ಕ್ಯಾದಿಗುಂಟೇಲಿ ಆಂಜನೇಯ ಉತ್ಸವ

ಪರಶುರಾಮಪುರ: ಸಮೀಪದ ಕ್ಯಾದಿಗುಂಟೆ ಗ್ರಾಮದಲ್ಲಿ ಶ್ರೀ ಆಂಜನೇಯಸ್ವಾಮಿ ಉತ್ಸವದ ಅಂಗವಾಗಿ ಅಭಿಷೇಕ, ಅಲಂಕಾರ, ಪವಮಾನ ಹೋಮ, ಗಣಪತಿ ಮತ್ತು ನವಗ್ರಹ ಪೂಜೆ, ಪೂರ್ಣಾಹುತಿ ಕಾರ್ಯಗಳು ನಡೆದವು.

ದೇವಸ್ಥಾನ ಸಮಿತಿ ವತಿಯಿಂದ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ವಿಶೇಷ ಧಾರ್ಮಿಕ ಕಾರ್ಯಕ್ರಮ ಹಾಗೂ ಹೋಮ ಆಯೋಜಿಸಲಾಗಿತ್ತು. ಭಕ್ತರು, ಹಣ್ಣು, ಕಾಯಿ, ಕರ್ಪೂರ ಅರ್ಪಿಸಿದರು. ಮಧ್ಯಾಹ್ನ ಎಡೆ ಭೂತನ ಸೇವೆ ಹಾಗೂ ಅನ್ನಸಂತರ್ಪಣೆ ನಡೆಯಿತು. ರಾತ್ರಿ ದೇವಸ್ಥಾನದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಹನ್ನೆರೆಡು ಕೈವಾಡಸ್ಥರು, ದೇವಸ್ಥಾನ ಸಮಿತಿ ಸದಸ್ಯರು, ಗ್ರಾಪಂ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.