ಹಾವೇರಿ: ರಾಜ್ಯದಲ್ಲಿ ಚಿರತೆಗೆಳ ಹಾವಳಿ ಹೆಚ್ಚಾಗಿದ್ದು, ಕುರಿಯನ್ನು ತಿಂದು ಹಾಕಿರುವ ಚಿರತೆಗಳು, ರೈತರ ಜಮೀನಿನ ಪಕ್ಕದ ಮರಗಳ ಮೇಲೆ ಓಡಾಡುತ್ತಿದ್ದ, ಭಯದ ವಾತಾವರಣ ಸೃಷ್ಟಿಸಿವೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮಾಸಣಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಪ್ರದೇಶದಲ್ಲಿ ಇಂದು ಸಂಜೆ ಕುರಿಯನ್ನು ತಿಂದಿರುವ ಚಿರತೆಗಳು ಅಲ್ಲಿರುವ ಮರಗಳನ್ನು ಏರಿ ಓಡಾಡಲಾರಂಭಿಸಿವೆ. ರೈತರ ಕಣ್ಣಿಗೆ ಕಾಣಿಸಿಕೊಂಡ ಚಿರತೆ ಹಾಗೂ ಅದರ ಮರಿಗಳು ಮೆಕ್ಕೆಜೋಳ ಬೆಳೆಯ ನಡುವೆ ಓಡಾಡಿವೆ.
ಮಾತ್ರವಲ್ಲದೆ ಮರಗಳನ್ನು ಏರಿ, ಓಡಾಡುತ್ತಿದ್ದು, ಯಾವಾಗ ಬೇರೆ ಸಾಕುಪ್ರಾಣಿಗಳು ಅಥವಾ ಮನುಷ್ಯರ ಮೇಲೆ ಎರಗುತ್ತವೋ ಎಂಬ ಆತಂಕವೂ ಮೂಡಿದೆ. ಚಿರತೆಗಳ ಈ ಓಡಾಟದ ದೃಶ್ಯವನ್ನು ಸ್ಥಳೀಯರು ಮೊಬೈಲ್ಫೋನ್ ಮೂಲಕ ಸೆರೆ ಹಿಡಿದಿದ್ದಾರೆ.
ಮಾಸಣಗಿ ಮಾತ್ರವಲ್ಲದೆ ಶಿಡೇನೂರು, ಕೆರವಡಿ ಹಾಗೂ ನಂದಿಹಳ್ಳಿ ಗ್ರಾಮದಲ್ಲಿ ಭಯದ ವಾತಾವರಣ ಉಂಟಾಗಿದ್ದು, ರೈತರು ಜಮೀನುಗಳಿಗೆ ತೆರಳಲಿಕ್ಕೂ ಹೆದರುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಚಿರತೆಯನ್ನು ಕಂಡು ಅವುಗಳನ್ನು ಹಿಡಿಯಲು ಅರಣ್ಯಾಧಿಕಾರಿಗಳು ಬೋನ್ಗಳನ್ನು ಇರಿಸಿದ್ದಾರೆ.
ಹಾವೇರಿ ಜಿಲ್ಲೆ ಮಾಸಣಗಿ ಗ್ರಾಮದಲ್ಲಿ ರೈತರ ಜಮೀನಿನ ಬಳಿ ಮರಗಳ ಮೇಲೆ ಓಡಾಡುತ್ತಿರುವ ಚಿರತೆಗಳು. ಭಯದ ವಾತಾವರಣದಲ್ಲಿ ಕೃಷಿಕರು.
ವಿವರಗಳಿಗೆ https://t.co/YaFZZbZDD9 ನೋಡಿ.. pic.twitter.com/2Eu252tf6M— Vijayavani (@VVani4U) August 14, 2021
ಈತ ಡೇಟಿಂಗ್ ಕಿಂಗ್: ಇದುವರೆಗೆ 335 ಮಹಿಳೆಯರ ಜತೆ ಡೇಟ್ ಮಾಡಿರುವ ಇವನ ಟಾರ್ಗೆಟ್ ಎಷ್ಟು ಗೊತ್ತೇ?