26.8 C
Bangalore
Friday, December 13, 2019

ಪಲಿಮಾರು ಶ್ರೀಗಳಿಂದ ಶಿಷ್ಯ ಸ್ವೀಕಾರ

Latest News

ಶಬರಿಮಲೆ ವಿಚಾರದಲ್ಲಿ ಸದ್ಯ ಯಾವುದೇ ಆದೇಶವನ್ನು ಹೊರಡಿಸಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್​

ನವದೆಹಲಿ: ಪೊಲೀಸ್​ ರಕ್ಷಣೆಯೊಂದಿಗೆ ಶಬರಿಮಲೆ ಅಯ್ಯಪ್ಪನ ಸನ್ನಿಧಿಯನ್ನು ಮಹಿಳೆಯರು ಸುರಕ್ಷಿತವಾಗಿ ಪ್ರವೇಶಿಸಲು ಕೇರಳ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಇಬ್ಬರು ಮಹಿಳಾ ಕಾರ್ಯಕರ್ತರು ಸಲ್ಲಿಸಿದ್ದ...

ತುಮಕೂರು ಸ್ಮಾರ್ಟ್‌ಸಿಟಿ ಜೆಎಂಡಿ ಎತ್ತಂಗಡಿ!

ತುಮಕೂರು: ಸ್ಮಾರ್ಟ್‌ಸಿಟಿ ಲಿಮಿಟೆಡ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿ.ಅಜಯ್ ಅವರನ್ನು ಎತ್ತಂಗಡಿ ಮಾಡಲಾಗಿದೆ. 3 ತಿಂಗಳ ಹಿಂದೇ ಸ್ಮಾರ್ಟ್‌ಸಿಟಿ ಎಂಡಿ ಜವಾಬ್ದಾರಿ ಹೊಣೆ ಹೊತ್ತಿದ್ದ ಮಹಾನಗರ...

ಕುಪ್ಪೂರು ಶ್ರೀ ಮರುಳಸಿದ್ದೇಶ್ವರ ಜಾತ್ರೆಗೆ ಸಿಎಂ ಯಡಿಯೂರಪ್ಪ ಚಾಲನೆ

ಚಿಕ್ಕನಾಯಕನಹಳ್ಳಿ: ಸುಕ್ಷೇತ್ರ ಕುಪ್ಪೂರು ಶ್ರೀಮರುಳಸಿದ್ದೇಶ್ವರ ಗದ್ದುಗೆ ಜಾತ್ರೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಗುರುವಾರ ಚಾಲನೆ ನೀಡಿದ್ದು, ನಾಡಿನ ವಿವಿಧೆಡೆಯಿಂದ ಸಾವಿರಾರು ಭಕ್ತರು ಜಾತ್ರೆಗೆ ಬಂದಿದ್ದರು. ಶ್ರೀಮಠದ ಆವರಣದಲ್ಲಿ ಗುರುವಾರ...

ಬಲರಾಮ್ ಕುಣಿಗಲ್ ಬಿಜೆಪಿ ಅಧ್ಯಕ್ಷ

ಕುಣಿಗಲ್: ತಾಲೂಕು ಬಿಜೆಪಿ ನೂತನ ಅಧ್ಯಕ್ಷರಾಗಿ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್.ಬಲರಾಮ್ ಗುರುವಾರ ಅವಿರೋಧ ಆಯ್ಕೆಯಾದರು. ಪಟ್ಟಣದ ದಿಶಾ ಪಾರ್ಟಿ ಹಾಲ್‌ನಲ್ಲಿ ರಾಜ್ಯ ಬಿಜೆಪಿ...

