ಅಲೆದಾಟ ತಪ್ಪಿಸಿ ರೈತರಿಗೆ ಸೌಲಭ್ಯ ಕಲ್ಪಿಸಿ

ಪರಶುರಾಮಪುರ: ಗ್ರಾಮಲೆಕ್ಕಾಧಿಕಾರಿಗಳು ರೈತರನ್ನು ಪದೇ ಪದೆ ಕಚೇರಿಗೆ ಅಲೆದಾಡಿಸದೆ ಅವರ ಕಾರ್ಯಗಳನ್ನು ಶೀಘ್ರ ಮಾಡಿಕೊಡಬೇಕು ಎಂದು ತಹಸೀಲ್ದಾರ್ ಎಂ.ಮಲ್ಲಿಕಾರ್ಜುನಪ್ಪ ಸೂಚಿಸಿದರು.

ಗ್ರಾಮದ ನಾಡಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರದ ನಿರ್ದೇಶನದನ್ವಯ ತಾಲೂಕಿನ ಎಲ್ಲ ರೈತರು ತಮ್ಮ ವ್ಯಾಪ್ತಿಯ ಗ್ರಾಮಲೆಕ್ಕಾಧಿಕಾರಿಗಳಿಗೆ ಬರ ಪರಿಹಾರದ ಇನ್‌ಪುಟ್ ಸಬ್ಸಿಡಿ ನೀಡಲು ಪಹಣಿ, ಆಧಾರ್‌ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ ನೀಡಬೇಕು ಎಂದು ತಿಳಿಸಿದರು.

ಲೆಕ್ಕಾಧಿಕಾರಿಗಳಿಂದ ವಿವಿಧ ಗ್ರಾಮಗಳಲ್ಲಾದ ಮಳೆ ಪ್ರಮಾಣದ ಮಾಹಿತಿ ಪಡೆದ ಅವರು, ಗೋಶಾಲೆ ನಿರ್ವಹಣೆ ಜತೆಗೆ ರೈತರು, ಕೃಷಿ ಕಾರ್ಮಿಕರಿಗೆ ಸರ್ಕಾರಿ ಸೌಲಭ್ಯ ದೊರಕಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಬರ ಕಾಮಗಾರಿಗಳ ವೀಕ್ಷಣೆ ಮಾಡಿ ಸರ್ಕಾರಕ್ಕೆ ವರದಿ ನೀಡಬೇಕು ಎಂದು ಸೂಚಿಸಿದರು.

ಆರ್‌ಐ ಶಾಂತಪ್ಪ, ವಿಎಗಳಾದ ಶಿವಕುಮಾರ, ಚಂದ್ರಕಾಂತ, ಹಿರಿಯಪ್ಪ, ಗ್ರಾಮ ಸಹಾಯಕರಾದ ಗೋವಿಂದಪ್ಪ, ಈರರಂಗಪ್ಪ, ಹನುಮಂತರಾಯ ಹಾಗೂ ಹೋಬಳಿ ವ್ಯಾಪ್ತಿಯ ಗ್ರಾಮಲೆಕ್ಕಾಧಿಕಾರಿಗಳಿದ್ದರು.

Leave a Reply

Your email address will not be published. Required fields are marked *