Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಏಷ್ಯಾ ಕಪ್​ 2018: ಸಾಂಪ್ರದಾಯಿಕ ಎದುರಾಳಿ ಪಾಕ್​ ವಿರುದ್ಧ ಗೆದ್ದು ಬೀಗಿದ ಭಾರತ

Wednesday, 19.09.2018, 10:18 PM       No Comments

11.01 PM, ದುಬೈ: ಕಳೆದ ಒಂದು ವರ್ಷದ ನಂತರ ಮೊದಲ ಬಾರಿಗೆ ಏಷ್ಯಾ ಕಪ್​ ಟೂರ್ನಿಯ ಲೀಗ್​ ಪಂದ್ಯದಲ್ಲಿ ಮುಖಾಮುಖಿಯಾದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿಯುವ ಮೂಲಕ ಟೀಂ ಇಂಡಿಯಾ ಏಷ್ಯಾ ಕಪ್​ ಟೂರ್ನಿಯಲ್ಲಿ ಗೆಲುವಿನ ನಾಗಲೋಟವನ್ನು ಮುಂದುವರಿಸಿದೆ.

ಪಾಕ್​ ನೀಡಿದ್ದ 162 ರನ್ ಗುರಿಯನ್ನು ಬೆನ್ನತ್ತಿದ ಟೀಂ ಇಂಡಿಯಾ ಕೇವಲ 29 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 164 ರನ್​ ಗಳಿಸುವ ಮೂಲಕ ಪಾಕ್​ ವಿರುದ್ಧ ವಿಜಯ ಪತಾಕೆ ಹಾರಿಸಿತು. ತಂಡದ ಪರ ನಾಯಕನ ಜವಬ್ದಾರಿಯುತ ಆಟವಾಡಿದ ರೋಹಿತ್​ ಶರ್ಮಾ(52) ರನ್​ ಗಳಿಸಿದರೆ, ಕಳೆದ ಹಾಂಕಾಂಗ್​ ಪಂದ್ಯದ ಹೀರೋ ಶಿಖರ್​ ಧವನ್​(46) ರನ್​ ಗಳಿಸಿ ತಂಡಕ್ಕೆ ನೆರವಾದರು.​ ಉಳಿದಂತೆ ದಿನೇಶ್​ ಕಾರ್ತಿಕ್​​(31*) ಹಾಗೂ ಅಂಬಾಟಿ ರಾಯುಡು (31*) ರನ್​ ಗಳಿಸಿ ಅಜೇಯರಾಗಿ ಉಳಿಯುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಪಾಕ್​ ಪರ ಫಹೀಮ್ ಅಶ್ರಫ್ ಹಾಗೂ ಶದಾಬ್ ಖಾನ್ ತಲಾ ಒಂದು ವಿಕೆಟ್​ ಪಡೆದನ್ನು ಬಿಟ್ಟರೆ, ಉಳಿದ ಯಾವೊಬ್ಬ ಬೌಲರ್​ ಸಮರ್ಥ ನಿರ್ವಹಣೆ ತೋರಲಿಲ್ಲ.

