25.9 C
Bengaluru
Wednesday, January 22, 2020

ಅಳಿವಂಚಿನಲ್ಲಿ ಶ್ರೀತಾಳೆ ಮರ: ವಿಶ್ವದ ಹಸಿರುಪಟ್ಟಿಯಲ್ಲಿ ಇರುವ ವೃಕ್ಷ

Latest News

ತಾಪಂ ಆಡಳಿತ ಶೀಘ್ರ ಕಾರ್ಯಾರಂಭ

ಅಜ್ಜಂಪುರ: ತಾಪಂ ಆಡಳಿತ ಕಾರ್ಯ ಶೀಘ್ರ ಆರಂಭಿಸಲಾಗುವುದು. ಇದಕ್ಕೆ ಪೂರಕವಾಗಿ ಅಜ್ಜಂಪುರ ವ್ಯಾಪ್ತಿಯ ತಾಲೂಕು ಪಂಚಾಯಿತಿ ಸದಸ್ಯರನ್ನು ತರೀಕೆರೆಯಿಂದ ಪ್ರತ್ಯೇಕಿಸುವ ಕಾರ್ಯ ಪ್ರಗತಿಯಲ್ಲಿದೆ...

ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಿಗಿ ಭದ್ರತೆ

ಚಿಕ್ಕಮಗಳೂರು: ಮಂಗಳೂರಿನಲ್ಲಿ ಬಾಂಬ್ ಪತ್ತೆಯಾದ ಘಟನೆ ಹಿನ್ನೆಲೆಯಲ್ಲಿ ಪ್ರಮುಖ ಧಾರ್ವಿುಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡು, ಬಾಬಾಬುಡನ್​ಗಿರಿ, ಮುಳ್ಳಯ್ಯನಗಿರಿ, ಭದ್ರಾ ಅಣೆಕಟ್ಟೆ ಪ್ರದೇಶದಲ್ಲಿ ಪೊಲೀಸ್...

ದೊರೆತ ಉದ್ಯೋಗದಲ್ಲೇ ನಿಷ್ಠೆ ತೋರಿ: ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗೆ ಶಾಸಕ ಎಸ್.ವಿ ರಾಮಚಂದ್ರ ಸಲಹೆ

ಜಗಳೂರು: ಸರ್ಕಾರಿ ಕೆಲಸಕ್ಕೆ ಅಲಂಬಿತರಾಗದೇ ಸಿಕ್ಕ ಉದ್ಯೋಗವನ್ನು ನಿಷ್ಠೆಯಿಂದ ಮಾಡಿದರೆ ಮುಂದೆ ಅವಕಾಶದ ಬಾಗಿಲುಗಳು ತೆರೆಯುತ್ತವೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು. ಇಲ್ಲಿನ...

ಕೋತಿ ಹಾವಳಿಗೆ ಹಣ್ಣಿನ ಗಿಡ ಮದ್ದು

ಚಿಕ್ಕಮಗಳೂರು: ಕಡೂರಿನ ಹಲವೆಡೆ ತಲೆದೋರಿರುವ ಮಂಗಗಳ ಹಾವಳಿ ತಡೆಗೆ ಗ್ರಾಮಗಳ ಹೊರಭಾಗದಲ್ಲಿ ಹಣ್ಣಿನ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಅವುಗಳನ್ನು ಆಕರ್ಷಿಸಬಹುದು. ಈ...

ಕರೋನಾ ವೈರಸ್​ ಪತ್ತೆ ಮಾಡಲು ಕೇರಳದ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್​ ಕೇಂದ್ರಗಳ ಸ್ಥಾಪನೆ

ತಿರುವನಂತಪುರ: ಕರೋನಾ ವೈರಸ್​ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ಸಲಹೆ ಮೇರೆಗೆ ಕೇರಳದ ವಿಮಾನ ನಿಲ್ದಾಣಗಳಲ್ಲಿ ವೈರಸ್​ ಪತ್ತೆ ಮಾಡುವ ಸ್ಕ್ರೀನಿಂಗ್​ ಕೇಂದ್ರಗಳನ್ನು ಸ್ಥಾಪಿಸಲಾಗಿದೆ...

ಉಡುಪಿ: ಶ್ರೀತಾಳೆ ಮರ ಎಂಬ ವಿಶಿಷ್ಟ ಸಸ್ಯ ಪ್ರಬೇಧದ ಸಂತತಿ ಮೌಢ್ಯದಿಂದಾಗಿ ನಾಶವಾಗುತ್ತಿದ್ದು, ಪರಿಣಾಮ ವಿಶ್ವದ ಹಸಿರು ಪಟ್ಟಿಯಲ್ಲಿದ್ದ ಈ ಮರ ಅಳಿವಂಚಿನತ್ತ ಸಾಗಿ ಕೆಂಪು ಪಟ್ಟಿಗೆ ಸೇರ್ಪಡೆಯಾಗಿದೆ.

