ವಸತಿ ಯೋಜನೆಗಳ ಮಾಹಿತಿ ಸಭೆ

ಪರಶುರಾಮಪುರ: ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಎಸ್.ದುರ್ಗ ಪಿಡಿಒ ಜಿ.ದೇವರಾಜು ತಿಳಿಸಿದರು.

ಹೋಬಳಿಯ ಪಿ.ಗೌರೀಪುರದಲ್ಲಿ ಆಯೋಜಿಸಿದ್ದ ವಿವಿಧ ವಸತಿ ಯೋಜನೆಗಳ ಮಾಹಿತಿ ಸಭೆಯಲ್ಲಿ ಮಾತನಾಡಿ, ಗ್ರಾಪಂ ಸಿಬ್ಬಂದಿ ಹಾಗೂ ಸದಸ್ಯರೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡು ಸೌಲಭ್ಯದ ಮಾಹಿತಿ ಪಡೆಯಬೇಕು ಎಂದರು.

ಗ್ರಾಪಂ ಸದಸ್ಯ ಸಿ.ರಾಮಣ್ಣ ಮಾತನಾಡಿ, ಗ್ರಾಮಸ್ಥರು ಗ್ರಾಮ, ವಾರ್ಡ್ ಸಭೆಗಳಿಗೆ ಹಾಜರಾಗಬೇಕು. ಈ ಮೂಲಕ ವಸತಿ, ನಿವೇಶನ, ಮತ್ತಿತರೆ ಸೌಲಭ್ಯ ಬಳಕೆ ಮಾಡಿಕೊಳ್ಳಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ಲಲಿತಾ, ಸದಸ್ಯರಾದ ಹೊನ್ನೂರಪ್ಪ, ಸಿ.ರಾಮಣ್ಣ, ವೆಂಕಟರೆಡ್ಡಿ, ಮುಖ್ಯಶಿಕ್ಷಕ ಟಿ.ಎಲ್.ಪ್ರಸನ್ನ ಇದ್ದರು.

Leave a Reply

Your email address will not be published. Required fields are marked *