ಹುಬ್ಬಳ್ಳಿ: ತಾಲೂಕಿನ ಪಾಲಿಕೊಪ್ಪ ಗ್ರಾಮದ ಶ್ರೀಕ್ಷೇತ್ರ ಶಿವಶಕ್ತಿ ಧಾಮದಲ್ಲಿ ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಭಾರತಿತೀರ್ಥ ಸ್ವಾಮೀಜಿ ಹಾಗೂ ತತ್ಕರಕಮಲ ಸಂಜಾತ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳವರ ಪೂರ್ಣಾನುಗ್ರಹದಿಂದ ಶರನ್ನವರಾತ್ರಿ ಉತ್ಸವ ಸಂಭ್ರಮದಿಂದ ನಡೆಯುತ್ತಿದೆ.
ನವರಾತ್ರಿ ಉತ್ಸವದ ನಿಮಿತ್ತ ನಿತ್ಯ ಬೆಳಗ್ಗೆ ಅರ್ಚನೆ, ಅಭಿಷೇಕ, ಚಂಡಿಕಾ ಪಾರಾಯಣ, ಮಧ್ಯಾಹ್ನ ಅನ್ನಪ್ರಸಾದ ನಡೆಯುತ್ತಿದೆ. ಸಂಜೆ ಲಲಿತಾಸಹಸ್ರನಾಮ ಪಾರಾಯಣ, ಮಹಾಮಂಗಳಾರತಿ, ಅಷ್ಟಾವಧಾನ ಸೇವೆ, ಪ್ರಸಾದ ವಿತರಣೆಗಳು ಜರುಗುತ್ತಿವೆ.
ಅ. 11ರಂದು ಚಂಡಿಕಾ ಹೋಮ, ಮಧ್ಯಾಹ್ನ 12ಕ್ಕೆ ಪೂರ್ಣಾಹುತಿ ಆಯೋಜಿಸಲಾಗಿದೆ.
ಈ ಎಲ್ಲ ಕಾರ್ಯಕ್ರಮಗಳಿಗೆ ಭಕ್ತರು ಸಹಕುಟುಂಬ ಸಹಿತರಾಗಿ ಪಾಲ್ಗೊಂಡು ವಿದ್ಯಾಧಿ ದೇವತೆ ಶಾರದಾಪರಮೇಶ್ವರಿ ಸ್ವರೂಪಳಾದ ಶ್ರೀ ಜ್ಞಾನಾಂಬಿಕಾ ದೇವತೆಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀಕ್ಷೇತ್ರದ ವ್ಯವಸ್ಥಾಪಕರು ಕೋರಿದ್ದಾರೆ.