ಹತ್ತಿ ಬೆಳೆದು ಲಾಭ ಕಂಡ ರೈತ ದಂಪತಿ

parasuramapura-cotton-crop-profit-farmers-couples

ಪರಶುರಾಮಪುರ: ಕೃಷಿ ತಜ್ಞರ ಸಲಹೆ ಪಡೆದು ಇಲ್ಲಿನ ವೇದಾವತಿ ನದಿ ಪಕ್ಕದ 12 ಎಕರೆ ಜಮೀನಿನಲ್ಲಿ ಹತ್ತಿ ಬಿತ್ತನೆ ಮಾಡಿದ್ದ ರೈತ ದಂಪತಿ ಲಕ್ಷಾಂತರ ರೂಪಾಯಿ ಆದಾಯ ಗಳಿಸಿದ್ದಾರೆ.

ಕೋಟೀಶ್ವರರಾವ್-ಪದ್ಮಾವತಿ ದಂಪತಿ ತಮ್ಮ ಎರೆ ಜಮೀನಿನಲ್ಲಿ ಹೈಬ್ರಿಡ್ ತಳಿಯ ಒಂಬತ್ತು ಕೆಜಿ ಹತ್ತಿ ಬೀಜ ಬಿತ್ತನೆ ಮಾಡಿದ್ದಾರೆ. ಒಂದರಿಂದ ಮತ್ತೊಂದು ಬೀಜಕ್ಕೆ ಎರಡು ಅಡಿ, ಒಂದು ಸಾಲಿನಿಂದ ಮತ್ತೊಂದು ಸಾಲಿಗೆ ಐದು ಅಡಿ ಅಂತರ ಕಾಪಾಡಿದ್ದು, ಗಿಡಗಳು ಸಮೃದ್ಧವಾಗಿ ಬೆಳೆದಿವೆ.

450 ಗ್ರಾಂನ ಒಂದು ಪಾಕೆಟ್ ಹತ್ತಿ ಬೀಜಕ್ಕೆ 730 ರೂ. ಬೆಲೆಯಿದ್ದು, 22 ಪಾಕೆಟ್ ಖರೀದಿಸಿದ್ದಾರೆ, ಗೊಬ್ಬರ, ಕಾರ್ಮಿಕರ ಕೂಲಿ, ರಾಸಾಯನಿಕ ಗೊಬ್ಬರ, ಲಘು ಪೋಷಕಾಂಶಗಳಿಗೆ, ಡ್ರಿಪ್‌ಸೆಟ್‌ಗೆ 6 ಲಕ್ಷ ರೂ. ವೆಚ್ಚವಾಗಿದೆ. ಕಪ್ಪುಭೂಮಿಗೆ ಅಗತ್ಯವಾದ ಮೆಗ್ನೀಷಿಯಂ, ಕ್ಯಾಲ್ಸಿಯಂ ಸೇರಿ ವಿವಿಧ ಪೋಷಕಾಂಶ ನೀಡಿ ಸಸಿಗಳ ಪಾಲನೆ ಮಾಡಿದ್ದಾರೆ. ಇದರಿಂದ ಮೊದಲ ಬೀಡಿನಲ್ಲಿ 200 ಕ್ವಿಂಟಾಲ್ ಹತ್ತಿ ಬಂದಿದೆ. ಒಂದು ಕ್ವಿಂಟಾಲ್‌ಗೆ ಆರು ಸಾವಿರ ಬೆಲೆಯಿದ್ದು, ಈಗಾಗಲೇ 12 ಲಕ್ಷ ರೂ. ಆದಾಯ ಬಂದಿದೆ ಎನ್ನುತ್ತಾರೆ ರೈತ ದಂಪತಿ.

ಪರಶುರಾಮಪುರ ದ ರೈತ ದಂಪತಿ ಹತ್ತಿಯಲ್ಲಿ ಈ ಬಾರಿ ಉತ್ತಮ ಲಾಭ ಕಂಡಿದ್ದಾರೆ. ತಾಲೂಕಿನ ಬಹುತೇಕ ಕಡೆ ಹತ್ತಿ ಬೆಳೆದ ರೈತರು ನಷ್ಟ ಅನುಭವಿಸಿದ್ದಾರೆ.
ಡಾ.ಮೋಹನ ಕುಮಾರ
ಕೃಷಿ ಸಹಾಯಕ ನಿರ್ದೇಶಕ, ಚಳ್ಳಕೆರೆ

ಕೃಷಿ ತಜ್ಞರ ಸಲಹೆ ಪಡೆದು ಬೀಜ ಬಿತ್ತನೆ ಮಾಡಿದ್ದು, ನಮ್ಮ ನಿರೀಕ್ಷೆಯಂತೆ ಉತ್ತಮ ಫಸಲು ಬಂದಿದೆ. ಈಗ ಮತ್ತೆ 12 ರಿಂದ 15 ಲಕ್ಷ ರೂ. ಆದಾಯ ಬರುವ ನಿರೀಕ್ಷೆ ಇದೆ. ಹತ್ತಿಗೆ ಕಪ್ಪುಭೂಮಿ ಉತ್ತಮವಾಗಿದ್ದು, ರೋಗ ಬಾಧೆ ಕಾಣಿಸಿಕೊಂಡಿಲ್ಲ.
ಕೋಟೀಶ್ವರರಾವ್ ರೈತ

Share This Article

ಈ ಮಸಾಲೆಗಳು ವಿಟಮಿನ್ ಬಿ 12 ವೇಗವಾಗಿ ಹೆಚ್ಚಾಗಲು ಸಹಕರಿಸುತ್ತವೆ; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಜೀವಸತ್ವಗಳು ದೇಹದ ಕಾರ್ಯನಿರ್ವಹಣೆಗೆ ಮಾತ್ರ ಅಗತ್ಯವಲ್ಲ, ಅವು ಶಕ್ತಿಯನ್ನು ಸಹ ಒದಗಿಸುತ್ತವೆ. ಅವುಗಳ ಕೊರತೆಯು ನರಗಳು,…

ಪಿರಿಯಡ್ಸ್​ ನೋವನ್ನು ಕಡಿಮೆ ಮಾಡುವುದು ಹೇಗೆ?; ಮಹಿಳೆಯರು ತಿಳಿದುಕೊಳ್ಳಲೆಬೇಕಾದ ಮಾಹಿತಿ | Health Tips

ಋತುಬಂಧವನ್ನು ಈ ರೀತಿ ಅರ್ಥಮಾಡಿಕೊಳ್ಳಬಹುದು. ಋತುಬಂಧ ಎಂಬ ಪದವು ಎರಡು ಗ್ರೀಕ್ ಪದಗಳಿಂದ ಬಂದಿದೆ. ಮೆನೊ…

ಬೇಸಿಗೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುತ್ತೀರಾ? ಈ ಮಾಹಿತಿ ನಿಮಗಾಗಿ..garlic

garlic: ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.  ಆದರೆ ಬೇಸಿಗೆಯಲ್ಲಿ ಹೆಚ್ಚು ಬೆಳ್ಳುಳ್ಳಿ ತಿಂದರೆ…