ಪತ್ರಿಕಾ ವಿತರಕರಿಗೆ ಆಹಾರದ ಕಿಟ್ ವಿತರಣೆ

blank

ಪರಶುರಾಮಪುರ: ಕರೊನಾ ವೈರಸ್ ನಿಯಂತ್ರಣ ಮತ್ತು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಪತ್ರಿಕೆ, ಆರೋಗ್ಯ, ಆಶಾ, ಅಂಗನವಾಡಿ, ಪೊಲೀಸ್ ಇಲಾಖೆ ಬಹುಮುಖ್ಯ ಪಾತ್ರ ವಹಿಸಿವೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಚನ್ನಕೇಶವ ತಿಳಿಸಿದರು.

ಗ್ರಾಮದ ಮುಖ್ಯವೃತ್ತದಲ್ಲಿ ದಿನ ಪತ್ರಿಕೆಗಳ 30ಕ್ಕೂ ಅಧಿಕ ವಿತರಕರಿಗೆ ತಮ್ಮ ಸ್ವಂತ ಹಣದಲ್ಲಿ ಸೋಮವಾರ ಆಹಾರದ ಕಿಟ್, ತರಕಾರಿ, ಹಣ್ಣುಗಳನ್ನು ವಿತರಿಸಿ ಮಾತನಾಡಿದರು.

ಪತ್ರಿಕಾ ವಿತರಕರು, ವರದಿಗಾರರು ಲಾಕ್‌ಡೌನ್‌ನಿಂದ ಅನೇಕ ಸಮಸ್ಯೆ ಎದುರಿಸುತ್ತಿದ್ದರೂ ಕರ್ತವ್ಯ ಕೈಬಿಟ್ಟಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಪ್ರಾಣದ ಹಂಗು ತೊರೆದು ಕರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ. ಇವರಿಗೆ ಸಮಾಜ ನೆರವು ನೀಡುವ ಅಗತ್ಯವಿದೆ ಎಂದರು.

ಗ್ರಾಪಂ ಅಧ್ಯಕ್ಷ ಎಂ.ಆರ್.ರುದ್ರೇಶ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಪತ್ರಿಕೆ ವಿತರಿಸುವ ಎಲ್ಲ ವಿತರಕರಿಗೂ ಗ್ರಾಪಂ ವತಿಯಿಂದ ಅಗತ್ಯ ನೆರವು-ಸಹಕಾರ ನೀಡುವ ಭರವಸೆ ನೀಡಿದರು.

blank

ಕಿಸಾನ್ ನಾಗರಾಜು, ಗ್ರಾಪಂ ಮಾಜಿ ಅಧ್ಯಕ್ಷ ಕಾಟಯ್ಯ, ಮಾರುತಿ, ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಓಬಳಾಪುರ ತಿಪ್ಪೇಸ್ವಾಮಿ, ಚೌಳೂರು ಬದ್ರಿ, ಬಸವರಾಜು, ಭವಾನಿ ಸೋನು, ರಾಮ್‌ಸಿಂಗ್, ಈಶ್ವರಪ್ಪ, ತಿಮ್ಮರಾಯ, ಪತ್ರಕರ್ತರಾದ ಜೆ.ತಿಮ್ಮಯ್ಯ, ಎಸ್.ರಾಜು, ನಾಗರಾಜು ಇತರರಿದ್ದರು.

Share This Article

Raw Milkನಿಂದ ಹೊಳೆಯುವ ತ್ವಚೆ! ಹಸಿ ಹಾಲಿನಲ್ಲಿ ಇವುಗಳನ್ನು ಬೆರೆಸಿ ಹಚ್ಚಿಕೊಳ್ಳಿ ಸಾಕು..

Raw Milk Beauty Tips: ಹಾಲು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಮಗೆಲ್ಲರಿಗೂ ತಿಳಿದಿದೆ. ಹಾಲು…

Health Tips | ಕರಿಬೇವು ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ: ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ..

ಅಡುಗೆಯಲ್ಲಿ ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸುವ ಸಲುವಾಗಿ ಕರಿಬೇವನ್ನು ಉಪಯೋಗಿಸುತ್ತಾರೆ. ಇದರಿಂದ ಆರೋಗ್ಯಕ್ಕೂ ಎಷ್ಟೆಲ್ಲಾ ಪ್ರಯೋಜನ…