ಗೋವಿಂದನ ಹಾಡಿಗೆ ಸ್ಟೆಪ್​ ಹಾಕಿದ ಪಾಕ್​ ಎಸ್​ಐ:​ ವಿಡಿಯೋ ವೈರಲ್​ ಆಗ್ತಿದ್ದಂತೆ ಅಧಿಕಾರಿ ಅಮಾನತು

ಪಾಕ್​ಪಟ್ಟಣ: ಪಾಕಿಸ್ತಾನ ಪಂಜಾಬ್​ ಪ್ರಾಂತ್ಯದಲ್ಲಿ ಬರುವ ಪಾಕ್​ಪಟ್ಟಣದ ಪೊಲೀಸ್​ ಅಧಿಕಾರಿಯೊಬ್ಬರು ನಟ ಗೋವಿಂದನ ಸಿನಿಮಾ ಹಾಡೊಂದಕ್ಕೆ ಮಹಿಳೆಯೊಂದಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾನೆ. ಪಾಪ, ಈ ಡ್ಯಾನ್ಸ್​​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಬಂಧಿಯಿಂದಲೇ ವೈರಲ್ ಆದ ಬೆನ್ನಲ್ಲೇ ಅವರನ್ನು ಅಮಾನತು ಮಾಡಲಾಗಿದೆ.

ಪಾಕ್​ಪಟ್ಟಣದ ಕಲ್ಯಾಣ ಪೊಲೀಸ್​ ಠಾಣೆಯ ಇನ್ಸ್​ಪೆಕ್ಟರ್​ ಅರ್ಷದ್ ಅಮಾನತುಗೊಂಡ ಅಧಿಕಾರಿ.​ ಇವರಿಗೆ ಸಂಬಂಧಪಟ್ಟ ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್​ ಆಗಿವೆ.

ಮೊದಲನೇ ವಿಡಿಯೋದಲ್ಲಿ ಇನ್ಸ್​​ಪೆಕ್ಟರ್​ ಆರ್ಷದ್​, ಬಾಲಿವುಡ್​ ನಟ ಅನಿಲ್​ ಕಪೂರ್​ ಅಭಿನಯದ ‘ಶೂಟೌಟ್​ ಅಟ್​ ವಾಡಲಾ’ ಚಿತ್ರದ ಡೈಲಾಗ್ ಹೇ​ಳಿದ್ದಾರೆ. ಎರಡನೇ ವಿಡಿಯೋದಲ್ಲಿ ಮಹಿಳೆಯೊಬ್ಬರ ಜತೆ ನಟ ಗೋವಿಂದನ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.

ಈ ವಿಡಿಯೋಗಳು ವೈರಲ್​ ಆಗುತ್ತಿದ್ದಂತೆ ಪಾಕ್​ಪಟ್ಟಣ ಜಿಲ್ಲಾ ಪೊಲೀಸ್​ ಅಧಿಕಾರಿ ಮರಿಯಾ ಮೆಹ್ಮೂದ್ ಅವರು ಅರ್ಷದ್​ ಅವರನ್ನು ಅಮಾನತುಗೊಳಿಸಿದ್ದು, ತನಿಖೆಗೆ ಆದೇಶಿಸಿದ್ದಾರೆ.​ (ಏಜೆನ್ಸೀಸ್​)