More

    ದಕ್ಷಿಣ ಕೋರಿಯಾದಲ್ಲಿ ಟೋಪಿ ಕದ್ದು ಸಿಕ್ಕಿಬಿದ್ದ ಪಾಕ್​ ರಾಯಭಾರ ಕಚೇರಿ ಸಿಬ್ಬಂದಿ!

    ಸಿಯೋಲ್​: ಪಾಕಿಸ್ತಾನ ಸದಾ ಒಂದಿಲ್ಲೊಂದು ಸಣ್ಣ ಬುದ್ಧಿ ತೋರಿಸಿ ಸುದ್ದಿಯಲ್ಲಿರುತ್ತದೆ. ಇದೀಗ ಅದೇ ರೀತಿಯ ತಪ್ಪು ಕೆಲಸವೊಂದರಿಂದಾಗಿ ಸುದ್ದಿಯಲ್ಲಿದೆ. ದಕ್ಷಿಣ ಕೋರಿಯಾದ ಪಾಕಿಸ್ತಾನ ರಾಯಭಾರ ಕಚೇರಿಯ ಸಿಬ್ಬಂದಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾರೆ.

    ಯೊಂಗ್ಸಾನ್ ಜಿಲ್ಲೆಯ ಇಟಾವೊನ್ನಲ್ಲಿರುವ ಅಂಗಡಿಯಲ್ಲಿ ಪಾಕಿಸ್ತಾನ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿ ಕಳ್ಳತನ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಒಂದೇ ಅಂಗಡಿಯಲ್ಲಿ ಕಳ್ಳತನ ನಡೆದಿದೆ. 11 ಸಾವಿರ ವೊನ್​ (10 ಡಾಲರ್​) ಬೆಲೆಯ ಟೋಪಿಯನ್ನು ಫೆಬ್ರವರಿ 23ರಂದು ಕಳ್ಳತನ ಮಾಡಲಾಗಿದೆ. ಅದಕ್ಕೂ ಹಿಂದೆ ಜನವರಿ 10ರಂದು ಬೇರೊಬ್ಬ ಸಿಬ್ಬಂದಿ ಅದೇ ಅಂಗಡಿಯಲ್ಲಿ 1,900 ವೊನ್ (1.70 ಡಾಲರ್​) ಮೌಲ್ಯದ ಚಾಕಲೇಟ್ ಸೋಸುವುದನ್ನು ಕದ್ದಿದ್ದಾರೆ.

    ಟೋಪಿ ಕಳುವಾಗಿದ್ದನ್ನು ಕಂಡ ಅಂಗಡಿಯ ಸಿಬ್ಬಂದಿಯೊಬ್ಬ ಪೊಲೀಸರಿಗೆ ದೂರು ನೀಡಿದ್ದಾನೆ. ನಂತರ ತನಿಖೆಗೆ ಇಳಿದ ಪೊಲೀಸರು ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ರಾಯಭಾರ ಕಚೇರಿಯ ಸಿಬ್ಬಂದಿಯೇ ಕಳ್ಳತನ ಮಾಡಿರುವುದು ಕಂಡುಬಂದಿದೆ. ಅದಾದ ನಂತರ ರಾಜತಾಂತ್ರಿಕ ವಿನಾಯಿತಿ ನೀಡಿ, ಪ್ರಕರಣ ದಾಖಲಿಸಿಕೊಳ್ಳದೆಯೇ ಹಾಗೆಯೇ ಕಳುಹಿಸಿರುವುದಾಗಿ ತಿಳಿಸಲಾಗಿದೆ. (ಏಜೆನ್ಸೀಸ್​)

    ಹೆಂಡತಿಯನ್ನು ಆಕೆಯ ಪ್ರಿಯತಮನೊಂದಿಗೆ ಮದುವೆ ಮಾಡಿಸಿದ ಗಂಡ!

    ಬ್ಯಾಟರಾಯನಪುರ ಪೊಲೀಸ್​ ಠಾಣೆಯ ಎಎಸ್​ಐ ಕರೊನಾಗೆ ಬಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts