21.7 C
Bengaluru
Tuesday, January 21, 2020

ಗಡಿ ನಿಯಂತ್ರಣ ರೇಖೆ ದಾಟಿ ಕಾಶ್ಮೀರಕ್ಕೆ ಬರಲು ಮುಂದಾಗಿದ್ದಾರೆ ಪಾಕ್​ ವೈದ್ಯರು; ಅನುಮತಿ ಕೋರಿ ವಿಶ್ವಸಂಸ್ಥೆಗೆ ಪತ್ರ

Latest News

ಉಬರ್ ಈಟ್ಸ್​ ವ್ಯವಹಾರ ಸ್ವಾಧೀನ ಪಡಿಸಿಕೊಂಡ ಜೊಮ್ಯಾಟೋ | ಭಾರತದಲ್ಲಿ ವಹಿವಾಟು ಕೊನೆಗೊಳಿಸಿದ ಉಬರ್ ಈಟ್ಸ್​

ನವದೆಹಲಿ: ಆಲ್ ಸ್ಟಾಕ್ ಡೀಲ್ ಮೂಲಕ ಉಬರ್ ಈಟ್ಸ್​ನ ವ್ಯವಹಾರವನ್ನು ಭಾರತದಲ್ಲಿ ಸಂಪೂರ್ಣವಾಗಿ ಸ್ವಾಧೀನ ಪಡಿಸಿಕೊಂಡಿರುವುದಾಗಿ ಜೊಮ್ಯಾಟೋ ಮಂಗಳವಾರ ಘೋಷಿಸಿದೆ. ಈ ಮೂಲಕ...

ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ಹೂಡಿಕೆದಾರರಿಗೆ ಹಣ ವಾಪಸ್

ಬೆಂಗಳೂರು: ಪರ್ಲ್ ಅಗ್ರೋಟೆಕ್ ಕಾಪೋರೇಶನ್ ಲಿಮಿಟೆಡ್ (ಪಿಎಸಿಎಲ್) ನಲ್ಲಿ ಹೂಡಿಕೆ ಮಾಡಿದ್ದವರು ಹಣ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ವಂಚನೆಗೆ ಒಳಗಾದ ದೂರುದಾರರು ಜು.31ರವರೆಗೆ ಅರ್ಜಿ ಸಲ್ಲಿಸಬಹುದು. ದೇಶವ್ಯಾಪಿ...

ಚಿತ್ರದುರ್ಗ: ರಾಜ್ಯ ಕಟ್ಟಡ ಹಾಗೂ ಇತರೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು. ಹಳೇ ಮಿಡ್ಲ್...

ಯಾದಗಿರಿ ಬಸ್​ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್​ ಪತ್ತೆ; ಆತಂಕವಿಲ್ಲ ಎಂದ ತಪಾಸಣೆ ನಡೆಸಿದ ಪೊಲೀಸರು

ಯಾದಗಿರಿ: ಇಲ್ಲಿನ ಕೇಂದ್ರ ಬಸ್​ನಿಲ್ದಾಣ ಮತ್ತು ಅಜೀಜ್​ ಮಸೀದಿ ಬಳಿ ತಲಾ ಒಂದೊಂದು ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು ಆತಂಕ ಸೃಷ್ಟಿಯಾಗಿತ್ತು. ಮಂಗಳೂರಿನಲ್ಲಿ ಬಾಂಬ್ ಪತ್ತೆ ಹಿನ್ನೆಲೆಯಲ್ಲಿ...

ಸೆನ್ಸೆಕ್ಸ್​ 200ಕ್ಕೂ ಹೆಚ್ಚು ಅಂಶ ಕುಸಿತ; ನಿಫ್ಟಿ 12,200ರಲ್ಲಿ ವಹಿವಾಟು ಶುರು

ಮುಂಬೈ: ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ50ಗಳು ಮಂಗಳವಾರದ ವಹಿವಾಟನ್ನು ಕುಸಿತದೊಂದಿಗೆ...

ಲಾಹೋರ್​: ಕಾಶ್ಮೀರದಲ್ಲಿ ಆರ್ಟಿಕಲ್​ 370ನ್ನು ರದ್ದಗೊಳಿಸಿದ ಬಳಿಕ ಅಲ್ಲಿ ಕೇಂದ್ರ ಸರ್ಕಾರ ಹಲವು ನಿಯಂತ್ರಣಗಳನ್ನು ಹೇರಿದೆ. ಹೊರಗಿನಿಂದ ಯಾರನ್ನೂ ಜಮ್ಮುಕಾಶ್ಮೀರ ಪ್ರವೇಶಿಸಲು ಅನುಮತಿ ನೀಡುತ್ತಿಲ್ಲ, ಹಾಗೇ ಅಲ್ಲಿನ ಜನರಿಗೂ ಹೊರಗೆಲ್ಲೂ ಹೋಗಲು ಸಾಧ್ಯವಾಗುತ್ತಿಲ್ಲ. ಕಡಿತಗೊಂಡಿದ್ದ ಫೋನ್​ ಸಂಪರ್ಕಗಳನ್ನು ಈಗೀಗ ಮರುಸ್ಥಾಪನೆ ಮಾಡುತ್ತಿದೆ.

ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದರ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಪಾಕಿಸ್ತಾನ ಭಾರತದ ಬಗ್ಗೆ ಈಗಾಗಲೇ ವಿಶ್ವಸಂಸ್ಥೆಗೂ ದೂರು ನೀಡಿದೆ. ಆದರೆ ಚೀನಾ ಹೊರತುಪಡಿಸಿ ಬಹುತೇಕ ರಾಷ್ಟ್ರಗಳು ಇದು ಭಾರತದ ಆಂತರಿಕ ವಿಚಾರ ಎಂದು ಹೇಳಿವೆ. ಆದರೂ ಪಾಕಿಸ್ತಾನ ಮಾತ್ರ ಒಂದಲ್ಲ ಒಂದು ಕ್ಯಾತೆ ತೆಗೆಯುತ್ತಲೇ ಇದೆ.

ಆದರೆ ಈ ಮಧ್ಯ ಪಾಕಿಸ್ತಾನದ ವೈದ್ಯರು ಒಂದು ವಿಶಿಷ್ಟ ನಿರ್ಧಾರ ತೆಗೆದುಕೊಂಡಿದ್ದು ಈ ಬಗ್ಗೆ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಭಾರತ ಆಕ್ರಮಿತ ಕಾಶ್ಮೀರದ ಜನರು ತುಂಬ ಕಷ್ಟಪಡುತ್ತಿದ್ದು, ಅನಾರೋಗ್ಯಕ್ಕೀಡಾದರೂ ಸೂಕ್ತವಾಗಿ ಚಿಕಿತ್ಸೆ ಪಡೆಯಲು ಆಗುತ್ತಿಲ್ಲ. ಅವರ ಪರಿಸ್ಥಿತಿ ಶೋಚನೀಯವಾಗಿದೆ. ಹೀಗಾಗಿ ನಾವು ಗಡಿ ನಿಯಂತ್ರಣಾ ರೇಖೆ ದಾಟಿ ಹೋಗಿ ಭಾರತಕ್ಕೆ ಸೇರಿದ ಕಾಶ್ಮೀರದ ಜನರಿಗೆ ವೈದ್ಯಕೀಯ ಸೇವೆ ಒದಗಿಸುತ್ತೇವೆ ಎಂದು ಪಾಕ್​ ವೈದ್ಯರು ಘೋಷಣೆ ಮಾಡಿದ್ದಾರೆ.

ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ವೈದ್ಯರು ಹಾಗೂ ಪಾಕಿಸ್ತಾನ ಸೊಸೈಟಿ ಆಫ್ ಇಂಟರ್ನಲ್ ಮೆಡಿಸಿನ್ ಸಂಸ್ಥೆ ಜಂಟಿಯಾಗಿ ನಿರ್ಧಾರ ಕೈಗೊಂಡಿದೆ. ಕಾಶ್ಮೀರ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಬೆಂಬಲ ಪಡೆಯಲು ಸಾಧ್ಯವಾಗದ ಪಾಕಿಸ್ತಾನ ನಿನ್ನೆ ಕಾಶ್ಮೀರ್​ ಅವರ್​ ಎಂಬ ಪ್ರಚಾರ ತಂತ್ರ ಆರಂಭಿಸಿದ್ದು ಪ್ರಧಾನಮಂತ್ರಿ ಇಮ್ರಾನ್​ ಖಾನ್​ ಚಾಲನೆ ನೀಡಿದ್ದಾರೆ. ಕಾಶ್ಮೀರದ ಜನತೆಯೊಂದಿಗೆ ನಾವಿದ್ದೇವೆ ಎಂಬುದನ್ನು ಬಿಂಬಿಸುವುದಕ್ಕೋಸ್ಕರ ಈ ಪ್ರಚಾರ ತಂತ್ರ ಆರಂಭಿಸಲಾಗಿರುವ ಬೆನ್ನಲ್ಲೇ ಅಲ್ಲಿನ ವೈದ್ಯರು ಗಡಿನಿಯಂತ್ರಣಾ ರೇಖೆ ದಾಟಿ ಹೋಗಿ ವೈದ್ಯಕೀಯ ಸೇವೆ ನೀಡಲು ತೀರ್ಮಾನ ಮಾಡಿದ್ದಾರೆ.

ಈ ಬಗ್ಗೆ ವೈದ್ಯರು ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಪತ್ರ ಬರೆದಿದ್ದು, ತಮಗೆ ಗಡಿ ನಿಯಂತ್ರಣ ರೇಖೆ ದಾಟಲು ಅನುಮತಿ ನೀಡಿ ಎಂದು ಕೇಳಿದೆ. ಭಾರತಕ್ಕೆ ಸೇರಿದ ಕಾಶ್ಮೀರದ ನಿವಾಸಿಗಳಲ್ಲಿ ಹಲವರು ಅನಾರೋಗ್ಯಕ್ಕೀಡಾಗಿದ್ದಾರೆ. ಕರ್ಫ್ಯೂ ಮಾದರಿಯ ನಿಯಂತ್ರಣ ಹೇರಿರುವುದರಿಂದ ಅವರಿಗೆ ಹೊರಗೆ ಹೋಗಿ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪಾಕಿಸ್ತಾನ ವೈದ್ಯರು ಕಾಶ್ಮೀರಕ್ಕೆ ತೆರಳಲು ಯಾವುದೇ ಅಡಚಣೆ ಉಂಟುಮಾಡಬೇಡಿ ಹಾಗೂ ನಿರ್ಬಂಧ ಹೇರಬೇಡಿ ಎಂದು ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಜಾವೇದ್​ ಅಕ್ರಮ್​ ಅವರು ಭಾರತೀಯ ಅಧಿಕಾರಿಗಳ ಬಳಿ ಕೇಳಿಕೊಂಡಿದ್ದಾರೆ.(ಏಜೇನ್ಸೀಸ್​)

ವಿಡಿಯೋ ನ್ಯೂಸ್

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...