ಕೃಷ್ಣಶಾಸ್ತ್ರಿ ಬಡ ವಿದ್ಯಾರ್ಥಿಗಳ ಬಂಧು: ನಿವೃತ್ತ ಐಪಿಎಸ್ ಅಧಿಕಾರಿ ರಾಮಕೃಷ್ಣ ಅನಿಸಿಕೆ

ಪರಶುರಾಮಪುರ: ಬೆಳಗೆರೆ ಕೃಷ್ಣಶಾಸ್ತ್ರಿಯವರು ಸಾವಿರಾರು ಬಡ ಮಕ್ಕಳಿಗೆ ವಿದ್ಯೆ, ಅನ್ನದಾನ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದರು ಎಂದು ನಿವೃತ್ತ ಐಪಿಎಸ್ ಅಧಿಕಾರಿ ರಾಮಕೃಷ್ಣ ತಿಳಿಸಿದರು.

ಬೆಳಗೆರೆಯಲ್ಲಿ ಸಾಹಿತಿ ಕೃಷ್ಣಶಾಸ್ತ್ರಿ ಅವರ 104ನೇ ಜನ್ಮ ದಿನಾಚರಣೆ ಹಾಗೂ ಪುನರ್ ಪ್ರವೇಶಿತ ಶ್ರೀಶಾರದಾ ಚೈತನ್ಯ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ವಿದ್ಯಾಸಂಸ್ಥೆ ಸ್ಥಾಪಿಸಿ ಸಾವಿರಾರು ಬಡಮಕ್ಕಳಿಗೆ ವಿದ್ಯೆ, ಅನ್ನದಾನ ಮಾಡಿ ಅವರ ಬದುಕು ಉಜ್ವಲಗೊಳಿಸಿದ ಕೀರ್ತಿ ಶಾಸ್ತ್ರೀಯವರಿಗೆ ಸಲ್ಲುತ್ತದೆ ಎಂದರು.

ನಿವೃತ್ತ ಪ್ರಾಧ್ಯಾಪಕ ಜಿ.ರಾಜಶೇಖರಯ್ಯ ಮಾತನಾಡಿ, ಕೃಷ್ಣಶಾಸ್ತ್ರಿಯವರ ಕಾಲದಿಂದಲೂ ಶಾರದಾ ವಿದ್ಯಾಸಂಸ್ಥೆಯಲ್ಲಿ ಮಕ್ಕಳಿಗೆ ನೈತಿಕತೆ ಶಿಕ್ಷಣ ನೀಡುವುದನ್ನು ಮರೆತಿಲ್ಲ. ಇಲ್ಲಿ ಶಿಕ್ಷಣ ಪಡೆದ ಬಹುತೇಕರು ಉನ್ನತ ಹುದ್ದೆಯಲ್ಲಿದ್ದಾರೆ ಎಂದು ತಿಳಿಸಿದರು.

ಶಾರದಾ ಸಂಸ್ಥೆಯ ಉಪಾಧ್ಯಕ್ಷ ರಮೇಶ ಬಾಬು, ಮಾರ್ಗದರ್ಶಕ ಶ್ರೀಪಾದ್ ಪೂಜಾರ್, ಶ್ರೀನಿವಾಸಲು, ಚಿದಾನಂದಯ್ಯ ಮಾತನಾಡಿದರು.

ಡಾ.ವೆಂಕಟೇಶ ಶರ್ಮ, ಸಂಪರ್ಕಾಧಿಕಾರಿ ಕೆ.ಆರ್.ರಾಜಣ್ಣ, ಬಿ.ಟಿ.ತಿಪ್ಪೇಸ್ವಾಮಿ, ರಾಂಪ್ರಸಾದ್, ಪ್ರಾಂಶುಪಾಲೆ ಆರ್.ಸರೋಜಮ್ಮ, ಉಪನ್ಯಾಸಕರಾದ ಚನ್ನಕೇಶವ, ಅಬ್ದುಲ್ ವಾಹಿದ್, ದಾಕ್ಷಾಯಿಣಿ, ಪುಷ್ಪಲತಾ, ಮುಖ್ಯ ಶಿಕ್ಷಕರಾದ ವಿ.ಎಚ್.ವೀರಣ್ಣ, ಗಿರೀಶ, ಸುಹಾಸ್, ಶಶಿಕಲಾ, ಮೀನಾಕ್ಷಿ ಮಂಜುನಾಥ ಇದ್ದರು.