ಹುಬ್ಬಳ್ಳಿ : ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮೀಸಲಾತಿಗಾಗಿ ಹೋರಾಟ ನಡೆಸಿದ್ದ ಪಂಚಮಸಾಲಿ ಸಮಾಜದವರ ಮೇಲೆ ಲಾಠಿ ಚಾರ್ಜ್ ನಡೆಸಿದ ಪೊಲೀಸರ ಕ್ರಮ ಖಂಡಿಸಿ ನಗರದ ವಿವಿಧೆಡೆ ಸಮಾಜದ ಪ್ರಮುಖರು ಹಾಗೂ ಹಲವಾರು ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಹೋರಾಟ ಹತ್ತಿಕ್ಕುವ ಉದ್ದೇಶದಿಂದ ಸರ್ಕಾರ ಲಾಠಿ ಚಾರ್ಜ್ ಮಾಡಿಸಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಮೀಸಲಾತಿ ನೀಡದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಉಣಕಲ್ ಕ್ರಾಸ್ನಲ್ಲಿ ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ನ್ಯಾಯಯುತ ಹೋರಾಟಕ್ಕೆ ಸರ್ಕಾರ ಸ್ಪಂಧಿಸಬೇಕು ಎಂದು ಒತ್ತಾಯಿಸಿದರು. ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಜಿ.ಜಿ. ದ್ಯಾವನಗೌಡ್ರ, ಎಸ್.ಕೆ. ಕೋಟ್ರೇಶ, ಜಗದೀಶ ಬಳ್ಳಾರಿ, ವಿನೋದ ಅಲಾಡಿ, ಬಸವರಾಜ ಬಳಿಗಾರ, ಶಿದ್ದೇಶ ಕಬಾಡರಲಕ್ಷ್ಮೀ ಬಿಜ್ಜರಗಿ, ಮಹಾಲಕ್ಷ್ಮೀ ಸಣ್ಣಗೌಡರ ಹಾಗೂ ಇತರರು ಹಾಜರಿದ್ದರು.
ನವನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಹೊರಕೇರಿ, ಸುನೀತಾ ಮಾಳವಾದಕರ, ಶಂಕರಗೌಡ ಪಾಟೀಲ, ಕರಿಯಪ್ಪ ಅವರಾದಿ ಹಾಗೂ ಮತ್ತಿತರರು ಪಾಲ್ಗೊಂಡು, ಹೋರಾಟಗಾರರ ಮೇಲೆ ನಡೆಸಿದ ಲಾಠಿ ಚಾರ್ಜ್ ಖಂಡಿಸಿದರು.
ಹಳೇ ಹುಬ್ಬಳ್ಳಿ ಇಂಡಿಪಂಪ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಪಂಚಮಸಾಲಿ ಸಮಾಜದ ಪ್ರಮುಖರು ನಡೆಸಿದ ಪ್ರತಿಭಟನೆಯಲ್ಲಿ ರಾಜು ಜರತಾರಘರ, ಸತೀಶ ಶೇಜವಾಡ್ಕರ, ಮಂಜುನಾಥ ಕಾಟ್ಕರ, ತೋಟಪ್ಪ ನಿಡಗುಂದಿ, ಅನುಪ ಬಿಜವಾಡ, ಶಿವಯ್ಯ ಹಿರೇಮಠ, ವಿನಾಯಕ ಲದವಾ, ಜಗದೀಶ ಕಂಬಳಿ, ಮಹೇಶ ಘಾಟಿಗೆ, ಹುಚ್ಚಪ್ಪ ರೋಗಿ, ಸಂಜು ಬುಗಡಿ, ವೆಂಕಟೇಶ ಕಾಟವೆ, ಮಂಜು ಊಟವಾಲೆ,ಪ್ರಕಾಶ ಬುರುಬುರೆ, ಸವಿತಾ ಚವ್ಹಾಣ, ಲತಾ ಅಂಗಡಿ, ಸರೋಜಾ ಶಾಂತಗೇರಿ ಹಾಗೂ ಇತರರು ಪಾಲ್ಗೊಂಡಿದ್ದರು.
ನಗರದ ಕೇಶ್ವಾಪುರ ಹಾಗೂ ಗೋಕುಲ ರಸ್ತೆಯಲ್ಲಿಯೂ ಪಂಚಮಸಾಲಿ ಸಮಾಜದ ಪ್ರಮುಖರು ಪ್ರತಿಭಟನೆ ನಡೆಸಿದರು.