ನಲ್ಲೂರಹಳ್ಳಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

ಪರಶುರಾಮಪುರ: ಗ್ರಾಮೀಣ ಪ್ರದೇಶದ ಶಾಲಾ, ಕಾಲೇಜುಗಳ ಸರ್ವತೋಮುಖ ಅಭಿವೃದ್ಧಿಗೆ ಶಾಲೆ ಅಭಿವೃದ್ಧಿ ಸಮಿತಿಗಳ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಸಹಭಾಗಿತ್ವ ಅಗತ್ಯ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀಪತಿ ತಿಳಿಸಿದರು.

ಶಾಲೆ ಪ್ರಾರಂಭೋತ್ಸವದ ಹಿನ್ನೆಲೆ ನಲ್ಲೂರಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶುಕ್ರವಾರ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಶಿಕ್ಷಕರು, ಗ್ರಾಮಸ್ಥರು ಶಾಲೆ ಆವರಣದಲ್ಲಿ ಉತ್ತಮವಾಗಿ ಗಿಡಮರ ಬೆಳಸಿದ್ದಾರೆ. ಅವುಗಳ ನಿರ್ವಹಣೆಯಿಂದ ಪರಿಸರ ಸೌಂದರ್ಯ ವೃದ್ಧಿಸುತ್ತದೆ ಎಂದರು.

ಶಾಲಾ ಕೊಠಡಿ, ಶೌಚಗೃಹ ಸ್ವಚ್ಛತೆ ಕಾರ್ಯದಲ್ಲಿ ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು, ಮಕ್ಕಳು ಪಾಲ್ಗೊಂಡಿದ್ದರು. ನಂತರ, ಗ್ರಾಮದಲ್ಲಿ ಬೀದಿಗಳಲ್ಲಿ ದಾಖಲಾತಿ ಆಂದೋಲನ ನಡೆಸಿದರು.

ಎಸ್‌ಡಿಎಂಸಿ ಸದಸ್ಯರಾದ ಜಗದೀಶ, ಈರಣ್ಣ, ವೀರಣ್ಣ, ಸಿರಿಯಪ್ಪ, ಶಿಕ್ಷಕರಾದ ರಾಜು, ಬಸವರಾಜು ಇತರರಿದ್ದರು.