ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಸಲಹೆಗೆ ಬೆಲೆ ಕೊಡದ ನಾಯಕ ಸರ್ಫರಾಜ್​ ಅಹಮದ್​…

ಮ್ಯಾಂಚೆಸ್ಟರ್​: ಇಂದು ಭಾರತ-ಪಾಕಿಸ್ತಾನ ನಡುವೆ ಪಂದ್ಯ ಶುರುವಾಗುವುದಕ್ಕೂ ಮೊದಲು ಪಾಕ್​ ಪ್ರಧಾನಿ, ಮಾಜಿ ಕ್ರಿಕೆಟರ್​ ಇಮ್ರಾನ್​ ಖಾನ್​ ಸರಣಿ ಟ್ವೀಟ್​ ಮೂಲಕ ಪಾಕಿಸ್ತಾನ ತಂಡಕ್ಕೆ, ನಾಯಕ ಸರ್ಫರಾಜ್​ಗೆ ಹಲವು ಸಲಹೆಗಳನ್ನು ನೀಡಿದ್ದರು, ಅಲ್ಲದೆ ಧೈರ್ಯ ತುಂಬಿದ್ದರು.

ಮೂರು ದಶಕಗಳ ಹಿಂದೆ ಪಾಕಿಸ್ತಾನ ಕ್ರಿಕೆಟ್​ ತಂಡದ ನಾಯಕನಾಗಿ ಟೀಂನ್ನು ಗೆಲುವಿನತ್ತ ಒಯ್ದಿದ್ದ ಇಮ್ರಾನ್​ ಖಾನ್​, ಇಂದು ಭಾರತ ವಿರುದ್ಧ ಪಾಕ್ ಆಟ ಶುರುಮಾಡುವುದಕ್ಕೂ ಮೊದಲು ಟ್ವೀಟ್ ಮಾಡಿ, ಟಾಸ್​ ಗೆದ್ದರೆ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಳ್ಳಬೇಕು. ಎದುರಾಳಿ ತಂಡ ನೀಡುವ ಗುರಿಯನ್ನು ಚೇಸ್​ ಮಾಡುವುದಕ್ಕಿಂತ ಮೊದಲು ಬ್ಯಾಟ್​ ಮಾಡಿ ಉತ್ತಮ ರನ್​ ಕಲೆ ಹಾಕಿ ಪ್ರತಿಸ್ಪರ್ಧಿಗೆ ಗುರಿ ನೀಡಬೇಕು ಎಂದು ಹೇಳಿದ್ದರು.

ಹಾಗೇ ಸೋತರೂ, ಗೆದ್ದರೂ ಅದನ್ನು ಒಪ್ಪಿಕೊಂಡು ಕ್ರೀಡಾಸ್ಫೂರ್ತಿ ತೋರಿ. ನಮ್ಮೆಲ್ಲರ ಪ್ರಾರ್ಥನೆ ನಿಮ್ಮೊಂದಿಗೆ ಇದೆ. ಶುಭವಾಗಲಿ ಎಂದು ಇಮ್ರಾನ್​ ಖಾನ್​ ಹಾರೈಸಿದ್ದರು.
ಆದರೆ ಪಾಕ್​ ನಾಯಕ ಸರ್ಫರಾಜ್​ ಅಹಮದ್​ ಇಮ್ರಾನ್​ ಖಾನ್​ ಸಲಹೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಮೊದಲು ಟಾಸ್​ಗೆದ್ದರೂ ಅವರೇ ನಿರ್ಧಾರ ಮಾಡಿಕೊಂಡು ಬೌಲಿಂಗ್​​ ಆಯ್ಕೆ ಮಾಡಿಕೊಂಡಿದ್ದರು.

ಸದ್ಯ ಭಾರತ ನೀಡಿರುವ 337 ರನ್​ಗಳ ಗುರಿ ಬೆನ್ನತ್ತಿರುವ ಪಾಕಿಸ್ತಾನ ಸಂಕಷ್ಟದಲ್ಲಿದೆ.

Leave a Reply

Your email address will not be published. Required fields are marked *