ಅರಣ್ಯ ನಾಶದಿಂದ ಭವಿಷ್ಯ ಕರಾಳ

ಪರಶುರಾಮಪುರ: ಹೋಬಳಿಯ ವಿವಿಧೆಡೆ ಮಂಗಳವಾರ ವಿಶ್ವಪರಿಸರ ದಿನಾಚರಣೆ ಆಚರಿಸಲಾಯಿತು.

ಸಿದ್ದೇಶ್ವರನ ದುರ್ಗದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ವನಸಿರಿ ಇಕೋ ಕ್ಲಬ್‌ನಿಂದ ಸಸಿ ನೆಟ್ಟು ಪರಿಸರ ಸಂರಕ್ಷಣೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು.

ಶಾಲೆ ಮುಖ್ಯ ಶಿಕ್ಷಕಿ ಆರ್.ಮಂಜುಳಾ ಮಾತನಾಡಿ, ಆಧುನಿಕ ಕಾಲಘಟ್ಟದಲ್ಲಿ ಪರಿಸರ ಮಲಿನತೆ ನಿಯಂತ್ರಿಸಿ ಗಿಡ-ಮರಗಳನ್ನು ಬೆಳೆಸಿ ಪೋಷಿಸಬೇಕು ಎಂದರು.

ಶಾಲಾ ಸಮಿತಿ ಅಧ್ಯಕ್ಷ ಬಾಬುಜಾನ್, ಶಿಕ್ಷಕರಾದ ಎಸ್.ಶಿವಣ್ಣ, ಚಿಕ್ಕಣ್ಣ, ನರಸಿಂಹಪ್ಪ, ಕೆಂಚವೀರಮ್ಮ ಇದ್ದರು.

ಸತ್ಯಮೇವ ಜಯತೇ: ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಸಸಿ ನೆಡುವ ಮೂಲಕ ಸತ್ಯಮೇವ ಜಯತೇ ಆಂದೋಲನಕ್ಕೆ ಚಾಲನೆ ನೀಡಲಾಯಿತು.

ಗ್ರಾಪಂ ಅಧ್ಯಕ್ಷ ಎಂ.ಆರ್.ರುದ್ರೇಶ ಮಾತನಾಡಿ, ಮರಗಳ ನಾಶದಿಂದ ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕುಸಿಯುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಭವಿಷ್ಯ ಕರಾಳವಾಗಲಿದೆ. ಆದ್ದರಿಂದ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಪ್ರತಿಜ್ಞೆ ಮಾಡಬೇಕು ಎಂದರು.

ಪಿಡಿಒ ಟಿ.ಈರಣ್ಣ, ಮುಖ್ಯಶಿಕ್ಷಕರಾದ ಮೂಡಲಗಿರಿಯಪ್ಪ, ಚಂದ್ರಣ್ಣ, ಜಿ.ವೆಂಕಟೇಶ ಇದ್ದರು.

Leave a Reply

Your email address will not be published. Required fields are marked *