ಜೈಲಿನಲ್ಲಿರುವ ಶಶಿಕಲಾಗೆ ಅನಾರೋಗ್ಯ, ಐಜಿಪಿ ರೂಪಾ ಖಡಕ್​ ಟ್ವೀಟ್

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ಎಐಡಿಎಂಕೆ ಪಕ್ಷದ ನಾಯಕಿ ಶಶಿಕಲಾ ಅನಾರೋಗ್ಯದಿಂದ ಬಳಲುತ್ತಿದ್ದಾರೆಂದು  ಜೈಲಿನಿಂದ ಮಾಹಿತಿ ಬಂದಿದೆ.

ಈ ಬಗ್ಗೆ ಐಜಿಪಿ ರೂಪಾ ಟ್ವಿಟರ್​ನಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ‘ಅನಾರೋಗ್ಯದ ನೆಪವೊಡ್ಡಿ ಯಾರೂ ಅಧಿಕಾರ ದುರುಪಯೋಗ ಮಾಡಿಕೊಳ್ಳಬಾರದು. ತಮ್ಮ ಪ್ರಭಾವದಿಂದ ವಿಶೇಷ ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಯತ್ನಿಸುತ್ತಾರೆ. ಹೈಫೈ ಎಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ನೆಪದಲ್ಲಿ ಹಾಯಾಗಿರುತ್ತಾರೆ. ಈ ಹಿಂದೆ ನಾನು ಕಾರಾಗೃಹದಲ್ಲಿ ಡಿಐಜಿ ಆಗಿದ್ದಾಗ ಹೊಸ ನಿಯಮ ಜಾರಿಗೆ ತಂದಿದ್ದೆ. ಪ್ರತಿ ಕೈದಿಗೂ ಅಲ್ಲಿಯೇ ಟಿಬಿ, ಎಚ್​ಐವಿ ಸೇರಿ ಎಲ್ಲ ಬಗೆಯ ಟೆಸ್ಟ್​ ಮಾಡಲಾಗುತ್ತಿತ್ತು. ಅದರ ಬಳಕೆ ಆಗಬೇಕು’ ಎಂದಿದ್ದಾರೆ.

Leave a Reply

Your email address will not be published. Required fields are marked *