ಚಿಲುಮೆ ರುದ್ರಸ್ವಾಮಿ ಮಠದಲ್ಲಿ ಗೋ ಶಾಲೆ

ಪರಶುರಾಮಪುರ: ಜಾನುವಾರುಗಳಿಗೆ ಮೇವು, ನೀರು ಪೂರೈಸಲು ನಾಗಗೊಂಡನಹಳ್ಳಿಯ ವೇದಾವತಿ ನದಿ ತೀರದ ಚಿಲುಮೆ ರುದ್ರಸ್ವಾಮಿ ಮಠದ ಆವರಣದಲ್ಲಿ ಗೋಶಾಲೆಗೆ ಬುಧವಾರ ಚಾಲನೆ ನೀಡಲಾಯಿತು.
ಚಳ್ಳಕೆರೆ ತಹಸೀಲ್ದಾರ್ ತುಷಾರ್ ಬಿ.ಹೊಸೂರ್ ಚಾಲನೆ ನೀಡಿ ಜಾಜೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ಹಾಗೂ ಸುತ್ತಮುತ್ತಲ ಗಾಮಗಳ ರಾಸುಗಳಿಗೆ ಅನುಕೂಲವಾಗಲಿದೆ ಎಂದರು.
ಪಶುಪಾಲನೆ ಸಂಸ್ಕೃತಿ ಹೊಂದಿರುವ ಮಠದ ಬಳಿ ಈ ಹಿಂದೆ ಸರ್ಕಾರ ಗೋಶಾಲೆ ತೆರೆದಿತ್ತು. ತಾಂತ್ರಿಕ ಕಾರಣಗಳಿಂದ ಮೇವು ವಿತರಣೆ ವಿಳಂಬವಾಗಿತ್ತು. ಇದೀಗ ವಿದ್ಯುಕ್ತವಾಗಿ ಆರಂಭವಾಗಿದೆ ಎಂದು ತಿಳಿಸಿದರು.
ಚಿಲುಮೆ ರುದ್ರಸ್ವಾಮಿ ಮಠದ ಶ್ರೀ ಬಸವಕಿರಣ ಸ್ವಾಮೀಜಿ ಮಾತನಾಡಿ, ಮಠದ ಆವರಣದಲ್ಲಿ ನೀರು, ನೆರಳಿನ ವ್ಯವಸ್ಥೆ ಇದೆ. ರಾಸುಗಳ ಜತೆ ಆಗಮಿಸುವ ಜನರಿಗೂ ತಂಗಲು ಅನುಕೂಲವಿದೆ ಎಂದರು.
ಜಾಜೂರು ಜಿಪಂ ವ್ಯಾಪ್ತಿಯ ಕಾಮಸಮುದ್ರ, ನಾಗಗೊಂಡನಹಳ್ಳಿ, ಹರವಿಗೊಂಡನಹಳ್ಳಿ, ಮೋದೂರು, ಹಾಲಗೊಂಡನಹಳ್ಳಿ ಸೇರಿ ಆಂಧ್ರ ಗಡಿಭಾಗದ ಗ್ರಾಮಗಳ ರಾಸುಗಳನ್ನು ಮಾಲೀಕರು ಹೊಡೆದುಕೊಂಡು ಬಂದಿದ್ದರು.
ಮಠದ ಉಪಾಧ್ಯಕ್ಷ ಓಬಳೇಶಪ್ಪ, ಮಂಜುನಾಥ, ಅಂಜಿನಪ್ಪ, ಪಾಲಯ್ಯ, ಹನುಮಂತರಾಯ, ಚಲುಮಪ್ಪ, ಓಬಣ್ಣ, ಮಹಾಂತೇಶ ಇತರರಿದ್ದರು. ಮೊದಲ ದಿನವೇ ನೂರಕ್ಕೂ ಹೆಚ್ಚು ರಾಸುಗಳಿದ್ದವು.

Leave a Reply

Your email address will not be published. Required fields are marked *