ಪರಿಸರ ರಕ್ಷಣೆ ಸರ್ವರ ಹೊಣೆ

ಪರಶುರಾಮಪುರ: ಗಿಡ ಬೆಳೆಸುವುದರ ಮೂಲಕ ಪರಿಸರ ಸಂರಕ್ಷಿಸುವುದು ಎಲ್ಲರ ಹೊಣೆ ಎಂದು ಸಾಣಿಕೆರೆ ಪಿಡಿಒ ಹನುಮಂತಪ್ಪ ತಿಳಿಸಿದರು.

ಕಾಪರಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಗುರುವಾರ ಸಸಿ ನೆಟ್ಟು ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಮರಗಳ ಸಂಖ್ಯೆ ಕಡಿಮೆ ಪರಿಣಾಮ ಮಳೆಗಾಲದಲ್ಲೂ ಮಳೆ ಅಪರೂಪದ ಅತಿಥಿ ಆಗಿದೆ. ಇದನ್ನು ಅರಿತು ಬಯಲಲ್ಲಿ ಸಸಿ ನೆಡುವ ಮೂಲಕ ಪರಿಸರ ಹಸಿರೀಕರಣಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, ಪಂಚಾಯಿತಿ ವ್ಯಾಪ್ತಿ ಸರ್ಕಾರಿ ಕಟ್ಟಡ, ರಸ್ತೆ ಬದಿ ಹಾಗೂ ಶಾಲೆ ಆವರಣದಲ್ಲಿ ಗಿಡ ನೆಡಲಾಗುವುದು. ಶಾಲೆ ಆವರಣದಲ್ಲಿ 500 ಸಸಿ ನೆಡುವ ಯೋಜನೆ ಇದ್ದು, ಅವುಗಳನ್ನು ಪೋಷಣೆ ಮಾಡುವುದು ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಕರ್ತವ್ಯ ಎಂದರು.

ಗ್ರಾಪಂ ಸದಸ್ಯ ದುರುಗಪ್ಪ, ಮುಖ್ಯಶಿಕ್ಷಕ ಎಂ.ಹನುಮಂತರಾಯಪ್ಪ, ಶಿಕ್ಷಕರಾದ ಗೆಜ್ಜಪ್ಪ, ವಿ.ರಂಗಸ್ವಾಮಿ, ಎಚ್.ಕೃಷ್ಣನಾಯ್ಕ ಮುಖಂಡರಾದ ತಿಪ್ಪೇಸ್ವಾಮಿ, ಗ್ರಾಪಂ ಸಿಬ್ಬಂದಿ ಬಾಬಣ್ಣ ಇತರರಿದ್ದರು.

Leave a Reply

Your email address will not be published. Required fields are marked *