ನೀರು, ಪರಿಸರ ಸಂರಕ್ಷಿಸಿ

ಪರಶುರಾಮಪುರ: ಪರಿಸರ ಸಂರಕ್ಷಣೆ ಮಾಡದಿದ್ದರೆ ಮುಂದಿನ ಪೀಳಿಗೆ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಕೊರ‌್ಲಕುಂಟೆ ಜಿಎಚ್‌ಎಸ್ ಮುಖ್ಯಶಿಕ್ಷಕ ಕೆ.ಜಿ.ಪ್ರಶಾಂತ ತಿಳಿಸಿದರು.

ವನಸಿರಿ ಇಕೋಕ್ಲಬ್, ವಿಜ್ಞಾನ ಸಂಘ, ಅರಣ್ಯ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಕೊರ‌್ಲಕುಂಟೆ ಹೊರವಲಯದ ಗೋವರ್ಧನಗಿರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶುದ್ಧ ಕುಡಿವ ನೀರು, ಗಾಳಿ, ಮಣ್ಣು, ಹಣ್ಣು-ಹಂಪಲು, ಧಾನ್ಯ, ತರಕಾರಿ ಸಿಗದಿರುವ ಕಾಲ ಸನ್ನಿಹಿತವಾಗಿದೆ. ಈಗಿಂದಲೇ ಎಲ್ಲರೂ ಗಿಡ ನೆಟ್ಟು ಅವುಗಳನ್ನು ಸಂರಕ್ಷಣೆ ಮಾಡಬೇಕು ಎಂದು ತಿಳಿಸಿದರು.

ಶಾಲಾ ಆವರಣದಲ್ಲಿ ಹೆಬ್ಬೇವು, ಹುಣಸೆ, ಕಾಡು ಬಾದಾಮಿ, ಸಿಲ್ವರ್ ಇತರ ಗಿಡಗಳನ್ನು ನೆಟ್ಟು ನೀರುಣಿಸಲಾಯಿತು.
ದೈಹಿಕ ಶಿಕ್ಷಣ ಶಿಕ್ಷಕ ಟಿ.ಮಂಜುನಾಥ, ಟಿ.ಕೆ. ನೀಲಮ್ಮ ಇತರರಿದ್ದರು.

ಕೊಂಡ್ಲಹಳ್ಳಿ: ಸಮೀಪದ ಗೌರಸಮುದ್ರದ ಇಂಡಿಯನ್ ಪಬ್ಲಿಕ್ ಶಾಲೆಯ ಚಿಣ್ಣರು ಶಾಲಾವರಣದಲ್ಲಿ ಶನಿವಾರ ಬೆಳಗ್ಗೆ ಗಿಡ ನೆಟ್ಟು ವಿಶ್ವ ಪರಿಸರ ದಿನ ಆಚರಿಸಿದರು.

Leave a Reply

Your email address will not be published. Required fields are marked *