ನರಗುಂದ: ಪಟ್ಟಣದ ಪತ್ರಿವನಮಠದ ಶಿವಯ್ಯಜ್ಜ ಹಾಗೂ ಶಂಭುಲಿಂಗ ಶಿವಯೋಗಿಗಳ ಪುಣ್ಯಸ್ಮರಣೋತ್ಸವದ ಅಂಗವಾಗಿ ಪಲ್ಲಕ್ಕಿ ಉತ್ಸವ ಹಾಗೂ ಗುರುದ್ವಯರ ಭಾವಚಿತ್ರ ಮೆರವಣಿಗೆಗೆ ಉಮೇಶಗೌಡ ಪಾಟೀಲ ಚಾಲನೆ ನೀಡಿದರು.
ಇದಕ್ಕೂ ಪೂರ್ವ ಬೆಳಗ್ಗೆ ಗುರುಗಳ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಶ್ರೀದೇವಿ ಪುರಾಣ ಸಾಮೂಹಿಕ ಪಾರಾಯಣ ಹಾಗೂ ಮುತೆôದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಜ್ಞಾನ ವೇದಿಕೆಯಲ್ಲಿ ಧರ್ಮ ಸಭೆ ಜರುಗಿತು.
ಬೆಳಹೊಡದ ಪರಿಪೂರ್ಣಾನಂದ ಸ್ವಾಮಿಗಳು, ವಿರಕ್ತಮಠದ ಶಿವಕುಮಾರ ಸ್ವಾಮಿಗಳು, ಪಂಚಗ್ರಹ ಗುಡ್ಡದ ಸಿದ್ಧ್ದಂಗ ಶಿವಾಚಾರ್ಯರು, ಪತ್ರಿವನಮಠದ ಡಾ. ಗುರುಸಿದ್ಧಶಿವಯೋಗಿ ಶಿವಾಚಾರ್ಯರು, ಗುರುನಾಥ ಕರಿಕಟ್ಟಿ, ಮಹಾಂತ ಸ್ವಾಮಿಗಳು, ಹೊಳೆಆಲೂರ ಅಭಿನವ ಯಚ್ಚರಸ್ವಾಮಿಗಳು, ಧಾರವಾಡ ಶಾಸಕ ವಿನಯ ಕುಲಕರ್ಣಿ, ಕೆಪಿಸಿಸಿ ಮಾಧ್ಯಮ ವಕ್ತಾರ ಡಾ. ಸಂಗಮೇಶ ಕೊಳ್ಳಿಯವರ, ಪುರಸಭೆ ವಿರೋಧ ಪಕ್ಷದ ನಾಯಕ ಅಪ್ಪಣಗೌಡ್ರ ನಾಯ್ಕರ್, ವಿಠಲ ಶಿಂಧೆ ಉಪಸ್ಥಿತರಿದ್ದರು.
ಭಾವಚಿತ್ರದ ಮೆರವಣಿಗೆ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಲಾಗಿದ್ದ ಕಲಾ ತಂಡಗಳ ಸಂಗೀತ ಹಾಗೂ ಕರಡಿಮಜಲು, ಕೋಲಾಟ, ಡೊಳ್ಳು ಮೇಳ, ಪುರವಂತರು ಮೆರಗು ನೀಡಿದರು. ಜಗಾಪೂರ, ಸಿದ್ದಾಪೂರದ ಕಲಾತಂಡಗಳು ಭಾಗಿಯಾಗಿದ್ದವು.