ವೀರಕರಿಯಣ್ಣ-ಗೊಲ್ಲಾಳೇಶ್ವರಿ ಉತ್ಸವಕ್ಕೆ ತೆರೆ

ಪರಶುರಾಮಪುರ: ಗ್ರಾಮದ ಗೊಲ್ಲರಹಟ್ಟಿಯಲ್ಲಿ ಶ್ರೀ ವೀರಕರಿಯಣ್ಣಸ್ವಾಮಿ ಹಾಗೂ ಗೊಲ್ಲಾಳೇಶ್ವರಿದೇವಿ ಉತ್ಸವಕ್ಕೆ ಶುಕ್ರವಾರ ಗಂಗಾಪೂಜೆ, ಮಣೇವು ಪೂಜೆಯೊಂದಿಗೆ ತೆರೆ ಬಿದ್ದಿತು.

ಕರಡೇರ ಗೊಲ್ಲರು ಹಾಗೂ ಗುಡಿಕಟ್ಟೆಯ ಅಣ್ಣತಮ್ಮಂದಿರಿಂದ ಕಳೆದ ಒಂದು ವಾರದಿಂದ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಗಂಗಾಪೂಜೆ ಬಳಿಕ ಗ್ರಾಮದ ಮುಖ್ಯ ಬೀದಿಗಳಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆ ಮಾಡಲಾಯಿತು.

ಹರಕೆ ಹೊತ್ತ ಭಕ್ತರಿಂದ ಮಣೇವು ಪೂಜೆ ನೆರವೇರಿತು. ಸಂಜೆ ದೇವಸ್ಥಾನ ಆವರಣದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಗೊಲ್ಲರಹಟ್ಟಿಯ ಗೌಡ ಬೋರಪ್ಪ, ಯಜಮಾನ ಈರಣ್ಣ, ಪೂಜಾರಿಗಳಾದ ದೇವರಾಜು, ಕರಿಯಣ್ಣ, ಗುಡಿಕಟ್ಟೆಯ ಓಬಳದಾಸಪ್ಪ, ಕರಿಯಣ್ಣ, ದ್ಯಾಮಣ್ಣ, ಈರಣ್ಣ, ದೇವರಾಜು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *