ವಿಜಯವಾಣಿ ಸುದ್ದಿಜಾಲ ಧಾರವಾಡ
ಡಾ. ಪಂಚಾಕ್ಷರಿ ಹಿರೇಮಠರ ಸಾಹಿತ್ಯದ ಮೂಲ ತಿರುಳೇ ಆದರ್ಶ ಪ್ರೇಮ ಹಾಗೂ ಮಾನವೀಯತೆಯಾಗಿದೆ. ಅವರೊಬ್ಬ ಶ್ರೇಷ್ಠ ಅನುವಾದಕರು. ಅನುವಾದ ಕಾರ್ಯವನ್ನು ಎಂದೂ ಹಣ ಸಂಪಾದನೆಗಾಗಿ ಮಾಡಲಿಲ್ಲ ಎಂದು ಬಿಸಲಹಳ್ಳಿಯ ಪವನಕುಮಾರ ಪ್ರಭುದೇವ ಕಮ್ಮಾರ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ವಿದ್ಯಾವಾಚಸ್ಪತಿ ಡಾ. ಪಂಚಾಕ್ಷರಿ ಹಿರೇಮಠ ದತ್ತಿ ನಿಮಿತ್ತ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಡಾ. ಪಂಚಾಕ್ಷರಿ ಹಿರೇಮಠ ಅವರ ಸ್ವಾತಂತ್ರ್ಯ ಹೋರಾಟ ಮತ್ತು ಸಾಹಿತ್ಯ ಕುರಿತು ಮಾತನಾಡಿದರು.
ಡಾ. ಪಂಚಾಕ್ಷರಿ ಹಿರೇಮಠ ಒಬ್ಬ ಬರಹಗಾರ, ಕಾದಂಬರಿಕಾರ, ವಿಮರ್ಶಕ, ನಾಟಕಕಾರ, ಪ್ರಬಂಧಕರಾಗಿ ಅಪ್ಪಟ ಸ್ವಾತಂತ್ರ್ಯ ಪ್ರಿಯರೂ ಆಗಿದ್ದಾರೆ. ಅವರ ಬಹುಮುಖ ವ್ಯಕ್ತಿತ್ವಕ್ಕೆ ಬಾಲ್ಯದಲ್ಲಿ ತಾಯಿ ನೀಡಿದ ಸಂಸ್ಕಾರವೇ ಮುಖ್ಯ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ ನಿಜಾಮರ ಆಳ್ವಿಕೆಗೆ ಒಳಪಟ್ಟ ಕೊಪ್ಪಳದಲ್ಲಿ ನಿಜಾಮನ ದಬ್ಬಾಳಿಕೆ ಇತ್ತು. ಸ್ವಾಮಿ ರಮಾನಂದ ತೀರ್ಥರ ಮುಂದಾಳತ್ವದಲ್ಲಿ ಹೈದ್ರಾಬಾದ ವಿಮೋಚನಾ ಚಳವಳಿ ಉಗ್ರ ಸ್ವರೂಪ ಪಡೆದಿತ್ತು. ಬಾಲಕರಾಗಿದ್ದ ದಬ್ಬಾಳಿಕೆ ವಿರೋಧಿಸಿ ಕೊಪ್ಪಳ ಕೋಟೆಯ ಮೇಲೆ ಧ್ವಜ ಹಾರಿಸಿ ರಾಷ್ಟ್ರಪ್ರೇಮ ದೇಶಭಕ್ತಿ ತೋರಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಡಾ. ಪಂಚಾರಿ ಹಿರೇಮಠ ಕನ್ನಡ ಸಾಹಿತ್ಯ ಅನುವಾದದ ಪ್ರಕಾಂಡ ಪಂಡಿತರು. ಮಾನವೀಯತೆ ಕರುಣೆಯ ಸಾಕಾರಮೂರ್ತಿಗಳು. ಅವರ ಸ್ವಾತಂತ್ರ್ಯ ಪ್ರೇಮವು ದಿ. ಬಸವರಾಜ ಕಟ್ಟಿಮನಿ ಅವರ ಮಾಡಿ ಮಡಿದವರು ಎಂಬ ಕಾದಂಬರಿ ನೆನಪಿಸುತ್ತಿದೆ ಎಂದರು.
ದತ್ತಿದಾನಿ ಜಯದೇವ ಹಿರೇಮಠ, ಡಾ. ಲಿಂಗರಾಜ ಅಂಗಡಿ, ಎಂ.ಎಸ್. ನರೇಗಲ್, ವಿ.ಬಿ. ಸಂತೋಜಿ, ಶ್ರೀನಿವಾಸ ವಾಡಪ್ಪಿ, ಬಿ.ಎಸ್. ಶಿರೋಳ, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ವಂದಿಸಿದರು.
ಪಂಚಾಕ್ಷರಿ ಹಿರೇಮಠ ಶ್ರೇಷ್ಠ ಅನುವಾದಕ

You Might Also Like
ಏಳನೇ ತಿಂಗಳಲ್ಲಿ ಹೆರಿಗೆಯಾದರೆ ಏನಾಗುತ್ತದೆ?; ಮಗುವಿನ ಆರೋಗ್ಯದ ಮೇಲಾಗುವ ಪರಿಣಾಮವೇನು.. ತಿಳಿದುಕೊಳ್ಳಲೇಬೇಕಾದ ಮಾಹಿತಿ | Health Tips
ಗರ್ಭಾವಸ್ಥೆಯಲ್ಲಿ ಮಗುವನ್ನು 9 ತಿಂಗಳುಗಳ ಕಾಲ ಇಟ್ಟುಕೊಳ್ಳುವುದು ಮುಖ್ಯ ಎಂದು ವೈದ್ಯರು ಸೇರಿದಂತೆ ಎಲ್ಲಾ ತಜ್ಞರು…
ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಬೇಕೇ?; ಅಡುಗೆಮನೆಯಲ್ಲಿನ ಈ 2 ವಸ್ತುಗಳನ್ನು ತಪ್ಪದೆ ಬಳಸಿ | Health Tips
ಇತ್ತೀಚಿನ ದಿನಗಳಲ್ಲಿ ಕಳಪೆ ಜೀವನಶೈಲಿ ಮತ್ತು ಅನಿಯಮಿತ ಆಹಾರ ಪದ್ಧತಿಯಿಂದಾಗಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವ ಸಮಸ್ಯೆ…
ಚಳಿಗಾಲದಲ್ಲಿ ಹುಣಸೆಹಣ್ಣು ತಿಂದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? health benefits of tamarind
health benefits of tamarind : ನಮ್ಮ ದಿನನಿತ್ಯದ ಅಡುಗೆಯಲ್ಲಿ ಹುಣಸೆಹಣ್ಣನ್ನು ಬಳಸುವುದರಿಂದ ನಮಗೆ ಅರಿವಿಲ್ಲದೆಯೇ…