡಕ್ಕೆ ಕುಡಿವ ನೀರಿಗಾಗಿ ತರುವ ಯೋಜನೆ ಪ್ರಗತಿಯಲ್ಲಿದೆ ಎಂದು ಜಿಪಂ ಸದಸ್ಯ ಟಿ.ಮುತ್ತುರಾಜು ತಿಳಿಸಿದರು.

ಚಂದ್ರಿಕಾ ಶ್ರೀನಿವಾಸ, ತಾಪಂ ಸದಸ್ಯೆ ವಿಜಯಲಕ್ಷ್ಮೀ, ಗ್ರಾಪಂ ಅಧ್ಯಕ್ಷ ಎಂ.ಆರ್.ರುದ್ರೇಶ, ಎಪಿಎಂಸಿ ಸದಸ್ಯ ಚಿಕ್ಕಣ್ಣ ಇತರರಿದ್ದರು.

Leave a Reply

Your email address will not be published. Required fields are marked *