ಕರಾಚಿ: ಸ್ಪಿನ್ನರ್‌ಗಳಾದ ನುಮಾನ್ ಅಲಿ (35ಕ್ಕೆ 5) ಹಾಗೂ ಯಾಸಿರ್ ಷಾ (79ಕ್ಕೆ 4) ಜೋಡಿಯ ಮಾರಕದ ದಾಳಿ ನೆರವಿನಿಂದ ಪಾಕಿಸ್ಥಾನ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದ ಎದುರು 7 ವಿಕೆಟ್ ಜಯ ದಾಖಲಿಸಿತು. ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ಅಂತ್ಯಗೊಂಡ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ 88 ರನ್ ಗೆಲುವಿನ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ 3 ವಿಕೆಟ್ ಕಳೆದುಕೊಂಡು ಈ ಗುರಿ ಮುಟ್ಟಿತು. ಇದರಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ತಂಡ 1-0 ಯಿಂದ ಮುನ್ನಡೆ ಸಾಧಿಸಿತು.
ಇದನ್ನೂ ಓದಿ: ದಕ್ಷಿಣ ಆಫ್ರಿಕಾ ತಂಡದ ವೇಗಿ ಕಗಿಸೋ ರಬಾಡ ತ್ರಿವಳಿ ದಾಖಲೆಗಳ ಒಡೆಯ..!,
ಇದಕ್ಕೂ ಮೊದಲು 4 ವಿಕೆಟ್‌ಗೆ 187 ರನ್‌ಗಳಿಂದ ದಿನದಾಟದ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ಎರಡನೇ ಇನಿಂಗ್ಸ್‌ನಲ್ಲಿ 245 ರನ್‌ಗಳಿಗೆ ಸರ್ವಪತನ ಕಂಡಿತು. ಬಳಿಕ ಅಲ್ಪಮೊತ್ತ ಗೆಲುವಿನ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಆರಂಭದಲ್ಲೇ ಇಮ್ರಾನ್ ಭಟ್ (12) ಹಾಗೂ ಅಬಿದ್ ಅಲಿ (10) ಜೋಡಿ ಅನ್ರಿಚ್ ನೋರ್ಜೆಗೆ ವಿಕೆಟ್ ಒಪ್ಪಿಸಿತು. ಬಳಿಕ 3ನೇ ವಿಕೆಟ್‌ಗೆ ಅಜರ್ ಅಲಿ (31*) ಹಾಗೂ ಬಾಬರ್ ಅಜಮ್ (30) ಜೋಡಿ 63 ರನ್ ಜತೆಯಾಟವಾಡಿ ತಂಡದ ಗೆಲುವನ್ನು ಸುಲಭವಾಗಿಸಿತು. ಗೆಲುವಿನಂಚಿನಲ್ಲಿ ಬಾಬರ್ ಅಜಮ್, ಕೇಶವ್ ಮಹರಾಜ್ ಎಸೆತದಲ್ಲಿ ಎಲ್‌ಬಿಯಾದರು. ದಕ್ಷಿಣ ಆಫ್ರಿಕಾ ತಂಡ ಮೊದಲ ಇನಿಂಗ್ಸ್ 220 ರನ್‌ಗಳಿಸಿದರೆ, ಪಾಕಿಸ್ತಾನ ತಂಡ 378 ರನ್ ಪೇರಿಸಿ 158 ರನ್ ಮುನ್ನಡೆ ಸಾಧಿಸಿತ್ತು. 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಫೆಬ್ರವರಿ 4 ರಿಂದ ರಾವಲ್ಪಿಂಡಿಯಲ್ಲಿ ಆರಂಭಗೊಳ್ಳಲಿದೆ.
ಇದನ್ನೂ ಓದಿ: ಹಸೆಮಣೆಗೇರಿದ ಟೀಮ್ ಇಂಡಿಯಾ ಆಲ್ರೌಂಡರ್ ವಿಜಯ್ ಶಂಕರ್
ದಕ್ಷಿಣ ಆಫ್ರಿಕಾ: 220 ಮತ್ತು 245 (ತೆಂಬಾ ಬವುಮಾ 40, ನುಮಾನ್ ಅಲಿ 35ಕ್ಕೆ 5, ಯಾಸಿರ್ ಷಾ 79ಕ್ಕೆ 4), ಪಾಕಿಸ್ತಾನ : 378 ಮತ್ತು 3 ವಿಕೆಟ್‌ಗೆ 90 (ಅಜರ್ ಅಲಿ 31*, ಬಾಬರ್ ಅಜಮ್ 30*, ಅನ್ರಿಚ್ ನೋರ್ಜೆ 24ಕ್ಕೆ 2).
— Pakistan Cricket (@TheRealPCB) January 29, 2021
PAKISTAN WIN!!!#PAKvSA Scorecard: https://t.co/RMc0Lq3NOy#HarHaalMainCricket | #BackTheBoysInGreen pic.twitter.com/sWQgNUN6X5
— Pakistan Cricket (@TheRealPCB) January 29, 2021