ಆನೇಕಲ್​ ತಾಲೂಕಿನ ಕಾಲೇಜಿನಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕಿದ ವಿದ್ಯಾರ್ಥಿಗಳ ಬಂಧನ

ಆನೇಕಲ್​: ಜಮ್ಮುಕಾಶ್ಮೀರದಲ್ಲಿ ಉಗ್ರರಿಂದ ಯೋಧರ ಹತ್ಯೆ ಹಿನ್ನೆಲೆಯಲ್ಲಿ ಸಂಭ್ರಮ ಆಚರಿಸಿದ ಆನೇಕಲ್​ ತಾಲೂಕಿನ ಮರಸೂರಿನ ಸ್ಫೂರ್ತಿ ಕಾಲೇಜು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇಡೀ ಭಾರತ ಯೋಧರ ಸಾವಿಗೆ ಮರುಗುತ್ತಿರುವಾಗ ಇಲ್ಲಿನ ವಿದ್ಯಾರ್ಥಿಗಳು ಪಾಕಿಸ್ತಾನ ಜಿಂದಾಬಾದ್​ ಎಂದು ಘೋಷಣೆ ಹಾಕಿದ್ದಾರೆ. ಇದನ್ನು ಕೇಳಿದ ಉಳಿದ ವಿದ್ಯಾರ್ಥಿಗಳು ಅದನ್ನು ವಿರೋಧಿಸಿದ್ದಾರೆ. ಇದರಿಂದ ಎರಡು ಗುಂಪುಗಳ ನಡುವೆ ಮಾರಾಮಾರಿ ಉಂಟಾಗಿದೆ. ಪಾಕಿಸ್ತಾನಕ್ಕೆ ಜೈಕಾರ ಹಾಕಿದ ಎಲ್ಲರನ್ನೂ ಸೂರ್ಯಸಿಟಿ ಪೊಲೀಸರು ಬಂಧಿಸಿದ್ದಾರೆ.

ಈ ವಿದ್ಯಾರ್ಥಿಗಳೆಲ್ಲ ಜಮ್ಮುಕಾಶ್ಮೀರದಿಂದ ಬಂದು ಇಲ್ಲಿ ಓದುತ್ತಿದ್ದರು ಎಂದು ಮಾಹಿತಿ ಸಿಕ್ಕಿದೆ.

One Reply to “ಆನೇಕಲ್​ ತಾಲೂಕಿನ ಕಾಲೇಜಿನಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕಿದ ವಿದ್ಯಾರ್ಥಿಗಳ ಬಂಧನ”

  1. Such anti nationals should be dealt severly., including those aligarh and JNU students….. Action against these idiots should be a lesson for others…..

Comments are closed.