ಭಾರತದ ಪ್ರಗತಿಗೆ ಬೇಕು ವೈಜ್ಞಾನಿಕ ಶಿಕ್ಷಣ: ಡಾ.ಡಿ.ವಿ.ಗೋಪಿನಾಥ್

ದಾವಣಗೆರೆ: ಭಾರತದ ಪ್ರಗತಿಗೆ ವೈಜ್ಞಾನಿಕ ಶಿಕ್ಷಣ ಅತ್ಯವಶ್ಯ ಎಂದು ಮುಂಬೈನ ಭಾಭಾ ಅಣು ಸಂಶೋಧನಾ ಕೇಂದ್ರದ ಜೀವ ವೈದ್ಯಕೀಯ ವಿಭಾಗದ ನಿವೃತ್ತ ನಿರ್ದೇಶಕ ಡಾ.ಡಿ.ವಿ.ಗೋಪಿನಾಥ್ ಹೇಳಿದರು. ಪಾರ್ವತಮ್ಮ...

<<<ನಾಳೆ ಪಟ್ಟಾಭಿಷೇಕ ಸಂದರ್ಭ ಆಶ್ರಮ ನಾಮ ಘೋಷಣೆ>>>

ವಿಜಯವಾಣಿ ಸುದ್ದಿಜಾಲ ಉಡುಪಿ
ಪಲಿಮಾರು ಮಠದ 31ನೇ ಯತಿಯಾಗಿ ಕಂಬ್ಲಕಟ್ಟ ಶೈಲೇಶ ಉಪಾಧ್ಯಾಯ ಎಂಬ ವಟುವಿಗೆ ಶುಕ್ರವಾರ ಬ್ರಾಹ್ಮೀ ಮುಹೂರ್ತ 03.57ರಲ್ಲಿ ಶ್ರೀಕೃಷ್ಣಮಠದ ಸರ್ವಜ್ಞ ಪೀಠದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಪ್ರಣವೋಪದೇಶ ಪುರಸ್ಸರ ಸನ್ಯಾಸ ದೀಕ್ಷೆ ನೀಡಿದರು.
ಅಷ್ಟ ಮಠಗಳಲ್ಲೊಂದಾದ ಅಷ್ಟೋತ್ಕಷ್ಟ ಖ್ಯಾತಿಯ ಪಲಿಮಾರು ಮಠದ 800 ವರ್ಷದ ಉನ್ನತ ಪರಂಪರೆಗೆ ಮತ್ತೊಂದು ಕೊಂಡಿ ಈ ಮೂಲಕ ಸೇರ್ಪಡೆಗೊಂಡಿತು.

ಸನ್ಯಾಸ ದೀಕ್ಷೆ ಪೂರ್ವಭಾವಿಯಾಗಿ ಕೆಲವು ದಿನಗಳಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಶುಕ್ರವಾರ ಶಾಕಲ ಹೋಮ, ವಿರಜಾ ಮಂತ್ರ ಹೋಮ ಮೊದಲಾದ ಧಾರ್ಮಿಕ ವಿಧಿಗಳನ್ನು ವಿದ್ವಾಂಸರಾದ ಗುಂಡಿಬೈಲ್ ಸುಬ್ರಹ್ಮಣ್ಯ ಭಟ್ ನಡೆಸಿ ಕೊಟ್ಟರು.

ಜಾಗರಣೆಯ ಸಮಯದಲ್ಲಿ ನಿಯೋಜಿತ ಉತ್ತರಾಧಿಕಾರಿ ಭಾಗವತ ಶ್ರವಣ ನಡೆಸಿದರು.
ಪ್ರಾಯಶ್ಚಿತ್ತ ಹೋಮ ಮುಗಿದ ಬಳಿಕ ಅವರು ಮಧ್ವ ಸರೋವರದಲ್ಲಿ ಅವಗಾಹನ ಸ್ನಾನ ಮಾಡಿ ಭೌತಿಕ ವಸ್ತ್ರಗಳನ್ನೂ ತ್ಯಾಗ ಮಾಡಿ, ಪುರೋಹಿತರು ನೀಡಿದ ಕಾಷಾಯ ವಸ್ತ್ರ, ದಂಡ ಧಾರಣೆ ಮಾಡಿದರು. ಸರ್ವಜ್ಞ ಪೀಠದಲ್ಲಿದ್ದ ಗುರುಗಳಾದ ಪಲಿಮಾರು ಶ್ರೀಗಳನ್ನು ಎದುರುಗೊಂಡು ಗರುಡಾಸನದಲ್ಲಿ ಕುಳಿತು ಅಧಿಹಿ ಭಗವೋ ಬ್ರಹ್ಮ (ನನಗೆ ದೇವರ ಬಗ್ಗೆ ತಿಳಿಸಿಕೊಡಿ) ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಪಲಿಮಾರು ಶ್ರೀಗಳು ಶಿಷ್ಯನ ತಲೆಯ ಮೇಲೆ ಕೈ ಇಟ್ಟು ಪ್ರಣವ ಮಂತ್ರೋಪದೇಶ ಮಾಡಿ, ಆಶ್ರಮ ನಾಮ ನೀಡಿದರು. ಹೆಸರನ್ನು ಗೌಪ್ಯವಾಗಿ ಇಡಲಾಗಿದ್ದು, ಭಾನುವಾರ ನಡೆಯುವ ಪಟ್ಟಾಭಿಷೇಕ ಸಂದರ್ಭದಲ್ಲಿ ಬಹಿರಂಗವಾಗಿ ಘೋಷಣೆ ಮಾಡಲಿದ್ದಾರೆ.

