ಅಗ್ನಿ ದುರಂತ ತಡೆಗಟ್ಟುವ ಮಾಹಿತಿ ಕರಪತ್ರ ವಿತರಣೆ

ಪರಶುರಾಮಪುರ: ಅಗ್ನಿ ಅವಗಡ ಸಂಭವಿಸಿದಾಗ ಅದಕ್ಕೆ ಪರಿಹಾರ ಹುಡುಕುವ ಬದಲು ಮುನ್ನೆಚ್ಚರಿಕೆ ವಹಿಸುವುದು ಉತ್ತಮ ಎಂದು ಅಗ್ನಿಶಾಮಕ ಠಾಣಾಧಿಕಾರಿ ಬಿ. ಜಯಣ್ಣ ತಿಳಿಸಿದರು.

ಪ್ರಾದೇಶಿಕ ಅಗ್ನಿಶಾಮಕ ವಿಭಾಗ, ಜಿಲ್ಲಾ ಅಗ್ನಿಶಾಮಕ ದಳ, ತಾಲೂಕು ಅಗ್ನಿಶಾಮಕ ಠಾಣೆ, ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವಿಭಾಗದಿಂದ ಗ್ರಾಮದಲ್ಲಿ ಏರ್ಪಡಿಸಿದ್ದ ಅಗ್ನಿ ದುರಂತ ತಡೆಗಟ್ಟುವ ಮಾಹಿತಿ ಕರಪತ್ರ ಸಾರ್ವಜನಿಕರಿಗೆ ವಿತರಿಸಿ ಮಾತನಾಡಿದರು.

ಒಣಹವೆ ಪ್ರದೇಶದಲ್ಲಿ ಅಗ್ನಿದುರಂತ ಸಂಭವಿಸುವ ಸಾಧ್ಯತೆಗಳು ಹೆಚ್ಚು. ಯಾವುದೇ ಅಗ್ನಿ ದುರಂತದ ಬಗ್ಗೆ ನಿರ್ಲಕ್ಷೃ ಸಲ್ಲದು. ಕೂಡಲೇ ತುರ್ತು ಸಂಖ್ಯೆ 101ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಮನೆ, ಬಣವೆ, ಮರದ ರಾಶಿಗೆ ಬೆಂಕಿ ತಗುಲಿದರೆ ನೀರು, ಮರಳು, ಮಣ್ಣು ಎರಚುವ ಮೂಲಕ ಬೆಂಕಿಯನ್ನು ನಿಯಂತ್ರಿಸಬಹುದು. ಸೀಮೆಎಣ್ಣೆ, ಪೆಟ್ರೋಲ್, ದ್ರವ ಇಂಧನಗಳಿಗೆ ಬೆಂಕಿ ತಗುಲಿದಾಗ ನೀರಿನಿಂದ ನಂದಿಸುವ ಪ್ರಯತ್ನ ಮಾಡಬಾರದು ಎಂದು ತಿಳಿಸಿದರು.

ಅಡುಗೆ ತಯಾರಿಸುವರು ಏಪ್ರಾನ್ ಧರಿಸುವುದು ಕಡ್ಡಾಯ. ವಾಣಿಜ್ಯ ಮಳಿಗೆಗಳನ್ನು ರಾತ್ರಿ ಬಂದ್ ಮಾಡಿದಾಗ, ವಿದ್ಯುತ್ ಮೇನ್ ಸ್ವಿಚ್ ಆಫ್ ಮಾಡಬೇಕು ಎಂದು ಸಲಹೆ ನೀಡಿದರು.

ಪರಶುರಾಮಪುರದಲ್ಲೂ ಅಗ್ನಿಶಾಮಕ ಠಾಣೆ ಆರಂಭಿಸಲು ಸಿದ್ಧತೆ ನಡೆದಿದೆ ಎಂದು ತಿಳಿಸಿದರು.

ಅಗ್ನಿಶಾಮಕ ಠಾಣಾಧಿಕಾರಿ ಬಿ. ಜಯಣ್ಣ, ಸಿಬ್ಬಂದಿ ಎ.ಟಿ. ತಿಪ್ಪೇಸ್ವಾಮಿ, ವಿಶ್ವನಾಥ, ಗರೀಬ್ ಸಾಬ್ ವಲಿ ಇತರರಿದ್ದರು.

Leave a Reply

Your email address will not be published. Required fields are marked *