ಇದಕ್ಕೂ ಮುನ್ನ ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಪಾಕ್​ ತಂಡ 43.1 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 162 ರನ್​ ಗಳಿಸಲಷ್ಟೇ ಶಕ್ತವಾಯಿತು. ಪ್ರಮುಖ ಬ್ಯಾಟ್ಸ್​​ಮನ್​ಗಳ ವೈಫಲ್ಯದಿಂದ ಪಾಕ್​ ತಂಡ ನಿರೀಕ್ಷಿತ ಗುರಿಯನ್ನು ನೀಡುವಲ್ಲಿ ವಿಫಲವಾಯಿತು. ಟೀಂ ಇಂಡಿಯಾದ ಬೌಲರ್​ಗಳ ಮೊನೆಚಾದ ದಾಳಿಗೆ ಪಾಕ್​ ಬ್ಯಾಟ್ಸ್​ಮನ್​ಗಳು ನಲುಗಿದರು. ಪಾಕ್​ ಪರ ಜಮಾನ್ (0), ಇಮಾಮ್ (2), ಬಬರ್ ಅಜಾಮ್ (47), ಶೋಯಬ್ ಮಲ್ಲಿಕ್ (43), ಸರ್ಫರಾಜ್​ (6), ಆಸಿಫ್ ಅಲಿ (9), ಅಮೀರ್ (18), ಶದಾಬ್ ಖಾನ್ (8), ಫಹೀಂ ಅಶ್ರಫ್ (21), ಉಸ್ಮಾನ್ ಖಾನ್ (0) ಹಾಗೂ ಹಸನ್ ಅಲಿ 1 ರನ್ ಗಳಿಸಿದರು.

ಪಾಕ್​ ತಂಡದ ಬ್ಯಾಟ್ಸ್​ಮನ್​ಗಳ ಎಡೆಮುರಿ ಕಟ್ಟಿದ ಟೀಂ ಇಂಡಿಯಾ ಬೌಲರ್​ಗಳಾದ ಭುವನೇಶ್ವರ್​ ಹಾಗೂ ಜಾಧವ್​ಗೆ ತಲಾ 3 ವಿಕೆಟ್ ಪಡೆದರೆ,​ ಜಸ್ಪ್ರೀತ್​​ ಬುಮ್ರಾ 2 ಹಾಗೂ ಕುಲದೀಪ್​ ಯಾದವ್​ 1 ವಿಕೆಟ್ ಪಡೆದರು.​

10.18 PM, ದುಬೈ: 16 ಓವರ್​ಗಳಲ್ಲಿ ಭಾರತ ತಂಡ 100 ರನ್​ ಗಳಿಸುವಲ್ಲಿ ಯಶಸ್ವಿಯಾಗಿದೆ. ಇನ್ನುಳಿದ 34 ಓವರ್​ಗಳು ಮತ್ತು 8 ವಿಕೆಟ್​ಗಳೊಂದಿಗೆ ಭಾರತ 63 ರನ್​ಗಳನ್ನಷ್ಟೇ ಗಳಿಸಬೇಕಿದೆ. ರೋಹಿತ್​ ಶರ್ಮಾ ವಿಕೆಟ್​ ಬೀಳುತ್ತಲೇ ಮತ್ತೊಂದು ವಿಕೆಟ್​ ಪತನವಾಯಿತು. 46 ರನ್​ ಬಾರಿಸಿ ಆಡುತ್ತಿದ್ದ ಶಿಖರ್​ ಧವನ್​ ಫಾಹಿಮ್​ ಅಶ್ರಮ್​ ಬೌಲಿಂಗ್​ನಲ್ಲಿ ಕ್ಯಾಚಿತ್ತು ಔಟಾದರು. ಸದ್ಯ 18.1 ಓವರ್​ಗಳಲ್ಲಿ ಭಾರತ 115 ರನ್​ ಗಳಿಸಿ ಆಡುತ್ತಿದೆ.

10.06 PM, ದುಬೈ: ಪಾಕಿಸ್ತಾನ ನೀಡಿದ 162 ರನ್​ಗಳನ್ನು ಬೆನ್ನಹತ್ತಿದ್ದ ಭಾರತ ತಂಡ ನಾಯಕ ರೋಹಿತ್​ ಶರ್ಮಾ ಅವರ ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದೆ. 13ನೇ ಓವರ್​ನಲ್ಲಿ ಅವರು ಶದಬ್​ ಖಾನ್​ಗೆ ಬೌಲ್ಡ್​ ಆದರು. ಸದ್ಯ ಭಾರತ 14.4 ಓವರ್​ಗಳಲ್ಲಿ ಒಂದು ವಿಕೆಟ್​ ನಷ್ಟಕ್ಕೆ 97 ರನ್​ ಗಳಿಸಿದೆ.


