ವಿಕ್ಕಿ ಕೌಶಲ್ಗೆ ಎಂತಹದ್ದೇ ಪಾತ್ರ ಕೊಟ್ಟರೂ ಆ ಪಾತ್ರವನ್ನ ಸಖತ್ತಾಗಿಯೇ ನಿಭಾಯಿಸುತ್ತಾರೆ. ಪೌರಾಣಿಕ ಚಿತ್ರದಲ್ಲಿ ಪರಶುರಾಮನ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ಈ ಪಾತ್ರದ ಮೊದಲ ಲುಕ್ ಅನಾವರಣವಾಗಿದೆ.
ಪೌರಾಣಿಕ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಚಿರಂಜೀವಿ ಪರಶುರಾಮನಾಗಿ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದ ಎರಡು ಲುಕ್ ಅನ್ನು ಚಿತ್ರತಂಡ ಅನಾವರಣ ಮಾಡಿದೆ. ಚಿತ್ರದ ಪೋಸ್ಟರ್‌ನಲ್ಲಿ ನಟ ಉಗ್ರ ಅವತಾರ ತಾಳಿದ್ದಾರೆ. ಈ ಸಿನಿಮಾ ಮುಂದಿನ ಕ್ರಿಸ್ಮಸ್ 2026ರ ವೇಳೆ ರಿಲೀಸ್ ಆಗಲಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಮೋಷನ್ ಪೋಸ್ಟರ್ ಅನ್ನು ಹಂಚಿಕೊಂಡ ವಿಕ್ಕಿ, “ದಿನೇಶ್ ವಿಜನ್ ಅವರು ಶಾಶ್ವತ ಧರ್ಮದ ಯೋಧನ ಕಥೆಗೆ ಜೀವ ತುಂಬಿದ್ದಾರೆ! ಅಮರ್ ಕೌಶಿಕ್ ನಿರ್ದೇಶನದ ಮಹಾವತಾರ್ ಚಿತ್ರದಲ್ಲಿ ವಿಕ್ಕಿ ಕೌಶಲ್ ಚಿರಂಜೀವಿ ಪರಶುರಾಮನಾಗಿ ನಟಿಸಿದ್ದಾರೆ. ಚಿತ್ರಮಂದಿರಗಳಿಗೆ ಕ್ರಿಸ್ಮಸ್ 2026ರಲ್ಲಿ ಬರಲಿದೆ! ಎಂದ ಬರೆದುಕೊಂಡಿದ್ದಾರೆ.
“ಲವ್ & ವಾರ್ ನಂತರ, ವಿಕ್ಕಿ ಅವರು ಮೆಗಾ-ಬಜೆಟ್ ಚಲನಚಿತ್ರಕ್ಕೆ ಸಹಿ ಹಾಕಲು ನೋಡುತ್ತಿದ್ದರು. ನಿರ್ಮಾಪಕ ದಿನೇಶ್ ವಿಜನ್ ಅವರು ಸ್ಕ್ರಿಪ್ಟ್‌ನೊಂದಿಗೆ ಬಂದರು, ಹೀಗಾಗಿ ವಿಕ್ಕಿ ಅವರಿಗೆ ಇಲ್ಲ ಎಂದು ಹೇಳಲು ಸಾಧ್ಯವಾಗಲಿಲ್ಲ. ಲವ್ & ವಾರ್ ನಂತರ ವಿಕ್ಕಿ ಅವರ ಮುಂದಿನ ಚಿತ್ರವು ಮಹಾಕಾವ್ಯದ ಚಲನಚಿತ್ರವಾಗಿದ್ದು, ಅವರು ಪರಶುರಾಮನ ಪಾತ್ರವನ್ನು ನಿರ್ವಹಿಸುತ್ತಾರೆ ಎಂದು ಈ ಹಿಂದೆ ವರದಿಯಾಗಿತ್ತು.