ಶ್ರೀತಾಳೆ ಮರದಲ್ಲಿ ಹೂವು ಬಿಟ್ಟರೆ ಬರಗಾಲ ಬಂದು ಜನ ಸಾಯುತ್ತಾರೆ ಎಂಬ ಮೂಢನಂಬಿಕೆ ಬಹಳ ವರ್ಷಗಳಿಂದ ಇತ್ತು. ಕ್ರಮೇಣ ಆ ಮೂಢನಂಬಿಕೆ ಕಡಿಮೆಯಾಗಿ ಜಾಗಕ್ಕೆ ಸಂಬಂಧಪಟ್ಟವರಿಗೆ ಇದರಿಂದ ಸಮಸ್ಯೆಯಾಗುತ್ತದೆ ಎಂಬ ಅಪನಂಬಿಕೆ ಆರಂಭಗೊಂಡಿತ್ತು. ಈ ಕಾರಣದಿಂದ ಮರವನ್ನು ಹೂವು ಬಿಡುವ ಒಂಟಿ ಹೊಂಬಾಳೆ(ಕೋಡು) ಅರಳಿ ನಿಂತಾಗಲೇ ಕಡಿಯಲಾಗುತ್ತಿತ್ತು. ಇದರಿಂದ ಈ ಹೂವು ಬೀಜವಾಗಿ ಸಂತತಿ ವಿಸ್ತಾರಗೊಳ್ಳಲು ಸಾಧ್ಯವಾಗದೆ ನಾಶದ ಅಂಚಿಗೆ ತಲುಪಿದೆ ಎಂದು ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರ ನಿರ್ದೇಶಕ ಪ್ರೊ.ಎಸ್.ಎ.ಕೃಷ್ಣಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.

ಹೂ ಬಿಟ್ಟ ಶ್ರೀತಾಳೆ ಮರ: ಆತ್ರಾಡಿ ಸಮೀಪದ ಪರೀಕ ರಸ್ತೆ ಬಳಿ ಇರುವ ಅಪೂರ್ವ ಕಾಡು ಶ್ರೀತಾಳೆ ಮರ ಸುಮಾರು 62 ವರ್ಷಗಳ ಅನಂತರ ಹೂ ಬಿಟ್ಟು ಸೌಂದರ್ಯದಿಂದ ಕಂಗೊಳಿಸುತ್ತಿದೆ. ಜೀವಿತಾವಧಿಯಲ್ಲಿ ಸುಮಾರು 50-60 ವರ್ಷಗಳ ಅನಂತರ ಒಮ್ಮೆ ಮಾತ್ರ ಹೂವು ಬಿಡುವುದು ವಿಶೇಷ. ಅದಕ್ಕಾಗಿ ಇದನ್ನು ಸಂಸ್ಕೃತದಲ್ಲಿ ಅವಿನಾಶಿ ಎಂಬ ಹೆಸರಿನಲ್ಲಿ ಕರೆಯಲಾಗುತ್ತದೆ. 2007ರಲ್ಲಿ ಪೊಳಲಿಯ ಕಾಡಿನಲ್ಲಿ ಶ್ರೀತಾಳೆ ಮರಗಳು ಹೂಬಿಟ್ಟಿರುವುದು ದಾಖಲು ಮಾಡಿದ್ದೆವು. ಎರಡು ವರ್ಷಗಳ ಹಿಂದೆ ಪಡುಪಣಂಬೂರಿನ ಈ ಮರ ಹೂಬಿಟ್ಟು ಕಾಯಿಗಳು ದೊರಕಿತ್ತು. ಅವುಗಳನ್ನು ಸಂಗ್ರಹಿಸಿ 2.50 ಲಕ್ಷ ಬೀಜಗಳನ್ನು ವಿತರಿಸಿದ್ದೇವೆ. ಇತ್ತೀಚೆಗಿನ ವರ್ಷಗಳಲ್ಲಿ ಕಂಡುಬಂದ ಎರಡನೆ ಮರ ಇದಾಗಿದೆ ಎನ್ನುತ್ತಾರೆ ಪ್ರೊ.ಎಸ್.ಎ.ಕೃಷ್ಣಯ್ಯ.

