ಪರಶುರಾಮಪುರ: ಸಮೀಪದ ನಾಗಗೊಂಡನಹಳ್ಳಿ ಹೊರ ವಲಯದ ವೇದಾವತಿ ನದಿ ತೀರದ ಶ್ರೀ ಚೆಲುಮೇರುದ್ರಸ್ವಾಮಿ ಮಠದಲ್ಲಿ ಫೆ.2ರಿಂದ 7ರ ವರೆಗೆ ರಥೋತ್ಸವ, ದನಗಳ ಜಾತ್ರೆ ನಡೆಯಲಿದೆ.
ಜಾಜೂರು, ನಾಗಗೊಂಡನಹಳ್ಳಿ, ಹರವಿಗೊಂಡನಹಳ್ಳಿ, ಕಾಮಸಮುದ್ರ, ಹಾಲಗೊಂಡನಹಳ್ಳಿ ಸೇರಿ ವಿವಿಧ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಲಿದ್ದು, ಗಂಗಾಪೂಜೆ, ಗದ್ದುಗೆ ಪೂಜೆ ಮತ್ತಿತರ ಧಾರ್ಮಿಕ ಕಾರ್ಯ ನೆರವೇರಲಿವೆ.
ಶ್ರೀ ಶಿವಮೂರ್ತಿ ಮುರುಘಾ ಶರಣರು, ಬಸವ ಕಿರಣ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಫೆ.2-ಗಂಗಾಪೂಜೆ, ರಥಕ್ಕೆ ತೈಲಾಭೀಷೇಕ, 3-ಹಾಲಗೊಂಡನಹಳ್ಳಿ ಭಕ್ತರಿಂದ ಮಹಾ ರುದ್ರಾಭಿಷೇಕ, 4-ನಾಗಗೊಂಡನಹಳ್ಳಿ ಭಕ್ತರಿಂದ ರಥೋತ್ಸವ, 5-ಹರವಿಗೊಂಡನಹಳ್ಳಿ ಭಕ್ತರಿಂದ ಹೂವಿನಪಲ್ಲಕ್ಕಿ ಉತ್ಸವ, 6-ಚಕ್ಕೆ ಭಜನೆ ನಾಟಕ ಪ್ರದರ್ಶನ, ಫೆ.7ರಂದು ಮಹಾಮಂಗಳಾರತಿ, ತೀರ್ಥಪ್ರಸಾದ, ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಲಾಗಿದೆ ಎಂದು ಮಠದ ಟ್ರಸ್ಟ್ ಪ್ರಕಟಣೆ ತಿಳಿಸಿದೆ.
ವಿಶಿಷ್ಟ ಆಚರಣೆ ಮೂಲಕ ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದಿರುವ ಉತ್ಸವಕ್ಕೆ ಭಕ್ತರು ಎತ್ತಿನಗಾಡಿಗಳಲ್ಲಿ ಕುಟುಂಬ ಸಮೇತರಾಗಿ ಆಗಮಿಸುತ್ತಾರೆ. ಜಾತ್ರೆಗೆ ಆಗಮಿಸಿ ಕ್ಷೇತ್ರದಲ್ಲಿ ಒಂದು ರಾತ್ರಿ ತಂಗಿ ಹೋದರೆ ಕಷ್ಟಗಳು ದೂರಾಗುತ್ತವೆ ನಂಬಿಕೆ ಭಕ್ತರಲ್ಲಿದೆ.