ಇಬ್ಬರು ಪಾಕಿಸ್ತಾನಿ ಉಗ್ರರನ್ನು ಹೊಡೆದುರುಳಿಸಿದ ಭಾರತದ ಸೈನಿಕರು

ನವದೆಹಲಿ: ಜಮ್ಮುಕಾಶ್ಮೀರ ಕುಪ್ವಾರಾದಲ್ಲಿ ಭಾರತೀಯ ಸೇನೆ ಪಾಕಿಸ್ತಾನ ಸೈನ್ಯದ ಇಬ್ಬರು ಸೈನಿಕರನ್ನು ಗುಂಡಿಕ್ಕಿ ಕೊಂದಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಈ ಇಬ್ಬರು ಸೋಮವಾರ ಸಂಜೆ ತಂಗಧರ್​ ವಲಯದಲ್ಲಿ ಒಳನುಸುಳಲು ಯತ್ನಿಸುತ್ತಿದ್ದರು. ಅದನ್ನು ನೋಡಿದ ನಮ್ಮ ಸೇನೆ ಅವರಿಬ್ಬರಿಗೂ ಅಲ್ಲೇ ಗುಂಡು ಹೊಡೆದಿದೆ ಎಂದಿದ್ದಾರೆ.

ಒಳನುಸುಳುತ್ತಿರುವ ಪಾಕಿಸ್ತಾನಿ ಸಿಬ್ಬಂದಿಯನ್ನು ತಡೆಯಲು ನಮ್ಮ ಸೈನಿಕ ಪುಷ್ಪೇಂದ್ರ ಸಿಂಗ್​ ಹಾಗೂ ಅವರ ತಂಡದವರು ಪ್ರಯತ್ನಿಸಿದರೂ ಪುಷ್ಪೇಂದ್ರ ಸಿಂಗ್​ ಅವರನ್ನು ಕೊಂದಿದ್ದರು. ಅದಕ್ಕೆ ನಮ್ಮ ಸೇನೆ ಪ್ರತಿ ದಾಳಿ ನಡೆಸಿದ್ದು, ಶ್ರೀನಗರದಿಂದ 95 ಕಿಮೀ ದೂರದಲ್ಲಿರುವ ತಂಗ್ದರ್​ ವಲಯದಿಂದ ಒಳನುಸುಳುತ್ತಿದ್ದ ಪಾಕಿಸ್ತಾನಿ ಉಗ್ರರನ್ನು ನಿಯಂತ್ರಿಸಲು ಪ್ರಯತ್ನಿಸಿದ್ದು ಇಬ್ಬರಿಗೆ ಗುಂಡು ಹೊಡೆದಿದೆ ಎಂದು ಮಾಹಿತಿ ನೀಡಿದ್ದಾರೆ.