9.40 PM, ದುಬೈ: ಪಾಕಿಸ್ತಾನ ತಂಡ ನೀಡಿದ 162 ರನ್​ಗಳ ಸಾಧಾರಣ ಮೊತ್ತ ಬೆನ್ನಟ್ಟಿರುವ ಟೀಂ ಇಂಡಿಯಾ ಉತ್ತಮ ಆರಂಭ ಪಡೆದುಕೊಂಡಿದೆ. ಭಾರತದ ಆರಂಭಿಕ ಬ್ಯಾಟ್ಸ್​ಮನ್​ಗಳಾದ ನಾಯಕ ರೋಹಿತ್​ ಶರ್ಮಾ ಮತ್ತು ಶಿಖರ್​ ಧವನ್​ ಸಂಯಮದ ಆಟ ಪ್ರದರ್ಶಿಸುತ್ತಿದ್ದಾರೆ. ಹೀಗಾಗಿ ಭಾರತ  12 ಓವರ್​ಗಳಲ್ಲಿ ವಿಕೆಟ್​ ನಷ್ಟವಿಲ್ಲದೇ 73 ರನ್​ ಗಳಿಸಿದೆ.


8.06 PM, ದುಬೈ: ಭಾರತ ಮೊನಚು ಬೌಲಿಂಗ್​ ದಾಳಿಗೆ ನಲುಗಿದ ಪಾಕಿಸ್ತಾನ ತಂಡ 43.1 ಓವರ್​ಗಳಲ್ಲಿ ಸರ್ವ ಪತನ ಕಂಡು ಕೇವಲ 162 ರನ್​ಗಳನಷ್ಟೇ ಗಳಿಸಿದೆ.

ಬೌಲಿಂಗ್​ನಲ್ಲಿ ಭಾರತ ಪರ ಭುವನೇಶ್ವರ್ ಕುಮಾರ್​, ಕೇದಾರ್​ ಜಾದವ್​ 3, ಬೂಮ್ರಾ 2,  ಕುಲದೀಪ್​ ಯಾದವ್​ 1 ವಿಕೆಟ್​ ಕಬಳಿಸಿದ್ದಾರೆ.


6.55 PM, ದುಬೈ: 9 ರನ್​ ಗಳಿಸಿ ಆಡುತ್ತಿದ್ದ ಆಸಿಫ್​ ಅಲಿ  ಕೇದಾರ್​ ಜಾದವ್​ ಅವರ ಬೌಲಿಂಗ್​ನಲ್ಲಿ ಕೀಪರ್​ ಧೋನಿಗೆ ಕ್ಯಾಚಿತ್ತು  ಔಟಾಗಿದ್ದಾರೆ.


6.55 PM, ದುಬೈ: 43 ರನ್​ ಗಳಿಸಿ ನಿಧಾನಗತಿಯಲ್ಲಿ ಆಡುತ್ತಿದ್ದ ಶೋಯಬ್​ ಮಲೀಕ್​ ಅವರು ರನ್​ಔಟ್​ಗೆ ಬಲಿಯಾಗಿದ್ದಾರೆ.


6.55 PM, ದುಬೈ: ಏಷ್ಯಾಕಪ್​ ಲೀಗ್​ ಹಂತದ ಪಂದ್ಯದಲ್ಲಿ ಭಾರತ ವಿರುದ್ಧ ಬ್ಯಾಟಿಂಗ್ ಮಾಡುತ್ತಿರುವ ಪಾಕಿಸ್ತಾನ ತಂಡ 26 ಓವರ್​ಗಳಲ್ಲಿ ತನ್ನ ಪ್ರಮುಖ 4 ವಿಕೆಟ್​ಗಳನ್ನು ಕಳೆದುಕೊಂಡು 100 ರನ್​ ಗಳಿಸಿದೆ. ಪಾಕಿಸ್ತಾನದ ಪರ ಶೋಯಬ್​ ಮಲೀಕ್​ ಅವರು ಸಮಯೋಚಿತ ಆಟ ಪ್ರದರ್ಶಿಸುತ್ತಿದ್ದಾರೆ. 43 (67) ರನ್​ ಗಳಿಸಿ ಅವರು ಆಟವಾಡುತ್ತಿದ್ದಾರೆ.


