ಆಧಾರ್ ಪಡೆಯಲು ಪರದಾಟ

ಗೋಣಿಕೊಪ್ಪ: ಆಧಾರ್ ಕಾರ್ಡ್ ಪಡೆಯಲು ಜನನ ಪ್ರಮಾಣಪತ್ರ ಇಲ್ಲದೆ ಆದಿವಾಸಿಗಳು ಪರದಾಡುತ್ತಿದ್ದಾರೆ.

ಆದಿವಾಸಿಗಳಿಗೆ ಮೊಬೈಲ್ ಸೇವೆ ಮೂಲಕ ಆಧಾರ್ ದಾಖಲೆ ಕಲ್ಪಿಸಲು ಯೋಜನೆ ರೂಪಿಸಿರುವ ಹುದಿಕೇರಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಅಭಿಯಾನದಲ್ಲಿ 50ಕ್ಕೂ ಹೆಚ್ಚು ಆದಿವಾಸಿಗಳಲ್ಲಿ ಮೂಲ ಜನನ ಪ್ರಮಾಣಪತ್ರವಿಲ್ಲದೆ ಆಧಾರ್ ಕಾರ್ಡ್‌ನಿಂದ ವಂಚಿತರಾದರು.

ಅಂಚೆ ಕಚೇರಿಗಳಲ್ಲಿ ನೀಡುವ ಆಧಾರ್ ನೋಂದಣಿಗೆ ವಿವಿಧ ದಾಖಲೆಗಳಲ್ಲಿ ಜನನ ದಿನಾಂಕ ದಾಖಲೆಗಳಿದ್ದರೂ ನೀಡಲಾಗುತ್ತದೆ. ಆದರೆ, ಆದಿವಾಸಿಗಳಿಗೆ ಸರ್ಕಾರದ ಸವಲತ್ತು ಪಡೆಯಲೆಂದೇ ರೂಪಿಸಿರುವ ವಿಶೇಷ ಅಭಿಯಾನದಲ್ಲಿ ಅಧಿಕಾರಿಗಳು ಮೂಲ ದಾಖಲೆ ಕೇಳುತ್ತಿರುವುದರಿಂದ ತೊಂದರೆಯಾಗಿದೆ ಎಂದು ಆದಿವಾಸಿಗಳು ಹೇಳಿದರು.

ವಿವಿಧ ದಾಖಲಾತಿಗಳಲ್ಲಿರುವ ಜನ್ಮ ದಿನಾಂಕವನ್ನು ಆಧರಿಸಿ ಆಧಾರ್‌ಕಾರ್ಡ್ ನೋಂದಣಿ ಮಾಡಲು ಸರ್ಕಾರ ಮುಂದಾಗಬೇಕು ಎಂದು ಆದಿವಾಸಿಗಳು ಆಗ್ರಹಿಸಿದರು.

Leave a Reply

Your email address will not be published. Required fields are marked *