ಪೇಜಾವರ ಕಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.
ಮಧ್ಯಾಹ್ನ ಚಂದ್ರಶಾಲೆಯಲ್ಲಿ ತಿರುಪತಿ ಶ್ರೀನಿವಾಸ ದೇವರ ಪ್ರಸಾದವನ್ನು ಅಲ್ಲಿನ ಅರ್ಚಕ ವೃಂದದವರು ವೇದಘೋಷ ಸಹಿತ ಪರ್ಯಾಯ ಶ್ರೀಗಳು ಹಾಗೂ ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದರು, ನೂತನ ಶಿಷ್ಯರಿಗೆ ಸಮರ್ಪಿಸಿದರು.

ಸಾಯಂಕಾಲ ರಾಜಾಂಗಣದಲ್ಲಿ ನಡೆದ ಜ್ಞಾನ ಸತ್ರದಲ್ಲಿ ನೂತನ ಶ್ರೀಗಳು ಅಧೀತ ಶಾಸ್ತ್ರಾನುವಾದ ನಡೆಸಿದರು.

ಈ ಸಂದರ್ಭ ವಿದ್ವಾಂಸರಾದ ಕೊರ್ಲಳ್ಳಿ ವೆಂಕಟೇಶ ಆಚಾರ್ಯ, ರಾಜಗೋಪಾಲ ಆಚಾರ್ಯ, ವಾಸುದೇವ ಉಪಾಧ್ಯಾಯ, ಗಿರೀಶ ಉಪಾಧ್ಯಾಯ ಮತ್ತು ವಟುವಿನ ಮಾತಾ ಪಿತೃಗಳು, ಕುಟುಂಬಿಕರು ಮೊದಲಾದವರು ಉಪಸ್ಥಿತರಿದ್ದರು.

ಶಾಂತಿ ಪಾಠ ಪ್ರಾರಂಭ: ಸನ್ಯಾಸ ದೀಕ್ಷೆ ನೀಡಿದ ತಕ್ಷಣ ಪಲಿಮಾರು ಶ್ರೀಗಳು ಶಿಷ್ಯನಿಗೆ ಶಾಂತಿ ಪಾಠ ಪುರಸ್ಸರ ಪರ ವಿದ್ಯೆ ಎಂದು ಪ್ರಸಿದ್ಧವಾದ ಬ್ರಹ್ಮಸೂತ್ರ ಭಾಷ್ಯ ಪಾಠ ಪ್ರಾರಂಭಿಸಿದರು. ನೂತನ ಶ್ರೀಗಳಿಗೆ ತಪ್ತ ಮುದ್ರಾಧಾರಣೆ ನಡೆಯಿತು.

