ಜನಪದರ ವೈದ್ಯ ಪದ್ಧತಿ ಅತ್ಯುತ್ತಮ

ದಾವಣಗೆರೆ: ಮನುಷ್ಯ ತನ್ನ ಅನುಭವದ ಮೇಲೆ ಕಂಡುಕೊಂಡ ಜ್ಞಾನ ಮತ್ತು ತಂತ್ರಜ್ಞಾನ ಶ್ರೇಷ್ಠವಾದುದು. ಇದರಿಂದ ಸುಭಿಕ್ಷ ಬದುಕು ನಡೆಸಬಹುದು ಎಂದು ಹೆಬ್ಬಾಳಿನ ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಹೇಳಿದರು.

ಪಾರಂಪರಿಕ ವೈದ್ಯ ಗುರುಕುಲ, ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಮತ್ತು ಹಾವೇರಿ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ತರಳಬಾಳು ಕೃಷಿ ವಿಜ್ಞ್ಞಾನ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಶೈಕ್ಷಣಿಕ ಸಾಲಿನ ಜನಪದ ವೈದ್ಯ ಸರ್ಟಿಫಿಕೇಟ್ ಶಿಕ್ಷಣದ ಪ್ರಮಾಣಪತ್ರ ವಿತರಣೆ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಜನಪದರ ವೈದ್ಯ ಪದ್ಧತಿ ಆಧುನಿಕ ವೈದ್ಯಕೀಯ ವ್ಯವಸ್ಥೆಗಿಂತಲೂ ಉತ್ತಮವಾಗಿದೆ. ಈ ಬಗೆಯ ಶಿಕ್ಷಣವನ್ನು ಜಾನಪದ ವಿಶ್ವವಿದ್ಯಾಲಯ ನೀಡುತ್ತಿದೆ. ಇಲ್ಲಿ ಪಡೆದ ಜ್ಞಾನವನ್ನು ಸದ್ಬಳಕೆಯಾಗಬೇಕು. ಸಮಾಜದ ಸ್ವಾಸ್ಥೃ ಕಾಪಾಡಬೇಕು ಎಂದರು.

ಕರ್ನಾಟಕ ಜಾನಪದ ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಯತೀಶ್ ಎಲ್. ಕೋಡಾವತ್ ಮಾತನಾಡಿ, ಕರ್ನಾಟಕ ಜಾನಪದ ಸಾಹಿತ್ಯ, ಕಲೆ ಮತ್ತು ಪಾರಂಪರಿಕ ಜ್ಞಾನದ ಗಣಿ. ಈ ಸಂಪತ್ತಿನ ಸಂರಕ್ಷಣೆ, ಸಂವರ್ಧನೆ, ಸಂಗ್ರಹ, ಪರಿಷ್ಕರಣೆ ಹಾಗೂ ವೈಜ್ಞಾನಿಕ ಸಂಶೋಧನೆಯ ಉದ್ದೇಶದಿಂದ ವಿವಿ ಕಾರ್ಯೋನ್ಮುಖವಾಗಿದೆ ಎಂದರು.

ಪಾರಂಪರಿಕ ವೈದ್ಯ ಗುರುಕುಲದ ಪ್ರಾಚಾರ್ಯ ಪ್ರೊ.ಬಿ.ಎಂ. ಶಿವಮೂರ್ತಿ, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಟಿ.ಎನ್. ದೇವರಾಜ, ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್‌ನ ಸಂಸ್ಥಾಪಕ ಪ್ರೊ.ಜಿ. ಹರಿರಾಮಮೂರ್ತಿ, ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಗುರುಸಿದ್ದಪ್ಪ ನೇರ್ಲಿಗೆ, ರಾಜ್ಯ ಕಾರ್ಯದರ್ಶಿ ಶಾಂತವೀರಪ್ಪ ಇದ್ದರು.