ಪರಶುರಾಮಪುರ: ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿ ಸರಳ ಬೋಧನೆ ಉತ್ತಮ ಪರಿಣಾಮ ನೀಡುತ್ತದೆ ಎಂದು ಬಿಇಒ ಸಿ.ಎಸ್. ವೆಂಕಟೇಶಪ್ಪ ತಿಳಿಸಿದರು.
ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಶುಕ್ರವಾರ ಆಯೋಜಿಸಿದ್ದ ಹೋಬಳಿ ಪ್ರಾಥಮಿಕ ಶಾಲೆಗಳ ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಶಿಕ್ಷಕರಿಗೆ ವೃತ್ತಿಪರತೆ ಸಮಾಲೋಚನಾ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಧುನಿಕ ಪೀಳಿಗೆಗೆ ಮಾರ್ಗದರ್ಶನ ನೀಡಲು ಸರ್ಕಾರ ಹೊಸ ಶಿಕ್ಷಣ ನೀತಿ ಜಾರಿಗೊಳಿಸಲಿದೆ. ಶಿಕ್ಷಕರು ಅದಕ್ಕೆ ಸಿದ್ಧರಾಗಬೇಕು ಎಂದರು.
ಇಸಿಒ ಗಿರೀಶಬಾಬು ಮಾತನಾಡಿ, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ಪ್ರತಿ ಸಹಿಪ್ರಾ ಶಾಲೆಗಳಿಗೆ ತಲಾ 5 ಸಾವಿರ ರೂ. ಅನುದಾನ ನೀಡಿದೆ. ಇದನ್ನು ಬಳಸಿ ಮಕ್ಕಳಿಗೆ ವೈಜ್ಞಾನಿಕ ಚಟುವಟಿಕೆ ಆಯೋಜಿಸಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದು ತಿಳಿಸಿದರು.
ಸಂಪನ್ಮೂಲ ಶಿಕ್ಷಕರಾದ ನರಸಿಂಹಮೂರ್ತಿ, ಶಿಕ್ಷಣ ಫೌಂಡೇಷನ್ನ ಮೆಂಟರ್ ಶಿವಕುಮಾರ ತರಬೇತಿ ನೀಡಿದರು.
ಕೆಪಿಎಸ್ ಪ್ರಾಚಾರ್ಯ ಸುಗೇಂದ್ರ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಡಿ.ಟಿ.ಹನುಮಂತರಾಯ, ಕೆ.ಒ.ರಾಜಣ್ಣ, ತಾಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕ ಕೆ.ಬಸವರಾಜು, ಮುಖ್ಯಶಿಕ್ಷಕರಾದ ಮೂಡಲಗಿರಿಯಪ್ಪ, ಚಂದ್ರಣ್ಣ, ರಾಮಕೃಷ್ಣಪ್ಪ, ಬಿಆರ್ಪಿ ಪ್ರಸನ್ನ ಮಂಡೇಲಾ ಇತರರಿದ್ದರು.