ಆರ್ಥಿಕ ದುಸ್ಥಿತಿ; ಪಾಕಿಸ್ತಾನದಲ್ಲಿ ಇದೀಗ ಔಷಧಕ್ಕೂ ಹಾಹಾಕಾರ!

ಇಸ್ಲಾಮಾಬಾದ್‌: ಆರ್ಥಿಕ ದುಸ್ಥಿತಿಗೆ ಸಿಲುಕಿರುವ ಪಾಕಿಸ್ತಾನ ದಿನ ಬಳಕೆ ವಸ್ತುಗಳನ್ನು ಜನರಿಗೆ ಒದಗಿಸಲಾಗ ಸ್ಥಿತಿಗೆ ಬಂದಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಬಳಿ ಸಾಲಕ್ಕೆ ಮನವಿ ಮಾಡಿದೆ. ಆದರೆ ಇದೀಗ ವೈದ್ಯಕೀಯ ಕ್ಷೇತ್ರದಲ್ಲೂ ಸಮಸ್ಯೆ ಆರಂಭವಾಗಿದೆ. ಔಷಧಗಳಿಗಾಗಿ ಪಾಕಿಸ್ತಾನ ಬಹುತೇಕ ಹೊರದೇಶಗಳನ್ನೇ ನೆಚ್ಚಿಕೊಂಡಿದ್ದು, ಇದೀಗ ವಿದೇಶಿ ವಿನಿಮಯ ಪ್ರಮಾಣ ಕುಸಿದಿರುವುದರಿಂದ ಔಷಧಗಳನ್ನು ಆಮದು ಮಾಡಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. ಆಮದು ಮಾಡಿಕೊಳ್ಳಲು ವಿದೇಶಿ ವಿನಿಮಯದ ಕೊರತೆ ಇದ್ದರೆ, ಮತ್ತೊಂದೆಡೆ ಅತಿಯಾದ ಬೆಲೆ ಏರಿಕೆಯಿಂದ ದೇಶೀಯವಾಗಿಯೂ ಔಷಧಗಳನ್ನು ತಯಾರಿಸುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ … Continue reading ಆರ್ಥಿಕ ದುಸ್ಥಿತಿ; ಪಾಕಿಸ್ತಾನದಲ್ಲಿ ಇದೀಗ ಔಷಧಕ್ಕೂ ಹಾಹಾಕಾರ!