ನೆಮ್ಮದಿಗೆ ಧಾರ್ಮಿಕ ಕಾರ್ಯ ಸಾಥ್

ಪರಶುರಾಮಪುರ: ಗ್ರಾಮದ ಎಲ್ಲ ಸಮುದಾಯಗಳ ನಡುವೆ ಶಾಂತಿ, ಸಾಮರಸ್ಯ ಕಾಪಾಡಲು ಧಾರ್ಮಿಕ ಕಾರ್ಯಗಳು ಸಹಕಾರಿಯಾಗಿವೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ಸಿದ್ದೇಶ್ವರಸ್ವಾಮಿ ಉತ್ಸವದ ಅಂಗವಾಗಿ ಸಮೀಪದ ಸಿದ್ದೇಶ್ವರನದುರ್ಗ ಗ್ರಾಮದ ದೇವಸ್ಥಾನದಲ್ಲಿ ಮಂಗಳವಾರ ಆಯೋಜಿಸಿದ್ದ ಕುಂಭಾಭಿಷೇಕ, ಪರ್ಜನ್ಯ ಹೋಮ ಹಾಗೂ ವಿರಾಟಪರ್ವ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಐತಿಹಾಸಿಕ ಹಿನ್ನೆಲೆ ಹೊಂದಿರುವ ಗ್ರಾಮದ ಬೆಟ್ಟದಲ್ಲಿ ಶ್ರೀ ಸಿದ್ದೇಶ್ವರಸ್ವಾಮಿ, ಮಾರಮ್ಮ, ರಂಗನಾಥಸ್ವಾಮಿ, ಈರಮಲ್ಲಪ್ಪ ದೇವಸ್ಥಾನಗಳಿವೆ. ಅವುಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ಮಹಿಳೆಯರು, ಮಕ್ಕಳು ಹಿಟ್ಟಿನಾರತಿ, ಕುಂಭ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಧಾರ್ಮಿಕ ಕಾರ್ಯಗಳ ನಂತರ ಅನ್ನ ಸಂತರ್ಪಣೆ ನಡೆಯಿತು.

ದೇವಸ್ಥಾನ ಸಮಿತಿ ಪದಾಧಿಕಾರಿಗಳಾದ ಇ.ಡಿ. ಶ್ರೀರಾಮ, ಪಾಂಡುರಂಗಪ್ಪ, ಅರ್ಚಕ ಶಶಿಧರ ಶರ್ಮ, ಎಪಿಎಂಸಿ ಸದಸ್ಯರಾದ ಎಸ್. ಚನ್ನಕೇಶವ, ಟಿ.ಆರ್. ಹನುಮಂತರಾಯ, ಗ್ರಾಪಂ ಸದಸ್ಯರಾದ ಲತಾ, ರಂಗಯ್ಯ, ರವಿ ಇತರರಿದ್ದರು.

Leave a Reply

Your email address will not be published. Required fields are marked *