ವಾಸವಿದೇವಿ ಭಾವಚಿತ್ರ ಮೆರವಣಿಗೆ

ಪರಶುರಾಮಪುರ: ಗ್ರಾಮದಲ್ಲಿ ಆರ್ಯವೈಶ್ಯ ಸಮುದಾಯ ಹಾಗೂ ಆರ್ಯವೈಶ್ಯ ಮಹಿಳಾ ಸಂಘದಿಂದ ಮಂಗಳವಾರ ವಾಸವಿ ಜಯಂತಿ ಆಚರಿಸಲಾಯಿತು.

ಅಲಂಕೃತ ವಾಸವಿದೇವಿ ಭಾವಚಿತ್ರವನ್ನು ಸಾರೋಟಿನಲ್ಲಿ ಇರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆ, ವಾಸವಿ ಮಹಲ್‌ಗೆ ತಲುಪಿತು. ಸಮುದಾಯದ ಮಹಿಳೆಯರು ಆರತಿ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು.

ವಾಸವಿ ಮಹಲ್‌ನಲ್ಲಿ ವಾಸವಿದೇವಿ ಮೂರ್ತಿ ಪ್ರತಿಷ್ಟಾಪಿಸಿ ಪೂಜೆ ನೆರವೇರಿಸಿದರು. ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಆರ್ಯವೈಶ್ಯ ಸಂಘದ ಅಶ್ವತಪ್ಪ ಶೆಟ್ಟಿ, ಸೂರಪ್ಪ, ಪ್ರಕಾಶ, ಶ್ಯಾಮಸುಂದರ, ರಾಜು, ಕಿರಣ್, ರವಿ, ಸೋಮಣ್ಣ, ಸೋಮನಾಥ, ಆರ್ಯವೈಶ್ಯ ಮಹಿಳಾ ಸಂಘ ಸದಸ್ಯರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *