ಕಂಪ್ಲಿ: ದೇವಸಮುದ್ರ ಗ್ರಾಮದಲ್ಲಿ ಕಾರ ಹುಣ್ಣಿಮೆ ನಿಮಿತ್ತ ಬುಧವಾರ ಸಂಜೆ ಕರಿ ಹರಿಸುವ ಸ್ಪರ್ಧೆ ನಡೆಯಿತು. ಸ್ಥಳೀಯರಾದ ಜಿ.ವೀರನಗೌಡ ಅವರ ಎತ್ತುಗಳು ಪ್ರಥಮ, ಕುರಗೋಡು ಗಾಳೆಪ್ಪ ಅವರ ಎತ್ತುಗಳು ದ್ವಿತೀಯ ಸ್ಥಾನ ಪಡೆದವು. ವಿಜೇತ ಎತ್ತುಗಳನ್ನು ಮೆರವಣಿಗೆ ಮಾಡಲಾಯಿತು. ಪ್ರಮುಖರಾದ ಜಿ.ಶಿವಲಿಂಗನಗೌಡ, ಅಳ್ಳಳ್ಳಿ ಮಂಜುನಾಥ, ಸೂಗೂರು ಶೇಖರ್, ಜಿ.ಬಸನಗೌಡ, ಗಾಳೆಪ್ಪ, ಪಿ.ನೀಲಕಂಠ, ಕರೆಪ್ಪ ಇತರರಿದ್ದರು.
TAGGED:ಕಾರ ಹುಣ್ಣಿಮೆ