ಪಳ್ಳಿ ಜಯರಾಮ ಶೆಟ್ಟಿ ಸ್ಮಾರಕ ಬಿ ಡಿವಿಷನ್ ಫುಟ್ಬಾಲ್ ಲೀಗ್ ಪಂದ್ಯಾಟ :ಮರ್ಚಂಟ್ಸ್ ಫುಟ್ಬಾಲ್ ತಂಡಕ್ಕೆ ಪ್ರಶಸ್ತಿ

blank

ಮಂಗಳೂರು: ದ.ಕ. ಜಿಲ್ಲಾ ಫುಟ್ಬಾಲ್ ಸಂಸ್ಥೆ ವತಿಯಿಂದ ಎಕ್ಕೂರಿನ ಫಿಶರೀಸ್ ಕಾಲೇಜು ಮೃದಾನದಲ್ಲಿ ನಡೆದ 2024-25 ಸಾಲಿನ ಬಿ ಡಿವಿಷನ್ ಲೀಗ್ ಪಂದ್ಯಾಟದಲ್ಲಿ ಮಂಗಳೂರಿನ ಮರ್ಚಂಟ್ಸ್ ಫುಟ್ಬಾಲ್ ತಂಡ ಸೂಪರ್ ಲೀಗ್ ಹಂತದ ಪಂದ್ಯಾಟದ ಇಂದಿನ ಪಂದ್ಯದಲ್ಲಿ ತಲಪಾಡಿಯ ಸಿಟಿಜನ್ ತಂಡವನ್ನು 2-0 ಗೋಲ್ಗಳಿಂದ ಸೊಲಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು. ಸಂತ ಅಲೋಸಿಯಸ್ ಕಾಲೇಜು ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಈ ಮೂಲಕ ಎರಡೂ ತಂಡ ಕೂಡ ಮುಂದಿನ ವರ್ಷ ಎ ಡಿವಿಷನಲ್ಲಿ ಆಡುವ ಅವಕಾಶ ಪಡೆದು ಕೊಂಡಿತು. ಮರ್ಚಂಟ್ಸ ತಂಡ ಹಲವು ವರ್ಷಗಳ ನಂತರ ಎ ಡಿವಿಷನ್ ಗೆ ತೇರ್ಗಡೆಗೊಂಡಿತು.