ಶ್ರೀಲಂಕಾದ ರಾಷ್ಟ್ರೀಯ ಮರ: ಶ್ರೀತಾಳೆ ಮರ ಶ್ರೀಲಂಕಾದ ರಾಷ್ಟ್ರೀಯ ಮರ ಎಂಬ ಗೌರವ ಪಡೆದುಕೊಂಡಿದೆ. ಪೂರ್ವಜರು ಈ ಮರವನ್ನು ಪರ್ಣ ಕುಟೀರ, ಮಳೆ ಗಾಳಿಯಿಂದ ರಕ್ಷಣೆಗೆ ತಂತ್ರವಾಗಿ, ಕೃಷಿ ಪರಿಕರ, ಬರವಣಿಗೆಗೆ ಬಳಕೆ ಮಾಡುತ್ತಿದ್ದರು. ಇದರ ವೈಜ್ಞಾನಿಕ ಸಸ್ಯನಾಮ ಕೊರಿಫಾ ಅಂಬ್ರಕುಲಿಫೆರಾ. ತುಳುವಿನಲ್ಲಿ ಪಣೋಲಿದ ಮರ, ಸಾಮಾನ್ಯವಾಗಿ ಸೀತಾಳೆ ಮರ ಎಂದು ಕರೆಯಲಾಗುತ್ತದೆ.

ಒಂದು ಮರದಲ್ಲಿ ಎರಡು ಟನ್ ಬೀಜ: ಶ್ರೀತಾಳೆ ಮರದಲ್ಲಿ ಹೂ ಬಿಟ್ಟಾಗ ಲೆಕ್ಕಕ್ಕೆ ಸಿಗದಷ್ಟು ಹೂವುಗಳು ಸುಂದರವಾಗಿ ಕಾಣುತ್ತವೆ. ಎಂಟು ತಿಂಗಳ ಕಾಲ ಹೂವು ಮರದಲ್ಲಿರುತ್ತದೆ. ಬಳಿಕ ಎಂಟು ತಿಂಗಳ ಕಾಲ ಬೀಜ ಕೂಡ ಮರದಲ್ಲಿರುತ್ತದೆ. ಅನಂತರ ಎಲ್ಲವೂ ಉದುರಿ ಬೀಳುತ್ತವೆ. ಒಂದು ಮರದಲ್ಲಿ ಸುಮಾರು ಎರಡು ಟನ್ ಬೀಜಗಳು ಸಿಗುತ್ತವೆ. ಮುಂದೆ ಕ್ರಮೇಣ ಈ ಮರ ಸಾಯುತ್ತದೆ ಎಂದು ಪ್ರೊ.ಎಸ್.ಎ. ಕೃಷ್ಣಯ್ಯ ಮಾಹಿತಿ ನೀಡಿದ್ದಾರೆ.

ಆತ್ರಾಡಿಯ ಮರ ಸಂರಕ್ಷಣೆ: ಆತ್ರಾಡಿ ಪರೀಕದಲ್ಲಿ ಕಂಡುಬಂದಿರುವ ಕಾಡು ಶ್ರೀತಾಳೆ ಮರದ ಸಂರಕ್ಷಣೆಗೆ ಯೋಜನೆ ರೂಪಿಸಲಾಗುತ್ತಿದೆ. ಇದರ ಬೀಜವನ್ನು ಸಂಗ್ರಹಿಸಿ ತಳಿಯ ಪುನರುತ್ಪತ್ತಿ ಕಾರ್ಯ ಮಾಡಲಾಗುತ್ತದೆ. ಸ್ಥಳೀಯರಾದ ಜಗಜ್ಜೀವನ್ ಶೆಟ್ಟಿ ನೀಡಿದ ಮಾಹಿತಿಯಂತೆ ಮರಕ್ಕೆ 62 ವರ್ಷ ಆಗಿರಬಹುದೆಂದು ಲೆಕ್ಕಾಚಾರ ಹಾಕಲಾಗಿದೆ. ಈ ಮರವನ್ನು ಸಂರಕ್ಷಿಸಿ ಉಳಿಸುವ ಪ್ರಯತ್ನದಲ್ಲಿ ಸಾಮಾಜಿಕ ಕಾರ್ಯಕರ್ತ ಗಣೇಶ್‌ರಾಜ್ ಸರಳೇಬೆಟ್ಟು ಮತ್ತು ದಿನೇಶ್ ಪೂಜಾರಿ ಕೈ ಜೋಡಿಸಿದ್ದಾರೆ.

ಅಳಿವಂಚಿನಲ್ಲಿರುವ ಶ್ರೀತಾಳೆ ಮರವನ್ನು ಸಂರಕ್ಷಣೆ ಮಾಡಬೇಕಿದೆ. ಈ ಪರಂಪರಾ ವೃಕ್ಷವನ್ನು ಉಳಿಸುವ ನಿಟ್ಟಿನಲ್ಲಿ ಸ್ಥಳೀಯ ಜನರಿಗೆ ಮಾಹಿತಿ ನೀಡುವ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.

ಪ್ರೊ.ಎಸ್.ಎ.ಕೃಷ್ಣಯ್ಯ ನಿರ್ದೇಶಕ, ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರ, ಉಡುಪಿ

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...