ಸರ್ಕಾರಿ ಸೌಲಭ್ಯ ಬಳಸಿಕೊಳ್ಳಿ

ಪರಶುರಾಮಪುರ: ಗ್ರಾಮೀಣರು ಸರ್ಕಾರಿ ಸೌಲಭ್ಯಗಳ ಸದುಪಯೋಗ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಗ್ರಾಪಂ ಅಧ್ಯಕ್ಷ ಓ.ಬೈಲಪ್ಪ ತಿಳಿಸಿದರು.

ಗ್ರಾಪಂ, ಚಳ್ಳಕೆರೆ ತಾಲೂಕು ಸಾಮಾಜಿಕ ಪರಿಶೋಧನೆ ತಂಡ ತಿಮ್ಮಣ್ಣನಾಯಕನಕೋಟೆಯಲ್ಲಿ ಶನಿವಾರ ಆಯೋಜಿಸಿದ್ದ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನರೇಗಾ ಮತ್ತಿತರ ಯೋಜನೆಗಳ ಮಾಹಿತಿ ನೀಡಲೆಂದು ಗ್ರಾಮಸಭೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಪಾಲ್ಗೊಳ್ಳುವುದರಿಂದ ಸರ್ಕಾರಿ ಸೌಲಭ್ಯಗಳ ಸದುಪಯೋಗ ಪಡೆಯಬಹುದಾಗಿದೆ ಎಂದರು.

ತಾಲೂಕು ಸಾಮಾಜಿಕ ಲೆಕ್ಕ ಪರಿಶೋಧನಾ ಸಂಯೋಜಕ ಆರ್.ಗಿರೀಶಕುಮಾರ ಮಾತನಾಡಿ, ಕಾಮಗಾರಿಯ ಗುಣಮಟ್ಟ, ಅನುದಾನದ ಬಳಕೆ ವಿವರ ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸುವುದು ಸಾಮಾಜಿಕ ಪರಿಶೋಧನೆಯ ಉದ್ದೇಶ ಎಂದು ತಿಳಿಸಿದರು.

ಕಳೆದ ಎರಡು ದಿನಗಳಿಂದ ಗ್ರಾಪಂನಲ್ಲಿ ಕಾಮಗಾರಿಗಳ ಕಡತ ಪರಿಶೀಲನೆ, ಸ್ಥಳ ಪರಿಶೀಲನೆ, ಕೂಲಿ ಕಾರ್ಮಿಕರ ಮನೆ-ಮನೆ ಭೇಟಿ ಕಾರ್ಯ ನಡೆಯಿತು.

ಗ್ರಾಪಂ ಉಪಾಧ್ಯಕ್ಷೆ ಶಿವಮ್ಮ, ನಾಗೇಂದ್ರಪ್ಪ, ಭಾಗ್ಯಮ್ಮ, ಬಸವರಾಜು, ಪ್ರಮೋದ, ಆರ್.ಟಿ.ನಿಂಗಣ್ಣ, ಪಿಡಿಒ ಹನುಮಂತರಾಜು, ಎಸ್‌ಡಿಎ ಸಿ.ಈರಣ್ಣ ಇತರರಿದ್ದರು.

Leave a Reply

Your email address will not be published. Required fields are marked *