5.23 PM, ದುಬೈ: ಕೇವಲ ಮೂರು ರನ್​ಗಳಿಗೆ ಪಾಕಿಸ್ತಾನ ತನ್ನ ಎರಡು ವಿಕೆಟ್​ ಕಳೆದುಕೊಂಡಿದೆ. 9 ಬಾಲ್​​ಗಳನ್ನು ಎದುರಿಸಿದ  ಫಾಕರ್​ ಜಮಾನ್​ ಒಂದೂ ರನ್​ ಗಳಿಸದೇ ಔಟಾದರು. ಈ ಮೂಲಕ ಪಾಕಿಸ್ತಾನ ಐದು ಓವರ್​ ಪೂರ್ಣಗೊಳಿಸುವುದಕ್ಕೂ ಮೊದಲೇ ಕನಿಷ್ಠ ರನ್​ಗಳಿಗೆ ತನ್ನ ಪ್ರಮುಖ ಎರಡು ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಠಕ್ಕೆ ಸಿಲುಕಿದೆ.


5.15 PM , ದುಬೈ:  ಭಾರತದ ವಿರುದ್ಧ ಟಾಸ್​ ಗೆದ್ದ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿರುವ ಪಾಕಿಸ್ತಾನ ಆರಂಭಿಕ ಆಘಾತ ಅನುಭವಿಸಿದೆ. ಕೇವಲ ಮೂರು ರನ್​ಗಳಿಗೆ ತನ್ನ ಮೊದಲ ವಿಕೆಟ್​ ಕಳೆದುಕೊಂಡಿದೆ. ಏಳು ಬಾಲುಗಳನ್ನು ಎದುರಿಸಿದ ಇಮಾಮ್​ ಉಲ್​ ಹಕ್​ ಅವರು ಕೇವಲ ಎರಡು ರನ್​ ಗಳಿಸಿ ಕೀಪರ್​ ಕ್ಯಾಚಿತ್ತು ಔಟಾಗಿದ್ದಾರೆ. (3/1 * – 2.5/50)

 


ಇಂಡೋ ಪಾಕ್​ ಕದನ: ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಪಾಕಿಸ್ತಾನ ತಂಡ

ದುಬೈ: 15 ತಿಂಗಳ ಹಿಂದೆ ಓವಲ್ ಕ್ರೀಡಾಂಗಣದಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್​ನಲ್ಲಿ ಕೊನೆಯ ಬಾರಿಗೆ ಎದುರಾಗಿದ್ದ ಭಾರತ ಹಾಗೂ ಪಾಕಿಸ್ತಾನ ತಂಡಗಳು, 14ನೇ ಆವೃತ್ತಿಯ ಏಷ್ಯಾಕಪ್ ಏಕದಿನ ಟೂರ್ನಿಯ ಲೀಗ್ ಹಂತದ ಪಂದ್ಯದಲ್ಲಿ ಇಂದು (ಬುಧವಾರ) ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್​ ಗೆದ್ದಿರುವ ಪಾಕಿಸ್ತಾನ ತಂಡ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ.