ಸೋದೆ ಶ್ರೀ ಕಟ್ಟಿದ ದಂಡ: ಯತಿಗಳಿಗೆ ದಂಡ ಪ್ರದಾನ ವಿಶೇಷವಾದುದು. ಬಿದಿರಿನಿಂದ ತಯಾರಿಸುವ ಈ ದಂಡವನ್ನು ಕಟ್ಟುವವರು ಅಪರೂಪ. ಹೀಗಾಗಿ ಪಲಿಮಾರು ಮಠದ ಉತ್ತರಾಧಿಕಾರಿ ದಂಡವನ್ನು ಸೋದೆ ಶ್ರೀ ವಿಶ್ವವಲ್ಲಭ ಶ್ರೀಗಳು ಕಟ್ಟಿರುವುದು ಮಹತ್ವದ ಸಂಗತಿಯಾಗಿದೆ. ಅದನ್ನೇ ಶುಕ್ರವಾರ ನೂತನ ಯತಿಗಳು ಧಾರಣೆ ಮಾಡಿದ್ದಾರೆ.

ನಾಳೆ ಪಟ್ಟಾಭಿಷೇಕ: ಮೇ 8ರಿಂದ ವಿವಿಧ ಧಾರ್ಮಿಕ ವಿಧಿಗಳೊಂದಿಗೆ ಸಂನ್ಯಾಸ ದೀಕ್ಷೆ ಪ್ರದಾನ ಕಾರ್ಯಕ್ರಮ ಆರಂಭವಾಗಿದೆ. ಗುರುವಾರ ಆತ್ಮಶ್ರಾದ್ಧ ನಡೆದಿತ್ತು. ಶನಿವಾರ ಬೆಳಗ್ಗೆ ಶಿಷ್ಯನಿಗೆ ಪಲಿಮಾರು ಶ್ರೀಗಳು ಅಷ್ಟ ಮಹಾಮಂತ್ರ ಉಪದೇಶ ನೀಡಲಿದ್ದಾರೆ. ಜತೆಗೆ ಶಾಸ್ತ್ರಾನುವಾದ ನಡೆಯಲಿದೆ. ಭಾನುವಾರ ಮಧ್ಯಾಹ್ನ 12.20ಕ್ಕೆ ವೇದಾಂತ ಸಾಮ್ರಾಜ್ಯದಲ್ಲಿ ಪಟ್ಟಾಭಿಷೇಕ ನಡೆಯಲಿದೆ. ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ, ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಕಿರಿಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಭಾಗವಹಿಸಲಿದ್ದಾರೆ.

