ಪರಶುರಾಮಪುರ: 12 ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿ ಇಂದಿಗೂ ಪ್ರಸ್ತುತವಾಗಿದೆ ಎಂದು ಶಿರಸಂಗಿ ಮುರುಘಾ ಮಠದ ಶ್ರೀ ಬಸವ ಮಹಾಂತ ಸ್ವಾಮೀಜಿ ತಿಳಿಸಿದರು.
ಸಮೀಪದ ಕಾಮಸಮುದ್ರದ ತಾತಯ್ಯನ ಮಠದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಅಸಂಖ್ಯ ಪ್ರಮಥ ಗಣಮೇಳ, ಸರ್ವಶರಣರ ಸಮ್ಮೇಳನದ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ನಾಗಗೊಂಡನಹಳ್ಳಿ ಚಿಲುಮೇರುದ್ರಸ್ವಾಮಿ ಮಠದ ಶ್ರೀ ಬಸವಕಿರಣ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ಅಂದಿನ ಕಾಲದಲ್ಲೇ ಜಾತಿ, ವರ್ಗ ರಹಿತ ಸಮಾಜ ಕಟ್ಟಿದ್ದಾರೆ. ಮಾನವ ಹಕ್ಕುಗಳಿಗಾಗಿಯೇ ನಡೆದಂತಹ ಹೋರಾಟವೇ ಕಲ್ಯಾಣ ಕ್ರಾಂತಿ ಎಂದ ಅವರು, ಬಸವಾದಿ ಶರಣರ ತತ್ವಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡರೆ ದೇಶದಲ್ಲಿ ಶಾಂತಿ ಸ್ಥಾಪನೆಯಾಗುತ್ತದೆ ಎಂದರು.
ಜಾಜೂರು ಜಿಪಂ ಕ್ಷೇತ್ರ ವ್ಯಾಪ್ತಿಯ ಕಾಮಸಮುದ್ರ, ನಾಗಗೊಂಡನಹಳ್ಳಿ, ಹರವಿಗೊಂಡನಹಳ್ಳಿ, ಹಾಲಗೊಂಡನಹಳ್ಳಿ ಮತ್ತಿತರೆಡೆ ಅಸಂಖ್ಯ ಪ್ರಥಮ ಗಣಮೇಳದ ಕರಪತ್ರಗಳನ್ನು ಹಂಚಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು.