ಗಣಿತ ಬದುಕಿನ ಅವಿಭಾಜ್ಯ ಅಂಗ

ಪರಶುರಾಮಪುರ: ಮಕ್ಕಳಿಗೆ ಪಠ್ಯ ವಿಷಯ ಮನನ ಮಾಡಲು ಪ್ರೇರಣಾ ಕಾರ್ಯಕ್ರಮ ಸಹಕಾರಿ ಎಂದು ಪರಶುರಾಮಪುರ ಬ್ಲಾಕ್ ಶಿಕ್ಷಣ ಫೌಂಡೇಷನ್ ಸಂಯೋಜಕ ಶಿವಮೂರ್ತಿ ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಣ ಫೌಂಡೇಷನ್ ಸಹಯೋಗದಲ್ಲಿ 4ರಿಂದ 7ನೇ ತರಗತಿ ಮಕ್ಕಳಿಗೆ ಹುಳ್ಳಿಕಟ್ಟೆ ಸ.ಹಿ.ಪ್ರಾ. ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಗಣಿತ ಪರೀಕ್ಷೆಯಲ್ಲಿ ಮಾತನಾಡಿದರು.

ಬದುಕಿನ ಪ್ರತಿ ಸ್ಥರದಲ್ಲೂ ಗಣಿತದ ಅಗತ್ಯವಿದೆ. ಈ ವಿಷಯದಲ್ಲಿ ಹಿಂದುಳಿದ ಮಕ್ಕಳನ್ನು ಶಿಕ್ಷಣದ ಮುನ್ನೆಲೆಗೆ ತರಲು ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಕ್ಲಾಪ್ ಪರೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಮುಖ್ಯಶಿಕ್ಷಕ ಸೋಮಶೇಖರ ಮಾತನಾಡಿ, ‘ಕ್ಲಾಪ್ ಪರೀಕ್ಷೆ’ ಗಣಿತದ ಮೂಲ ಪರಿಕಲ್ಪನೆಗಳ ಪರಿಚಯ ಹಾಗೂ ಮಾದರಿ ಗುರುತಿಸಲು ಸರಳ ವಿಧಾನ ಎಂದರು.

ಶಿಕ್ಷಣ ಫೌಂಡೇಷನ್‌ನ ಸಂಪನ್ಮೂಲ ವ್ಯಕ್ತಿ ಶಿವಕುಮಾರ, ಶಿಕ್ಷಕರಾದ ಹನುಮಂತರಾಯ, ಅಂಜಿನಪ್ಪ ಮಲ್ಲಿಕಾರ್ಜುನ ಇತರರಿದ್ದರು.

Leave a Reply

Your email address will not be published. Required fields are marked *