ಸಂಸ್ಥಾನ ಪೂಜೆ ಸುಯೋಗ: ಸಂನ್ಯಾಸಿಗೆ ಪರಂಪರಾಗತ ಸಂಸ್ಥಾನ ಪೂಜೆ ಅತೀ ಮಹತ್ವದ್ದಾಗಿದ್ದು, ಅಪೂರ್ವ ಮೂರ್ತಿಗಳನ್ನು ಸ್ವಾಮೀಜಿಗಳಲ್ಲದೆ ಇತರರು ಮುಟ್ಟುವಂತಿಲ್ಲ ಹಾಗೂ ಪೂಜಿಸುವಂತಿಲ್ಲ ಎಂಬ ನಿಯಮವಿದೆ. ನೂತನ ಯತಿ ಚಾತುರ್ಮಾಸ್ಯ ಪೂರೈಸಿದ ನಂತರವಷ್ಟೇ ಸಂಸ್ಥಾನ ಪೂಜೆಯ ಅವಕಾಶ ಪಡೆಯುತ್ತಾರೆ. ಶುಭಗಳಿಗೆಯಲ್ಲಿ ಗುರುಗಳು ದೇವರ ಮೂರ್ತಿಯನ್ನು ಸ್ಪರ್ಶ ಮಾಡಿಸುವುದು ಇದರ ಕ್ರಮ. ಕೃಷ್ಣ ಮೂರ್ತಿಯನ್ನೂ ಅದೇ ರೀತಿಯಾಗಿ ಗುರುಗಳು ಕರೆದುಕೊಂಡು ಹೋಗಿ ಸ್ಪರ್ಶಿಸಿದ ನಂತರ ಪೂಜೆಯ ಅವಕಾಶ ಸಿಗುತ್ತದೆ. ಮಧ್ವಾಚಾರ್ಯರು ಪಲಿಮಾರು ಮಠಕ್ಕೆ ನೀಡಿದ ಪಟ್ಟದ ದೇವರು ರಾಮ, ಸೀತೆ, ಲಕ್ಷ್ಮಣ ಸಹಿತ ಅಂಜನೇಯ. ವಿಶೇಷವೆಂದರೆ ಆಚಾರ್ಯರು ತನ್ನದೇ ಪ್ರಥಮಾವತಾರ ಆಂಜನೇಯ ಮೂರ್ತಿಯನ್ನು ಈ ಮಠಕ್ಕೆ ಹೊರತುಪಡಿಸಿ ಬೇರ‌್ಯಾರಿಗೂ ನೀಡಿದ ಉಲ್ಲೇಖವಿಲ್ಲ. ಅತ್ಯಂತ ಲಕ್ಷಣಯುತವಾದ ಈ ಮೂರ್ತಿಗಳನ್ನು ಪಲಿಮಾರು ಮಠದ ಸಂಸ್ಥಾನ ಪೀಠದಲ್ಲಿ ಮಾತ್ರ ಕಾಣಬಹುದಾಗಿದೆ. ಜತೆಗೆ ಹೃಷಿಕೇಶ ತೀರ್ಥ ಪೂಜಿತ ನರ್ತನ ಕೃಷ್ಣ, ಮಧ್ವಾಚಾರ್ಯ ಕರಾಚಿತ ಯೋಗ ನರಸಿಂಹ ದೇವರು, ಗರುಡವಾಹನ ಲಕ್ಷ್ಮೀನಾರಾಯಣ ವಿಗ್ರಹ, ಸಿದ್ಧಪುರುಷ ಸುರೇಶ ತೀರ್ಥ ಕರಾರ್ಚಿತ ಧನುರ್ಬಾಣ ಧಾರಿಣಿ ದುರ್ಗಾದೇವಿ ಮೊದಲಾದ ಅಪೂರ್ವ ವಿಗ್ರಹಗಳು ಪೂಜೆಗೊಳ್ಳುತ್ತಿವೆ.

21 ಶಾಖಾ ಮಠಗಳು: ಪಲಿಮಾರು ಮಠಕ್ಕೆ ದ್ವಾರಕಾ, ಹರಿದ್ವಾರ, ನೆಲಮಂಗಲ, ಶ್ರೀರಂಗ ತಿರುಚಿನಾಪಳ್ಳಿ, ಕಾಂತಾವರ, ಮಲ್ಲೇಶ್ವರಂ, ಕುತ್ಪಾಡಿ, ಪೀಣ್ಯ, ಸೊಲ್ಹಾಪುರ, ಕೊತ್ತಕೋಟ, ಊತುಕುಳಿ, ಮೀರಾರೋಡ್ ಥಾಣೆ, ಪಲಿಮಾರು, ಹೊಳೆನರಸೀಪುರ, ವರ್ಕಾಡಿ, ಪ್ರಯಾಗ, ಕನ್ಯಾಕುಮಾರಿ ಸೇರಿದಂತೆ ದೇಶಾದ್ಯಂತ 21 ಶಾಖಾಮಠಗಳಿವೆ. ಪಲಿಮಾರು ಯೋಗದೀಪಿಕಾ ವಿದ್ಯಾಪೀಠ, ಉಡುಪಿ ತತ್ವದೀಪಿಕಾ ವಿದ್ಯಾಪೀಠ, ಪಾಜಕ ಗುರುಕುಲ, ತಮಿಳುನಾಡು ಊತುಕುಳಿ ಪಟ್ಟಾಭಿರಾಮ ಕೃಷ್ಣ ವೇದ ವಿದ್ಯಾಪೀಠ, ತೆಲಂಗಾಣ ಮೊದಲಕಲ್ ವಿದ್ಯಾಮಾನ್ಯ ವಿದ್ಯಾಪೀಠ ಹಾಗೂ 1 ಐಟಿಐ ಕಾಲೇಜು ನಡೆಸಲಾಗುತ್ತಿದೆ. ಇವೆಲ್ಲಕ್ಕೂ ಹಿರಿಯ ಶ್ರೀಗಳ ನಂತರ ಇನ್ನು ಕಿರಿಯ ಶ್ರೀಗಳು ಪ್ರಮುಖರಾಗಿರುತ್ತಾರೆ.

