blank

“ಪಾಕ್​ ಭಾರತಕ್ಕೆ ಹೆದರಿ ಕಾಲುಗಳ ನಡುವೆ ಬಾಲ ಇಟ್ಟುಕೊಂಡು ನಾಯಿಯಂತೆ ಓಡಿತು”:ಅಮೆರಿಕದ ಮಾಜಿ ಅಧಿಕಾರಿ | Washington

Washington

Washington: ಭಾರತವು ಭಯೋತ್ಪಾದಕರ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಗಳ ನಂತರ ಪಾಕಿಸ್ತಾನವು ಕಾಲುಗಳ ನಡುವೆ ಬಾಲ ಇಟ್ಟುಕೊಂಡು ಹೆದರಿದ ನಾಯಿಯಂತೆ ಕನದ ವಿರಾಮವನ್ನು ಸಾಧಿಸಲು ಓಡಿತು ಎಂದು ಪೆಂಟಗನ್‌ನ ಮಾಜಿ ಅಧಿಕಾರಿ ಮೈಕೆಲ್ ರೂಬಿನ್ ಹೇಳಿದ್ದಾರೆ.

blank

ANIಗೆ ನೀಡಿದ ಸಂದರ್ಶನದಲ್ಲಿ, ಅಮೇರಿಕನ್ ಎಂಟರ್‌ಪ್ರೈಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಪ್ರಸ್ತುತ ಹಿರಿಯ ಸಹೋದ್ಯೋಗಿಯಾಗಿರುವ ಶ್ರೀ ರೂಬಿನ್, ಪಾಕಿಸ್ತಾನಿ ಸೇನೆಯು “ತುಂಬಾ ಕೆಟ್ಟದಾಗಿ ಸೋತಿದೆ” ಅದಕ್ಕೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಭಾರತವು ರಾಜತಾಂತ್ರಿಕವಾಗಿ ಮತ್ತು ಮಿಲಿಟರಿಯಾಗಿ ವಿಜಯಶಾಲಿಯಾಗಿದೆ ಮತ್ತು ಈಗ ಎಲ್ಲಾ ಗಮನವು ಪಾಕಿಸ್ತಾನದ ಭಯೋತ್ಪಾದಕ ಮೇಲೆ ಇದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಒಂದು ನೀರಿನ ಬಾಟಲಿ ಬೆಲೆ 100 ರೂಪಾಯಿ! ವೀಡಿಯೊ ನೋಡಿ.. Kedarnath 100 Rs Water Bottle

ಮೇ 7 ರಂದು ಭಾರತ ಪಾಕಿಸ್ತಾನದ ಮೇಲೆ ನಡೆಸಿದ ದಾಳಿಯನ್ನು ಮಾತನಾಡುತ್ತಾ,”ಭಾರತವು ರಾಜತಾಂತ್ರಿಕವಾಗಿ ಮತ್ತು ಮಿಲಿಟರಿಯಾಗಿ ಗೆದ್ದಿದೆ. ಭಾರತ ರಾಜತಾಂತ್ರಿಕವಾಗಿ ಗೆದ್ದ ಕಾರಣ ಈಗ ಎಲ್ಲರ ಗಮನ ಪಾಕಿಸ್ತಾನದ ಭಯೋತ್ಪಾದಕ ಮೇಲೆ ಇದೆ” ಎಂದು ಶ್ರೀ ರೂಬಿನ್ ಹೇಳಿದರು.

“ಪಾಕಿಸ್ತಾನ ಇದಕ್ಕೆ ಪ್ರತಿಕ್ರಿಯಿಸಿದಾಗ ಭಾರತ ಸರಿಯಾದ ರೀತಿಯಲ್ಲಿ ಉತ್ತರಿಸಿದೆ ಹೀಗಾಗಿ ಈಗ ಪಾಕಿಸ್ತಾನ ತನ್ನ ಕಾಲುಗಳ ನಡುವೆ ಬಾಲವನ್ನು ಹಿಡಿದಿಟ್ಟುಕೊಂಡ ಭಯಭೀತ ನಾಯಿಯಂತೆ ಕದನ ವಿರಾಮವನ್ನು ಸಾಧಿಸಲು ಪ್ರಯತ್ನಿಸಿದೆ ಮತ್ತು ಪಾಕಿಸ್ತಾನದ ಮಿಲಿಟರಿ ಸೋತಿದ್ದು ಮಾತ್ರವಲ್ಲದೆ ಅವರು ತುಂಬಾ ಕೆಟ್ಟದಾಗಿ ಸೋತಿದ್ದಾರೆ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿ, ಹಲವಾರು ಜನರು ಗಾಯಗೊಂಡಿದ್ದರು. ಇದಕ್ಕೆ ಪ್ರತಿಯಾಗಿ, ಭಾರತೀಯ ಸೇನೆ ಆಪರೇಷನ್ ಸಿಂಧೂರ ನಡೆಸಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದರು.

ದಾಳಿಯ ನಂತರ, ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದಾದ್ಯಂತ ಗಡಿಯಾಚೆಗಿನ ಶೆಲ್ ದಾಳಿ ಮತ್ತು ಗಡಿ ಪ್ರದೇಶಗಳಲ್ಲಿ ಡ್ರೋನ್ ದಾಳಿಗೆ ಯತ್ನಿಸಿತು, ಆದರೆ ಭಾರತ ಅವರ ಎಲ್ಲಾ ದಾಳಿಯನ್ನು ವಿಫಲಗೊಳಿಸಿತು. ಮೇ 10 ರಂದು, ಭಾರತ ಮತ್ತು ಪಾಕಿಸ್ತಾನವು ಯುದ್ಧವನ್ನು ನಿಲ್ಲಿಸುವ ಬಗ್ಗೆ ಒಪ್ಪಂದಕ್ಕೆ ಬಂದವು.(ಏಜೆನ್ಸೀಸ್​)

 ಭದ್ರತಾ ಪಡೆಗಳು, ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ: 10 ಉಗ್ರರು ಬಲಿ | Imphal

Share This Article
blank

ದಿನವಿಡೀ ಮೊಬೈಲ್​ ನೋಡ್ತಾನೇ ಇರ್ತೀರಾ? ಈ ಚಟದಿಂದ ಹೊರ ಬರಲು ಇದೇ ಸರಳ ಮಾರ್ಗ…mobile

mobile: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ…

ಆಹಾರ ಸೇವಿಸುವಾಗ ಪದೇಪದೆ ಕೂದಲು ಕಾಣಿಸುತ್ತಿದಿಯೇ?: ಹಾಗಾದ್ರೆ ಸ್ವಲ್ಪ ಜಾಗರೂಕರಾಗಿ.. ಜ್ಯೋತಿಷ್ಯದಲ್ಲಿ ಹೇಳೋದೇನು? | Eating

Eating: ನಿಮ್ಮ ಆಹಾರದಲ್ಲಿ ಕೂದಲು ಮತ್ತೆ ಮತ್ತೆ ಬರುವುದು. ನಿಮ್ಮ ಆಹಾರದಲ್ಲಿ ಕೂದಲು ಉದುರುವ ಘಟನೆ…

blank