ಇದು ಉಭಯ ತಂಡಗಳ ನಡುವಿನ 130ನೇ ಮುಖಾಮುಖಿ. ಕಳೆದ ಒಂದು ವರ್ಷದಲ್ಲಿಯೇ ಇದೇ ಮೊದಲ ಬಾರಿಗೆ ಸಾಂಪ್ರದಾಯಿಕ ಎದುರಾಳಿಗಳ ನಡುವೆ ನಡೆಯುತ್ತಿರುವ ಈ ಪಂದ್ಯ ಸಹಜವಾಗಿಯೇ ವಿಶ್ವದ ಗಮನ ಸೆಳೆದಿದೆ. ಇನ್ನು ಭಾರತವೂ ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ಉಮೇದಿನಲ್ಲಿದೆ. 2017ರ ಜೂನ್​ 18ರಂದು ಓವೆಲ್​ನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಫೈನಲ್​ನಲ್ಲಿ ಭಾರತ ಪಾಕಿಸ್ತಾನದ ಎದುರು ಹೀನಾಯ ಸೋಲುಂಡಿತ್ತು. ಪಾಕಿಸ್ತಾನ ಬರೋಬ್ಬರಿ 180 ರನ್​ಗಳ ದಿಗ್ವಿಜಯ ಸಾಧಿಸಿತ್ತು. ಇಂದಿನ ಈ ಪಂದ್ಯವನ್ನು ಗೆಲ್ಲವು ಮೂಲಕ ಭಾರತ ಒಂದೂವರೆ ವರ್ಷಗಳ ಹಿಂದಿನ ಮುಖಭಂಗದಿಂದ ಹೊರಬರಲು ಕಾದಿದೆ.

ಇನ್ನು ಈ ಹಿಂದಿನ ಅಂಕಿ ಸಂಖ್ಯೆಗಳನ್ನು ನೋಡಿದರೆ, ಏಷ್ಯಾಕಪ್​ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು 12 ಬಾರಿ ಎದುರಾಗಿವೆ. ಭಾರತ 6ರಲ್ಲಿ ಗೆದ್ದಿದ್ದರೆ (5 ಏಕದಿನ, 1 ಟಿ20), ಪಾಕಿಸ್ತಾನ 5 ಬಾರಿ ಜಯಿಸಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ರದ್ದಾಗಿದೆ.

ಪಂದ್ಯ ವೀಕ್ಷಿಸಲಿದ್ದಾರೆ ಇಮ್ರಾನ್ ಖಾನ್

ಪಾಕಿಸ್ತಾನದ ನೂತನ ಪ್ರಧಾನಿ, ಸ್ವತಃ ಕ್ರಿಕೆಟರ್​ ಕೂಡ ಆಗಿದ್ದ, ವಿಶ್ವಕಪ್ ವಿಜೇತ ತಂಡದ ನಾಯಕ ಇಮ್ರಾನ್ ಖಾನ್ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ವೀಕ್ಷಿಸಲು ದುಬೈಗೆ ಆಗಮಿಸಿದ್ದಾರೆ.

ಟಿಕೆಟ್ ಸಂಪೂರ್ಣ ಮಾರಾಟ

ಏಷ್ಯಾಕಪ್​ನ ಈವರೆಗಿನ ಯಾವ ಪಂದ್ಯಗಳ ಟಿಕೆಟ್​ಗಳೂ ಸಂಪೂರ್ಣ ಮಾರಾಟವಾಗಿಲ್ಲ. ಆದರೆ, ಭಾರತ-ಪಾಕ್ ಪಂದ್ಯದ ಎಲ್ಲ ಟಿಕೆಟ್​ಗಳು ಸಂಪೂರ್ಣ ಮಾರಾಟವಾಗಿವೆ ಎಂದು ಎಸಿಸಿ ತಿಳಿಸಿದೆ. ಟಿಕೆಟ್ ಖರೀದಿಸದ ವ್ಯಕ್ತಿಗಳು, ಸ್ಟೇಡಿಯಂಗೆ ಬರುವ ಅಗತ್ಯವಿಲ್ಲ ಎಂದು ಮಾಹಿತಿ ನೀಡಿದೆ.

 

Leave a Reply

Your email address will not be published. Required fields are marked *

Back To Top