ಮಗನನ್ನು ಸನ್ಯಾಸಿಯಾಗಿ ಕಳಿಸುವುದು ಯಾವ ಪಾಲಕರಿಗಾದರೂ ಬೇಸರವೇ. ಅದರಂತೆ ನಮಗೂ ಮೊದಲಿಗೆ ಸ್ವಲ್ಪ ಬೇಸರ ಆಗಿತ್ತು. ಆದರೆ ಲೌಕಿಕ ವಿದ್ಯೆಯಲ್ಲಿ ನಿರಾಸಕ್ತಿಯ ಕಾರಣ ಸಂಸ್ಕೃತ ಕಾಲೇಜಿಗೆ ಸೇರಿಸಿದೆವು. ಅಲ್ಲಿ ಒಳ್ಳೆಯ ಸಾಧನೆ ಮಾಡಿದ. ಕಾಲೇಜು ಓದುವಂತೆ ಹೇಳಿದರೂ ಪಲಿಮಾರು ವಿದ್ಯಾಪೀಠ ಸೇರಿದ. ಯಾರೊಡನೆಯೂ ಬೆರೆಯುತ್ತಿರಲಿಲ್ಲ. ಅಧ್ಯಾತ್ಮದತ್ತ ಒಲವು ಪಡೆದಿದ್ದ. ಜಾತಕದಲ್ಲೂ ಸನ್ಯಾಸಯೋಗ ಇದೆ. ಪಲಿಮಾರು ಶ್ರೀಗಳು ಅನುಗ್ರಹಿಸಿದ್ದಾರೆ. ಒಳ್ಳೆಯ ಪರಂಪರೆಯ ಮಠ ನಮಗೂ ಹೆಮ್ಮೆ ಅನಿಸುತ್ತಿದೆ.
– ಸುರೇಂದ್ರ ಉಪಾಧ್ಯಾಯ, ನೂತನ ಯತಿಗಳ ಪೂರ್ವಾಶ್ರಮದ ತಂದೆ

Stay connected

278,748FansLike
588FollowersFollow
626,000SubscribersSubscribe

ವಿಡಿಯೋ ನ್ಯೂಸ್

VIDEO| ಬರೋಬ್ಬರಿ 20 ಕೆ.ಜಿ. ತೂಕದ ಹೆಬ್ಬಾವು ಸೆರೆಹಿಡಿದ ಮಹಿಳೆ:...

ತಿರುವನಂತಪುರ: ಮಹಿಳೆಯೊಬ್ಬರು ಸುಮಾರು 20 ಕೆ.ಜಿ. ತೂಗುವ ಬೃಹದಾಕಾರದ ಹೆಬ್ಬಾವನ್ನು ಸೆರೆಹಿಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮೆಚ್ಚುಗೆ ಮಹಾಪೂರ ಹರಿದುಬಂದಿದೆ. ವಿಡಿಯೋದಲ್ಲಿರುವ ಮಹಿಳೆಯನ್ನು ಕೊಚ್ಚಿ ಮೂಲದ ವನ್ಯಜೀವಿ ಸಂರಕ್ಷಕಿ...

ಅತ್ಯಾಚಾರ ಪ್ರಕರಣ ಕುರಿತು ರಾಹುಲ್​ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ಗದ್ದಲ:...

ನವದೆಹಲಿ: ಅತ್ಯಾಚಾರ ಪ್ರಕರಣ ಕುರಿತು ಗುರುವಾರ ಜಾರ್ಖಂಡ್​ ಸಮಾವೇಶದಲ್ಲಿ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಹಾಗೂ ವಯನಾಡಿನ ಹಾಲಿ ಸಂಸದ ರಾಹುಲ್​ ಗಾಂಧಿ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ....

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....