blank

ಅಹ್ಮದ್ ಮಾಸ್ಟರ್ ಸ್ಮಾರಕ ಎ ಡಿವಿಷನ್ ಲೀಗ್ ಪಂದ್ಯಾವಳಿ :ಯೆನೆಪೋಯ ತಂಡಕ್ಕೆ ಪ್ರಶಸ್ತಿ
2024-25 ಋತುವಿನ ಎ ಡಿವಿಷನ್ ಲೀಗ್ ಪಂದ್ಯಾವಳಿಯಲ್ಲಿ ದೇರಳಕಟ್ಟೆಯ ಯೆನೆಪೋಯ ಯೂನಿವರ್ಸಿಟಿ ತಂಡ ಮತ್ತೋಮ್ಮೆ ಲೀಗ್ ಪ್ರಶಸ್ತಿಯನ್ನು ಪಡೆದುಕೊಂಡಿತು. ತಾನು ಆಡಿದ ಸೂಪರ್ಲೀಗಿನ ಕೊನೆಯ ಪಂದ್ಯಾಟದಲ್ಲಿ ಎ. ಎಫ್. ಸಿ ಉಳ್ಳಾಲ ತಂಡವನ್ನು 4-1 ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಪಡೆದುಕೊಂಡಿತು. ಎ. ಎಫ್. ಸಿ ಉಳ್ಳಾಲ ತಂಡ ತನ್ನ ಕೊನೆಯ ಲೀಗ್ ಪಂದ್ಯಾಟದಲ್ಲಿ ಯುನೆಯ್ಟೆಡ್ ಎಫ್. ಸಿ. ಪಜೀರ್ ತಂಡವನ್ನು 1-0 ಗೋಲಿಂದ ಸೋಲಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿತು. ನೆಹರೂ ಮೖದಾನದಲ್ಲಿ ಟರ್ಫ್ ಅಳವಡಿಸುತ್ತಿರುವ ಕಾರಣ ಎಕ್ಕೂರ್ ಫಿಶರೀಸ್ ಮೃದಾನದಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಎ ಹಾಗೂ ಬಿ ಡಿವಿಷನ್ ನಲ್ಲಿ ತಲಾ 9 ತಂಡಗಳು ಭಾಗವಹಿಸಿದ್ದವು.
ಸಮಾರೋಪ ಸಮಾರಂಭದಲ್ಲಿ ಫಿಶರೀಸ್ ಕಾಲೇಜು ಡೀನ್ ಪ್ರೊಫೆಸರ್ ಆಂಜನೇಯಪ್ಪ ಹಾಗೂ ಕಾಲೇಜಿನ ದೖಹಿಕ ಶ್ಶಿಕ್ಷನ ಇಲಾಖೆಯ ನಿರ್ದೇಶಕರಾದ ಶ್ರೀ ಮನೋಜ್ ಕುಮಾರ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಶಸ್ತಿ ವಿತರಿಸಿದರು. ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಡಿ. ಎಂ. ಅಸ್ಲಾಂ ವಹಿಸಿದ್ದರು. ಕಾರ್ಯದರ್ಶಿ ಹುಸೇನ್ ಬೋಳಾರ್ ಸ್ವಾಗತಿಸಿದರು. ರಾಜ್ಯ ಫುಟ್ಬಾಲ್ ಸಂಸ್ಥೆ ಸದಸ್ಯ ವಿಜಯ ಸುವರ್ಣ,ಫುಟ್ಬಾಲ್ ಸಂಸ್ಥೆಯ ಉಪಾಧ್ಯಕ್ಷರಾದ ಬಿಬಿ ಥೋಮಸ್, ಫುಟ್ಬಾಲ್ ಸಂಸ್ಥೆಯ ಸದಸ್ಯರಾದ ಅಬ್ದುಲ್ ಲತೀಫ್, ಅನಿಲ್ ಪಿ. ವಿ, ಸುಜಿತ್ ಕೆ. ವಿ, ಆರೀಫ್ ಉಚ್ಚಿಲ, ಯೂ. ಆರ್ ಅಕಾಡೆಮಿಯ ಉಮೇಶ್ ಉಚ್ಚಿಲ, ಮಂಗಳೂರು ಸ್ಪೋರ್ಟಿಂಗ್ ತಂಡದ ಅಧ್ಯಕ್ಷರು ಹಾಗೂ ಅಹ್ಮದ್ ಮಾಸ್ಟರ್ ಅವರ ಸುಪುತ್ರ ಫಯಾಜ್ ಅಹ್ಮದ್, ಮರ್ಚಂಟ್ಸ್ ತಂಡದ ಅಧ್ಯಕ್ಷರು ಹಾಗೂ ಮಾಜಿ ಫುಟ್ಬಾಲ್ ಆಟಗಾರ ನೋರ್ಬಟ್ ಸಾಲ್ಡಾಣ, ಪಂದ್ಯಾವಳಿ ನಿರ್ವಹನ ತಂಡದ ಸದಸ್ಯರಾದ ನಾಸಿರ್ ಬೋಳಾರ್
ಅಶ್ರಫ್ ಕೆ. ಎಮ್, ಹಕೀಮ್, ಅಶ್ಫಾಕ್, ಅನ್ಸಾರ್,ಫೋರ್ಥ್ ಒಫೀಶಿಯಲ್ ಆಗಿ ಕಾರ್ಯ ನಿರ್ವಹಿಸಿದ ಅನಸ್, ಟಿ. ಕೆ. ಇಸ್ಮಾಯಿಲ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಜೇತ ತಂಡಗಳಿಗೆ ಟ್ರೊಫಿ ಹಾಗೂ ನಗದು ಬಹುಮಾನ ನೀಡಲಾಯಿತು

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank