ರಾಜ್ಯದಲ್ಲಿ ಪಾಕಿಸ್ತಾನದ ನೋಟು ಪತ್ತೆ!; ಪೊಲೀಸರಿಂದ ತನಿಖೆ ಶುರು..

1 Min Read

ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಪಾಕಿಸ್ತಾನದ ನೋಟು ಪತ್ತೆಯಾಗಿದ್ದು ಗ್ರಾಮದಲ್ಲಿ ತೀವ್ರ ಸಂಚಲನವನ್ನು ಮೂಡಿಸಿದೆ. ಈ ಕುರಿತು ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಕರೋಶಿ ಬಸ್ ನಿಲ್ದಾಣದ ರಸ್ತೆಯಲ್ಲಿ ಯುವಕನಿಗೆ ನೋಟೊಂದು ಬಿದ್ದಿರುವುದು ಕಂಡುಬಂದಿದೆ. ಅದು ಪಾಕಿಸ್ತಾನದ ದೇಶದ ನೋಟಾಗಿದ್ದು, ಅದರಲ್ಲಿ ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರ ಭಾವಚಿತ್ರ ಇದೆ. ಉರ್ದು ಭಾಷೆಯ ಅಕ್ಷರಗಳು ಇವೆ.

ಇದು 10 ರೂಪಾಯಿ ನೋಟಾಗಿದ್ದು, ಸಿಕ್ಕ ನೋಟನ್ನು ಯುವಕನು ಚಿಕ್ಕೋಡಿ ಪೊಲೀಸ ಠಾಣೆಗೆ ಒಪ್ಪಿಸಿದ್ದಾ‌ನೆ. ಈ‌ ಕುರಿತು ಚಿಕ್ಕೋಡಿ ಪೊಲೀಸರು ಹಾಗೂ ಗುಪ್ತಚರ ಇಲಾಖೆಯವರು ತನಿಖೆಯನ್ನು ಆರಂಭಿಸಿದ್ದಾರೆ.

ಇಬ್ಬರು ಮಾಜಿ ಸಿಎಂ, ಕುಂ.ವೀ. ಸೇರಿ 61ಕ್ಕೂ ಅಧಿಕ ಸಾಹಿತಿಗಳಿಗೆ ಕೊಲೆ ಬೆದರಿಕೆ!

ಇನ್ನು ಎಲ್ಲರಿಗೂ ಲಭ್ಯ ಕೋವಿಡ್ ಬೂಸ್ಟರ್​ ಡೋಸ್​: ಯಾವತ್ತಿನಿಂದ ಶುರು?

Share This Article