ಪಪ್ಪಾ ಒಳ್ಳೆಯವರಾ? ಕೆಟ್ಟವರಾ? ಪ್ರಶ್ನೆಗೆ ಧೋನಿ ಮಗಳು ಕೊಟ್ಟಳು ಸ್ಮಾರ್ಟ್​ ಉತ್ತರ

ನವದೆಹಲಿ: ಟೀಂ ಇಂಡಿಯಾ ಇಂಗ್ಲೆಂಡ್​ ಟೆಸ್ಟ್​ ಸರಣಿಯಲ್ಲಿ ನಿರತರಾಗಿದ್ದರೆ, ಟೆಸ್ಟ್​ನಿಂದ ವಿದಾಯ ಹೇಳಿರುವ ಕೂಲ್​ ಕ್ಯಾಪ್ಟನ್​ ಧೋನಿ ಅವರು ತಮ್ಮ ಬಿಡುವಿನ ವೇಳೆಯಲ್ಲಿ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ.

ವಿಶೇಷವಾಗಿ ತಮ್ಮ ಮುದ್ದಿನ ಮಗಳು ಜೀವಾಳೊಂದಿಗೆ ಹೆಚ್ಚಿನ ಸಮಯ ಕಳೆಯುವ ಧೋನಿ, ಅದಕ್ಕೆ ಸಂಬಂಧಪಟ್ಟ ವಿಡಿಯೋಗಳನ್ನು ತಮ್ಮ ಇನ್​​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡುತ್ತಿರುತ್ತಾರೆ. ಇದೀಗ ಹೊಸ ವಿಡಿಯೋವೊಂದನ್ನು ಶೇರ್​ ಮಾಡಿದ್ದು, ಬಲೂನ್​ನಿಂದ ಮಗಳ ತಲೆಗೆ ಹೊಡೆಯುತ್ತಾ ತುಂಟಾಟ ಆಡುತ್ತಿರುವ ದೃಶ್ಯವನ್ನು ಧೋನಿ ಪತ್ನಿ ಸಾಕ್ಷಿ ಅವರು ಚಿತ್ರೀಕರಿಸಿದ್ದಾರೆ.

ವಿಡಿಯೋದಲ್ಲಿ ಧೋನಿ ಕುರಿತಾಗಿ ಪತ್ನಿ ಸಾಕ್ಷಿ ಅವರು ಪಪ್ಪಾ ಒಳ್ಳೆಯವರಾ? ಅಥವಾ ಕೆಟ್ಟವರಾ? ಎಂಬ ಪ್ರಶ್ನೆಗೆ ಮಗಳು ಜೀವಾ ಎಲ್ಲರೂ ಒಳ್ಳೆಯವರೇ ಎಂದು ಬಹಳ ಜಾಣತನದಿಂದ ಮುದ್ದಾದ ಉತ್ತರವನ್ನು ನೀಡಿದ್ದಾಳೆ.

ಧೋನಿ ಅವರು 2014ರಲ್ಲೇ ಆಸ್ಟ್ರೇಲಿಯಾ ಪ್ರವಾಸದ ವೇಳೆ ಟೆಸ್ಟ್​ ಪಂದ್ಯಗಳಿಗೆ ನಿವೃತ್ತಿ ಘೋಷಿಸಿದ್ದರು.(ಏಜೆನ್ಸೀಸ್​)

View this post on Instagram

Very smart

A post shared by M S Dhoni (@mahi7781) on