ಯೋಜನೆ ಯಶಸ್ವಿಗೆ ಸಹಕಾರ ಬೇಕು

ಪರಶುರಾಮಪುರ: ಗ್ರಾಮೀಣ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ನರೇಗಾ ಯೋಜನೆ ಅನುಷ್ಠಾನಗೊಳಿಸಿದ್ದು, ಕ್ರಿಯಾ ಯೋಜನೆಗೆ ಗ್ರಾಮಸ್ಥರ ಸಲಹೆ, ಸಹಕಾರ ಅಗತ್ಯ ಎಂದು ಪಿಡಿಒ ದೇವರಾಜು ತಿಳಿಸಿದರು.

ಎಸ್.ದುರ್ಗ, ಕ್ಯಾದಿಗುಂಟೆ ಗ್ರಾಮದಲ್ಲಿ ಆಯೋಜಿಸಿದ್ದ ನರೇಗಾ ಕ್ರಿಯಾ ಯೋಜನೆ ಕುರಿತ ಗ್ರಾಮ ಸಭೆಯಲ್ಲಿ ಮಾತನಾಡಿ, ಯಾವುದೇ ಯೋಜನೆ ಯಶಸ್ವಿಗೆ ಜನರ ಸಹಕಾರ ಬಹಳ ಮುಖ್ಯ ಎಂದರು.

ಗ್ರಾಪಂ ಸದಸ್ಯರಾದ ರಾಘವೇಂದ್ರ, ಉದಯಕುಮಾರ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಯು.ಉದಯಕುಮಾರ, ಮುಖಂಡರಾದ ಮಹಾಲಿಂಗಪ್ಪ, ಗೋವಿಂದಪ್ಪ, ಸತ್ಯನಾರಾಯಣ ಇತರರಿದ್ದರು.

Leave a Reply

Your email address will not be published. Required fields are marked *