ದಾರ್ಶನಿಕರ ಸಾಧನೆ ಧರ್ಮಾತೀತ

ಪರಶುರಾಮಪುರ: ಸಂತರ, ಶರಣರ, ದಾರ್ಶನಿಕರ ಸಾಧನೆ ಹಾಗೂ ತತ್ವಾದರ್ಶಗಳು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಲ್ಲ ಎಂದು ಭಗೀರಥ ಪೀಠಾಧ್ಯಕ್ಷ ಶ್ರೀ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ ತಿಳಿಸಿದರು.

ದೊಡ್ಡಬಾದಿಹಳ್ಳಿಯಲ್ಲಿ ಉಪ್ಪಾರ ಸಮಾಜ ಹಾಗೂ ಭಗೀರಥ ಯುವಕ ಸಂಘದಿಂದ ಸೋಮವಾರ ಆಯೋಜಿಸಿದ್ದ ಶ್ರೀ ಭಗೀರಥ ಮಹರ್ಷಿ ಜಯಂತ್ಯುತ್ಸವದಲ್ಲಿ ಮಾತನಾಡಿ, ಭಗೀರಥ ಮಹರ್ಷಿಗಳ ತಪಸ್ಸಿನ ಫಲವಾಗಿ ಧರೆಗಿಳಿದ ಗಂಗೆ, ಸಾವಿರಾರು ವರ್ಷಗಳಿಂದ ಮನುಕುಲದ ಅಭಿವೃದ್ಧಿಗೆ ಕಾರಣವಾಗಿದೆ ಎಂದರು.

ಜೀವನಕ್ಕೊಂದು ಗುರಿ, ಮಾರ್ಗದರ್ಶನಕ್ಕೊಬ್ಬ ಗುರುವಿದ್ದರೆ ಉನ್ನತ ಸಾಧನೆ ಮಾಡಲು ಸಾಧ್ಯ. ಮಹಾನ್ ಸಾಧಕರ ಜೀವನ ಆದರ್ಶಗಳನ್ನು ಅಳವಡಿಸಿಕೊಂಡರೆ, ಜಯಂತಿ ಸಾರ್ಥಕವಾಗುತ್ತದೆ ಎಂದರು.

ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಹಿರಿಯರನ್ನು ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಮುಖ್ಯ ರಸ್ತೆಯಲ್ಲಿ ಭಗೀರಥ ಮಹರ್ಷಿ ಭಾವಚಿತ್ರದ ಮೆರವಣಿಗೆ ನಡೆಯಿತು.

ಜಿಪಂ ಸದಸ್ಯೆ ಗೌರಮ್ಮ, ತಾಪಂ ಸದಸ್ಯ ತಿಮ್ಮಾರೆಡ್ಡಿ, ಗ್ರಾಪಂ ಮಾಜಿ ಅಧ್ಯಕ್ಷ ಮಾರುತಿ, ಸಮಾಜದ ತಾಲೂಕು ಅಧ್ಯಕ್ಷ ಕಲ್ಲಪ್ಪ, ಗುತ್ತಿಗೆದಾರ ಅಚ್ಚುವಾಳಪ್ಪ, ಮುಖಂಡರಾದ ನಾಗರಾಜು, ವೀರಭದ್ರಪ್ಪ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *